ಎಂತಾ ಮರೆವು ಇದು!! ಕಂಕುಳಲ್ಲಿ ಇದ್ದ ಮಗುವನ್ನೇ ಮರೆತು ಮನೆಯೆಲ್ಲಾ ಹುಡುಕಾಡಿದ ಮಹಿಳೆ

Entertainment Featured-Articles News Viral Video

ಕೆಲವೊಮ್ಮೆ ನಾವು ನಮ್ಮ ಕೈಯಲ್ಲೇ ಇರುವ ವಸ್ತುವನ್ನೇ ಮರೆತು ಮನೆಯೆಲ್ಲಾ ಹುಡುಕಾಡಿ, ಅನಂತರ ಕೈಯಲ್ಲೇ ಇರುವ ವಸ್ತುವನ್ನು ನೋಡಿ ಅರೆ!! ಕೈಯಲ್ಲೇ ಇರೋದನ್ನು ಮನೆಯೆಲ್ಲಾ ಹುಡುಕಿ ಬಿಟ್ಟೆವಲ್ಲಾ ಎಂದು, ನಮ್ಮ ಮರೆವಿನ ವಿಷಯಕ್ಕೆ ನಾವೇ ನಗುವಂತಾಗುತ್ತದೆ. ಕೆಲವು ಸಲ ಕೈಯಲ್ಲಿ ಇರುವ ಮೊಬೈಲ್ ನ ವಿಷಯದಲ್ಲೂ ನಮಗೆ ಇಂತಹ ಅನುಭವವಾಗಿರುತ್ತದೆ. ಇನ್ನೂ ಕೆಲವರು ಕನ್ನಡಕವನ್ನು ತಲೆಗೆ ಏರಿಸಿಕೊಂಡು, ಅನಂತರ ಮರೆತು ಕನ್ನಡಕ ಎಲ್ಲಿದೆ ಎಂದು ಹುಡುಕುವುದನ್ನು ನಾವು ನೋಡಿರುತ್ತೇವೆ. ಇದೆಲ್ಲಾ ನಿರ್ಜೀವ ವಸ್ತುಗಳ ವಿಷಯವಾಗಿದೆ‌.

ಇದೆಲ್ಲವುಗಳಿಗಿಂತ ಭಿನ್ನವಾಗಿ ಎತ್ತಿಕೊಂಡು ಆಡಿಸುತ್ತಿದ್ದ ಮಗುವನ್ನೇ ಮರೆತು ತಾಯಿ, ಮಗು ಎಲ್ಲಿದೆ ? ಎಂದು ಮನೆ ಎಲ್ಲಾ ಹುಡುಕುವುದನ್ನು ನೀವು ಯಾವಾಗಲಾದರೂ, ಎಲ್ಲಾದರೂ ನೋಡಿರುವಿರಾ ? ಇಲ್ಲ ಎನ್ನುವುದಾದರೆ ನಾವು ಇಂದು ಹೇಳಲು ಹೊರಟಿರುವುದು ಅಂತಹುದೇ ಒಂದು ಅಚ್ಚರಿಯ ವಿಷಯವಾಗಿದೆ. ಹೌದು, ಇಲ್ಲೊಬ್ಬ ಮಹಿಳೆಯು ಮೊಬೈಲ್ ನಲ್ಲಿ ಮುಳುಗಿ ಹೋಗಿ, ತನ್ನ ಕಂಕುಳಲ್ಲೇ ಇದ್ದ ಮಗುವನ್ನು ಮರೆತಿದ್ದಾರೆ. ಮನೆಯೆಲ್ಲಾ ಹುಡುಕುತ್ತಿದ್ದಾರೆ.

ವೈರಲ್ ವೀಡಿಯೋದಲ್ಲಿ ನಾವು ನೋಡಿದಾಗ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಕುಳಿತಿದ್ದು, ಮೊಬೈಲ್ ನಲ್ಲಿ ಏನೋ ಮಾಡುತ್ತಾ, ತೊಟ್ಟಿಲನ್ನು ಕಾಲಿನಿಂದ ಆಡಿಸುತ್ತಾ, ತೊಟ್ಟಿಲಿನ ಕಡೆ ನೋಡುತ್ತಾರೆ.. ತೊಟ್ಟಿಲಿನಲ್ಲಿ ಮಗು ಕಾಣದೇ ಇರುವುದನ್ನು ನೋಡಿ, ಗಾಬರಿಯಿಂದ ಮೇಲೇಳುವ ಮಹಿಳೆಯು ಕಂಕುಳಲ್ಲಿ ಎತ್ತಿಕೊಂಡಿರುವ ಮಗುವನ್ನೇ ಮರೆತು, ಮಗು ಎಲ್ಲಿ ಹೋಯಿತೆಂದು, ಮನೆ ಎಲ್ಲಾ ಹುಡುಕಾಟ ನಡೆಸಿದ್ದಾರೆ ಆ ತಾಯಿ.

ಅನಂತರ ಆಕೆಗೆ ಮಗು ತನ್ನ ಬಳಿಯೇ ಇರುವುದರ ಅರಿವಾಗಿ, ಸಮಾಧಾನದ ನಿಟ್ಟುಸಿರು ಬಿಡುತ್ತಾರೆ ಹಾಗೂ ಮಗುವನ್ನು ಪ್ರೀತಿಯಿಂದ ಮುದ್ದಾಡುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಶೀರ್ಷಿಕೆಯಲ್ಲಿ, “ಇಲ್ಲಿವರೆಗೆ ಕನ್ನಡಕ, ಕರವಸ್ತ್ರ, ಪರ್ಸ್, ಕೀ ಗಳನ್ನು ಮರೆಯುತ್ತಿದ್ದರು, ಆದರೆ ಈಗ ಮೊಬೈಲ್ ಮೋಡಿಯಲ್ಲಿ ಮಗುವನ್ನೇ ಮರೆತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published.