ಊಹೆಗೂ ಮೀರಿ ಬದಲಾಯ್ತು ಲೆಕ್ಕಾಚಾರ: ಈ ವಾರ ಯಾವ ಸೀರಿಯಲ್ ಗೆ ಎಷ್ಟನೇ ಸ್ಥಾನ??

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿ ಆರ್ ಪಿ ಬದಲಾಗುತ್ತದೆ, ಅದಕ್ಕೆ ತಕ್ಕ ಹಾಗೆ ಟಾಪ್ ಐದು ಧಾರಾವಾಹಿಗಳ ಸ್ಥಾನಗಳಲ್ಲಿಯೂ ನಾವು ಬದಲಾವಣೆಯನ್ನು ನೋಡುತ್ತೇವೆ. ಇನ್ನು ಇದೀಗ ಕನ್ನಡ ಕಿರುತೆರೆಯಲ್ಲಿ ಪ್ರಸಾರವನ್ನು ಆರಂಭಿಸಿದ ಮೊದಲನೇ ವಾರದಲ್ಲೇ ಕನ್ನಡ ಧಾರಾವಾಹಿಯೊಂದು ಬೇರೆಲ್ಲಾ ಟಾಪ್ ಸೀರಿಯಲ್ ಗಳನ್ನು ಹಿಂದೆ ಹಾಕಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡು ಟಿ ಆರ್ ಪಿ ಯಲ್ಲಿ ಒಂದು ಹೊಸ ದಾಖಲೆಯನ್ನು ಬರೆಯುವ ಮೂಲಕ ಗಮನವನ್ನು ಸೆಳೆದಿದೆ. ಈ ಮೂಲಕ ಧಾರಾವಾಹಿಗಳ ಸ್ಥಾನಗಳು ಬದಲಾಗಿದೆ.

ಸ್ಯಾಂಡಲ್ವುಡ್ ನ ಹಿರಿಯ ಪ್ರತಿಭಾವಂತ ನಟಿ ಉಮಾಶ್ರೀ ಅವರು ಮುಖ್ಯ ಪಾತ್ರದಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಳೆದ ವಾರವಷ್ಟೇ ಪ್ರಸಾರ ಆರಂಭಿಸಿತ್ತು. ಈ ವಾರ ಈ ಧಾರಾವಾಹಿಯು ದಾಖಲೆ ಮಟ್ಟದಲ್ಲಿ 13.5 ರೇಟಿಂಗ್ ಪಡೆಯುವ ಮೂಲಕ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡು ಬೀಗಿದೆ. ಈ ಸೀರಿಯಲ್ ನಲ್ಲಿ ಮಂಜು ಭಾಷಿಣಿ, ಹಂಸ ಅವರು ಪ್ರಮುಖ ಪಾತ್ರಗಳನ್ನು ಪೋಷಿಸುತ್ತಿದ್ದಾರೆ. ಸೀರಿಯಲ್ ಜನರ ಮನಸ್ಸನ್ನು ಗೆಲ್ಲುತ್ತಿದೆ.

ಇನ್ನು ಇಷ್ಟು ದಿನ ನಂಬರ್ ಒನ್ ಸ್ಥಾನದಲ್ಲಿ ಇದ್ದ ಅಮೂಲ್ಯ ವೇದಾಂತ್ ಪ್ರೇಮಕಥೆ ಗಟ್ಟಿ ಮೇಳ ಈ ವಾರ ಎರಡನೇ ಸ್ಥಾನಕ್ಕೆ ಬಂದಿದೆ. ಅಮೂಲ್ಯ ವೇದಾಂತ್ ಮದುವೆ, ಅಮೂಲ್ಯ ಸುಹಾಸಿನಿ ನಡುವಿನ ಕಿರಿಕ್, ಅಕ್ಕ ತಂಗಿ ನಡುವಿನ ಕಲಹ, ವೇದಾಂತ್ ವಸಿಷ್ಠ ನ ತಾಯಿಯ ಆಗಮನಗಳಂತಹ ಹೊಸ ತಿರುವುಗಳ ಮೂಲಕ ಸೀರಿಯಲ್ ಜನರನ್ನು ರಂಜಿಸುತ್ತಿದೆ.

ಮೂರನೇ ಸ್ಥಾನದಲ್ಲಿ ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭವಾದ ಪರ್ಫೆಕ್ಟ್ ಎಜೆ, ಎಡವಟ್ಟು ರಾಣಿ ಲೀಲಾ ನಡುವಿನ ಕೋಳಿ ಜಗಳ, ಎಜೆಯ ಮೂರು ಜನ ಸೊಸೆಯರೊಂದಿಗೆ ಲೀಲಾ ಸೆಣಸಾಟ, ಹೀಗೆ ವಿವಿಧ ಅಂಶಗಳಿಂದ ಭರ್ಜರಿ ಮನರಂಜನೆಯನ್ನು ನೀಡುವ ಮೂಲಕ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂರನೇ ಸ್ಥಾನ ಪಡೆದಿದೆ. ಆರಂಭದಲ್ಲಿ ಇದು ಕೂಡಾ ಮೊದಲನೇ ವಾರದಲ್ಲೇ ಟಾಪ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು.

ಇನ್ನು ಟಾಪ್ ಮೂರರ ನಂತರದ ಸ್ಥಾನಗಳಲ್ಲಿ ಕ್ರಮವಾಗಿ, ನಿಯತ್ತಿಗಾಗಿ ಪ್ರೀತಿಯನ್ನು ತ್ಯಾಗ ಮಾಡುತ್ತಿರುವ ಪಾರು ಹಾಗೂ ಅನು ಆರ್ಯ ನಡುವಿನ ಪ್ರೇಮಾನುರಾಗವನ್ನು ಹೊತ್ತ ಜೊತೆ ಜೊತೆಯಲಿ ಎರಡೂ ಸೀರಿಯಲ್ ಗಳು ಇವೆ ಎನ್ನಲಾಗಿದೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ರಾಜನಂದಿನಿ ರಹಸ್ಯ ತೆರೆದುಕೊಳ್ಳಲಿದ್ದು ಮುಂದೆ ಮತ್ತೊಮ್ಮೆ ಜೊತೆ ಜೊತೆಯಲಿ ಟಾಪ್ ಒನ್ ಆಗಬಹುದಾ?? ಕಾದು ನೋಡಬೇಕಾಗಿದೆ.

ಇನ್ನು ಝೀ ವಾಹಿನಿಯಲ್ಲಿ ಬಹುತೇಕ ಹೊಸ ಧಾರಾವಾಹಿಗಳು ಆರಂಭವಾದ ಮೊದಲ ವಾರದಲ್ಲಿ ನಂಬರ್ ಒನ್ ಸ್ಥಾನ ಪಡೆಯುವುದು ಸಹಜ. ಈಗ ಪುಟ್ಟಕ್ಕನ ಮಕ್ಕಳು ಕೂಡಾ ಮೊದಲ ಸ್ಥಾನ ಪಡೆದಿದೆ. ಮುಂದೆ ಈ ಸ್ಥಾನ ಹಾಗೆ ಉಳಿಯುವುದಾ?? ಅಥವಾ ಸ್ಥಾನ ಬದಲಾಗುವುದಾ?? ಸದ್ಯಕ್ಕಂತೂ ಉತ್ತರ ಇಲ್ಲ ಕಾದು ನೋಡಬೇಕಾಗಿದೆ.

Leave a Comment