ಊಹೆಗಳೆಲ್ಲಾ ಸುಳ್ಳಾಯ್ತು: ಗ್ರ್ಯಾಂಡ್ ಫಿನಾಲೆಯಲ್ಲಿ ದೊಡ್ಡ ಟ್ವಿಸ್ಟ್, ಈ ರಿಸಲ್ಟ್ ಶ್ರೀನಿವಾಸ್ ಗೌಡ ನಿರೀಕ್ಷೆ ಮಾಡಿರಲಿಲ್ಲ

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಓಟಿಟಿ ಮೊದಲನೇ ಸೀಸನ್ ಕೊನೆಯ ಹಂತವನ್ನು ತಲುಪಿದ್ದು, ಇದೀಗ ಗ್ರ್ಯಾಂಡ್ ಫಿನಾಲೆ ಸಂಚಿಕೆಯು ಪ್ರಸಾರವಾಗುತ್ತಿದೆ. ಸೋಶಿಯಲ್ ಮೀಡಿಯಾಗಳ ಮೂಲಕ ಜನಪ್ರಿಯತೆ ಪಡೆದ ಸೋನು ಶ್ರೀನಿವಾಸ್ ಗೌಡ ಕೂಡಾ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದ್ದರು. ಯಾವುದೇ ಫಿಲ್ಟರ್ ಇಲ್ಲದ ಹಾಗೆ ಮಾತನಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ ಈಗ ಮನೆಯಿಂದ ಔಟ್ ಆಗಿದ್ದಾರೆ. ಸೋನು ಜರ್ನಿ ಬಿಗ್ ಬಾಸ್ ಮನೆಯಲ್ಲಿ ಕೊನೆಯಾಗಿದೆ. ಐದು ವಾರಗಳ ಕಾಲ ಸಖತ್ ಸದ್ದು, ಸುದ್ದಿ ಮಾಡಿದ ಸೋನು, ವೀಕ್ಷಕರ ಓಟ್ ಗಳಿಂದ ಸೇಫ್ ಆಗುತ್ತಾ ಬಂದಿದ್ದರು. ಆದರೆ ಈಗ ಕೊನೆಯ ಹಂತದಲ್ಲಿ ಸೋನು ಮನೆಯಿಂದ ಹೊರಗೆ ಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ.

ಸೋನು ಟಿವಿಯಲ್ಲಿ ಪ್ರಸಾರ ಆಗಲಿರುವ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆ ಆಗ್ತಾರೆ ಎಂದು ಮನೆಯ ಸದಸ್ಯರೇ ಊಹೆ ಮಾಡಿದ್ದರು. ಆದರೆ ಈಗ ಎಲ್ಲರ ಊಹೆಗಳು ಸುಳ್ಳಾಗಿದೆ. ಪ್ರೇಕ್ಷಕರ ಬೆಂಬಲವು ಕೊನೆಯ ಹಂತದಲ್ಲಿ ಸಿಗದ ಕಾರಣ, ಸೋನು ಬಿಗ್ ಬಾಸ್ ಜರ್ನಿ ಮುಕ್ತಾಯವಾಗಿದೆ. ಬಿಗ್ ಬಾಸ್ ಮನೆಯೊಳಗೆ ಸೋನು ಬಹಳಷ್ಟು ಜಗಳ, ಗ ಲಾ ಟೆ, ಮಾತಿನ ಚಕಮಕಿ ಮಾಡಿಕೊಂಡಿದ್ದರು. ಸೋನು ಅವರ ಉಡಾಫೆ ವರ್ತನೆಯನ್ನು ಕಂಡು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಸಹಾ ಸೋನುಗೆ ಬುದ್ಧಿ ಮಾತು ಹೇಳಿದ್ದರು. ಆದರೂ ಸೋನು ಮಾತುಗಳಿಗೆ ಮಾತ್ರ ಕಂಟ್ರೋಲ್ ಬಿದ್ದಿರಲಿಲ್ಲ.

ಸೋನು ಜರ್ನಿ ಬಿಗ್ ಬಾಸ್ ನ ಗ್ರ್ಯಾಂಡ್ ಫಿನಾಲೆವರೆಗೂ ಮಾತ್ರವೇ ಆಗಿದ್ದು, ಈಗ ಅಲ್ಲಿಂದ ಹೊರ ಬಂದಿದ್ದಾರೆ. ಹೊರ ಬರುವಾಗ ಸೋನು, ನಾನು ಬಿಗ್ ಬಾಸ್ ಮನೆಯಿಂದ ಬಹಳಷ್ಟು ಕಲಿತಿದ್ದೇನೆ. ಅದನ್ನೇ ಮುಂದುವರೆಸಿಕೊಂಡು ಹೋಗ್ತೀನಿ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಇನ್ನು ಕೊನೆಯದಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸಿದ್ದ 16 ಜನ ಸ್ಪರ್ಧಿಗಳಲ್ಲಿ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಟಿವಿ ಯಲ್ಲಿ ಪ್ರಸಾರ ಆಗಲಿರುವ ಬಿಗ್ ಬಾಸ್ ನ ಹೊಸ ಸೀಸನ್ ಗೆ ಸ್ಪರ್ಧಿಗಳಾಗಿ ಎಂಟ್ರಿ ನೀಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವಿಷಯ ಹೊರ ಬಂದಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸದ್ದು ಮಾಡಿತ್ತು. ನೆಟ್ಟಿಗರು ಸೋನು ಎಂಟ್ರಿ ಯನ್ನು ವಿ ರೋ ಧ ಮಾಡಿದ್ದರು. ಅಲ್ಲದೇ ಸೋನು ಮೊದಲನೇ ವಾರದಲ್ಲೇ ಮನೆಯಿಂದ ಹೊರಗೆ ಬರುವುದು ಗ್ಯಾರಂಟಿ ಎಂದಿದ್ದರು. ಆದರೆ ಅನಂತರ ಆಗಿದ್ದು ಮಾತ್ರ ತದ್ವಿರುದ್ಧ. ಸೋನು ಶ್ರೀನಿವಾಸ್ ಗೌಡ ಜನರ ಓಟಗಳನ್ನು ಪಡೆಯುತ್ತಾ ಎಲಿಮಿನೇಷನ್ ನಿಂದ ಸೇಫ್ ಆಗುತ್ತಾ ಗ್ರ್ಯಾಂಡ್ ಫಿನಾಲೆ ವರೆಗೆ ಬಂದು ತಲುಪುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದರು.

Leave a Comment