ಎಂತಾ ಹುಚ್ಚು ಇದು?? ಮ್ಯಾಗಿಗೆ ವಿಮಲ್ ಪಾನ್ ಮಸಾಲ ಹಾಕ್ಕೊಂಡ ಯುವಕ: ವಿಲಕ್ಷಣ ದೃಶ್ಯ ವೈರಲ್

Written by Soma Shekar

Published on:

---Join Our Channel---

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳಬೇಕು ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರ ಆಸೆ ಮತ್ತು ಆಸಕ್ತಿಯಾಗಿದೆ. ಆದ್ದರಿಂದಲೇ ಏನಾದರೂ ಮಾಡಿ ಜನಪ್ರಿಯತೆ ಪಡೆಯಬೇಕು ಎನ್ನುವ ಹುಮ್ಮಸ್ಸಿನಲ್ಲಿ, ಏನಾದರೊಂದು ಹೊಸತನವನ್ನು ಪ್ರದರ್ಶನ ಮಾಡಬೇಕೆನ್ನುವ ಆಲೋಚನೆಯಲ್ಲಿ ಕೆಲವೊಮ್ಮೆ ಕೆಲವರು ವಿಲಕ್ಷಣ ಎನಿಸುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹೊಸ ಹೊಸ ಅ ಪಾ ಯಕಾರಿ ಸ್ಟಂಟ್ ಗಳನ್ನು ಮಾಡಲು ಮುಂದಾಗುತ್ತಾರೆ. ಹಾಸ್ಯದ ಹೊನಲು ಹರಿಸುವ ಮೂಲಕ ಗಮನಸೆಳೆಯಲು ಕೆಲವರು ಪ್ರಯತ್ನ ಪಡುತ್ತಾರೆ.

ಆದರೆ ಕೆಲವರು ಮಾತ್ರ ವಿಭಿನ್ನವಾಗಿ ಏನಾದರೂ ಮಾಡಬೇಕು ಎನ್ನುವ ಧಾವಂತದಲ್ಲಿ ಮಾಡುವ ಕೆಲಸಗಳು ವಿಚಿತ್ರ ಎನಿಸುತ್ತದೆ. ಈಗ ಇಂತಹದೇ ಒಂದು ಸನ್ನಿವೇಶದಲ್ಲಿ ಯುವಕನೊಬ್ಬ ಒಂದು ವಿಚಿತ್ರವಾದ ಕೆಲಸವನ್ನು ಮಾಡಿದ್ದನೆ. ಆತನ ಈ ವಿಲಕ್ಷಣವಾದ ಪ್ರಯತ್ನ ಖಂಡಿತ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ. ಅಲ್ಲದೇ ಆತ ಮಾಡಿರುವ ಕೆಲಸವನ್ನು ನೋಡಿದ ಅನೇಕ ಮಂದಿ ನೆಟ್ಟಿಗರು ಅಂತಹ ಪ್ರಯತ್ನವನ್ನು ಮಾಡುವುದು ಖಂಡಿತ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಆದರೆ ಇಲ್ಲಿ ಆ ಯುವಕ ಕೇವಲ ಜನರಿಗೆ ಮನರಂಜನೆಯನ್ನು ನೀಡುವ ಉದ್ದೇಶದಿಂದ ಮತ್ತು ಹಾಸ್ಯವನ್ನು ಅರಳಿಸಲು ಅಂತಹದೊಂದು ಪ್ರಯತ್ನವನ್ನು ಮಾಡಿದ್ದಾನೆ ಎಂಬುದನ್ನು ಅರ್ಥಮಾಡಿಕೊಂಡ ನೆಟ್ಟಿಗರು ನಕ್ಕು ಸುಮ್ಮನಾಗಿದ್ದಾರೆ. ಆದರೆ ಕೆಲವರು ಯುವಕನ ಪ್ರಯತ್ನವನ್ನು ಟೀಕಿಸಿದ್ದಾರೆ. ಹಾಗಾದರೆ ಇಷ್ಟಕ್ಕೂ ಯುವಕ ಮಾಡಿದ್ದಾದರೂ ಏನು? ಎನ್ನುವ ವಿಚಾರಕ್ಕೆ ಬರೋಣ.

ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅದರ ಶೀರ್ಷಿಕೆಯಲ್ಲಿ “ದಾನೆ ದಾನೆ ಮೇ ಕೆಸರ್ ಕಾ ದಮ್” ( ಪ್ರತಿ ಕಾಳಿನಲ್ಲಿಯೂ ಕೇಸರ್ ನ ದಮ್ ) ಎಂದು ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿದ್ದಾರೆ. ವೀಡಿಯೋದಲ್ಲಿ ಒಬ್ಬ ಯುವಕ ಮ್ಯಾಗಿ ತಿನ್ನುವ ಮೊದಲು ಅದಕ್ಕೆ ವಿಮಲ್ ಪಾನ್ ಮಸಾಲ ಹಾಕಿ, ಅದನ್ನು ಮ್ಯಾಗಿಯೊಂದಿಗೆ ಮಿಕ್ಸ್ ಮಾಡಿ, ಬೈಕ್ ಮೇಲೆ ಕುಳಿತು ಪಾನ್ ಮಸಾಲ ಬೆರೆಸಿದ ಮ್ಯಾಗಿಯನ್ನು ಬಹಳ ಇಷ್ಟ ಪಟ್ಟು ತಿನ್ನುವುದನ್ನು ನಾವು ನೋಡಬಹುದು.

https://www.instagram.com/reel/CeD_c8aMnc9/?igshid=MDJmNzVkMjY=

ಇನ್ಸ್ಟಾಗ್ರಾಮ್ ರೀಲ್ ನಲ್ಲಿ ವೈರಲ್ ಆದ ಈ ವೀಡಿಯೋವನ್ನು ಈಗಾಗಲೇ ಮೂರು ಮಿಲಿಯನ್ ಗಿಂತಲೂ ಅಧಿಕ ಮಂದಿ ನೆಟ್ಟಿಗರು ವೀಕ್ಷಿಸಿದ್ದಾರೆ.71 ಸಾವಿರಕ್ಕಿಂತಲೂ ಅಧಿಕ ಜನರು ಲೈಕ್ ನೀಡಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಮಂದಿ ಇದು ಕೇವಲ ಹಾಸ್ಯದ ದೃಷ್ಟಿಯಿಂದ ಮಾಡಿರುವುದು ಎನ್ನುವ ಕಾರಣಕ್ಕೆ ನಕ್ಕು ಸುಮ್ಮನಾದರೆ, ಮತ್ತೆ ಕೆಲವರು ಹಾಸ್ಯವೇ ಆದರೂ ಸರಿ ಪಾನ್ ಮಸಾಲಾ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಹ ಪ್ರಯತ್ನಗಳನ್ನು ಮಾಡಬೇಡಿ ಎನ್ನುವ ಸಲಹೆಗಳನ್ನು ನೀಡಿದ್ದಾರೆ.

Leave a Comment