ತಾವು ಬಹಳ ಪ್ರೀತಿಸುವವರಿಗಾಗಿ ಬಹಳಷ್ಟು ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿವುದಕ್ಕಾಗಿ ತಮ್ಮ ಪ್ರೀತಿಪಾತ್ರರಿಗೆ ಬಹಳ ವಿಶೇಷವೆನಿಸುವ ಉಡುಗೊರೆಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ತಾವು ಇಷ್ಟ ಪಟ್ಟವರ ಮನಸ್ಸನ್ನು ಸಂತೋಷಪಡಿಸಲು ನೀಡುವ ಇಂತಹ ವಿಶೇಷ ಉಡುಗೊರೆಗಳು ಕೆಲವೊಮ್ಮೆ ಬಹಳ ವಿಸ್ಮಯವನ್ನು ಹುಟ್ಟು ಹಾಕುತ್ತವೆ. ಇದೀಗ ವ್ಯಕ್ತಿಯೊಬ್ಬರು, ತನಗೆ ತನ್ನ ಪತ್ನಿಯ ಮೇಲೆ ಇರುವ ಪ್ರೀತಿ ಎಂತದ್ದು ಎಂಬುದನ್ನು ವ್ಯಕ್ತಪಡಿಸುವುದಕ್ಕಾಗಿ, ಪ್ರೀತಿಯ ಮಡದಿಗೆ ತಾಜ್ ಮಹಲ್ ರೀತಿಯಲ್ಲಿಯೇ ಮನೆಯನ್ನು ಕಟ್ಟಿ ಸಿ ಅದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇತಿಹಾಸದಲ್ಲಿ ಮೊಘಲ್ ದೊರೆ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್ ನಿಧನದ ನಂತರ, ಆಕೆಯ ಸ್ಮರಣಾರ್ಥವಾಗಿ ತಾಜ್ ಮಹಲ್ ಎನ್ನುವ ಅಂದವಾದ, ವಿಶ್ವದ ಅದ್ಭುತಗಳಲ್ಲಿ ಒಂದಾದ ಭವನವನ್ನು ನಿರ್ಮಾಣ ಮಾಡಿ ಇತಿಹಾಸವನ್ನು ಸೃಷ್ಟಿಸಿದ್ದ. ಈಗ ಇದೇ ರೀತಿಯಲ್ಲಿ ಮಧ್ಯಪ್ರದೇಶದ ಬುರ್ಹಾನ್ ಪುರ ಎಂಬಲ್ಲಿ ಆನಂದ್ ಚೋಲ್ಸೆ ಎನ್ನುವವರ ತಮ್ಮ ಪ್ರೀತಿಯ ಪತ್ನಿಗಾಗಿ ಬೆಲೆಬಾಳುವ ತಾಜ್ ಮಹಲ್ ಪ್ರತಿರೂಪತಹ ಮನೆಯನ್ನು ನಿರ್ಮಾಣ ಮಾಡಿಸಿ, ತಮ್ಮ ಪತ್ನಿಗೆ ಪ್ರೀತಿಯ ಉಡುಗೊರೆಯನ್ನು ನೀಡಿದ್ದಾರೆ.
ಆನಂದ್ ಚೋಕ್ಸೆ ಅವರ 4 ಬೆಡ್ ರೂಮ್ ಗಳ ತಾಜ್ ಮಹಲ್ ನ ಪ್ರತಿರೂಪದಂತೆ ಕಾಣುವ ಈ ಮನೆಯ ನಿರ್ಮಾಣಕ್ಕಾಗಿ 3 ವರ್ಷಗಳ ಅವರನ್ನು ತೆಗೆದುಕೊಂಡಿದ್ದಾರೆ. ಮನೆ ನಿರ್ಮಾಣದ ವೇಳೆ ಇಂಜಿನಿಯರ್ ಬಹಳ ಶ್ರಮವಹಿಸಿದ್ದರು ಎನ್ನಲಾಗಿದೆ. ಅವರು ತಾಜ್ ಮಹಲ್ ನ ಕುರಿತಾಗಿ ಕೂಲಂಕುಶವಾಗಿ ಅಧ್ಯಯನವನ್ನು ಮಾಡಿ, ಮನೆಯಲ್ಲಿ ಅಂದವಾದ ಕೆತ್ತನೆ ಕೆಲಸವನ್ನು ಮಾಡಿಸುವುದಕ್ಕಾಗಿ ಬಂಗಾಳ ಮತ್ತು ಇಂದೋರ್ ನಿಂದ ಕಲಾವಿದರನ್ನು ಕರೆಸಿ ಮನೆ ನಿರ್ಮಾಣ ಕಾರ್ಯವನ್ನು ನಡೆಸಿದ್ದರು ಎನ್ನಲಾಗಿದೆ.
ಈ ಮನೆಯ ಮೇಲಿರುವ ಗುಮ್ಮಟ 29 ಅಡಿ ಎತ್ತರವಾಗಿದ್ದು, ತಾಜ್ ಮಹಲ್ ನ ರೀತಿಯಲ್ಲಿಯೇ ಗೋಪುರ ಹೊಂದೊದೆ. ಮನೆಯ ನೆಲವನ್ನು ರಾಜಸ್ಥಾನದ ಮಕ್ರಾನ ದಿಂದ ಮಾಡಲಾಗಿದೆ. ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ನಿರ್ಮಾಣ ಮಾಡಿದ್ದಾರೆ. ಮನೆಯಲ್ಲಿ ಒಂದು ದೊಡ್ಡ ಹಾಲ್, ಕೆಳಗೆ ಎರಡು ಬೆಡ್ರೂಮ್ ಗಳು, ಮೇಲೆ ಎರಡು ಬೆಡ್ರೂಮ್ ಗಳು ಇದರ ಜೊತೆಗೆ ಗ್ರಂಥಾಲಯ ಮತ್ತು ಧ್ಯಾನ ಕೊಠಡಿ ಇದೆ.
ಮನೆಯ ಹೊರಗೆ ಹಾಗೂ ಒಳಗೆ ಸುಂದರವಾದ ಲೈಟಿಂಗ್ಸ್ ಅನ್ನು ಅಳವಡಿಕೆ ಮಾಡಲಾಗಿದ್ದು ನಿಜವಾದ ತಾಜ್ ಮಹಲ್ ನಂತೆಯೇ ಬಹಳ ಸುಂದರವಾಗಿ ಈ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಆನಂದ್ ಚೋಕ್ಸೆ ಅವರ ಈ ಹೊಸ ಮನೆ ಸದ್ಯಕ್ಕೆ ಸುದ್ದಿಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದುಕೊಂಡಿದ್ದು, ಎಲ್ಲರ ಗಮನವನ್ನು ಸೆಳೆಯುವ ಮೂಲಕ ಮೆಚ್ಚುಗೆಯನ್ನು ಪಡೆದುಕೊಂಡಿದೆ.