ಅದೊಂದು ಕಾರಣಕ್ಕೆ ಮುಸ್ಲಿಂ ಮಾಲೀಕರೇ ನನಗೆ ಮನೆ ಕೊಡ್ತಿಲ್ಲ: ಉರ್ಫಿ ಜಾವೇದ್ ಮಾಡಿದ ಹೊಸ ಆರೋಪ

0
404

urfi Javed: ಸದಾ ತಾನು ತೊಡುವ ಡ್ರೆಸ್ ಮತ್ತು ವೈವಿದ್ಯಮಯ ಫ್ಯಾಷನ್ ನಿಂದಾಗಿಯೇ ಸುದ್ದಿಯಾಗುವ ನಟಿ ಉರ್ಫಿ ಜಾವೇದ್(Urfi Javed). ಧರಿಸುವ ವಸ್ತ್ರವನ್ನೇ ವಿಚಿತ್ರವಾಗಿ ಧರಿಸುವುದು ಮಾತ್ರವೇ ಅಲ್ಲದೇ ಬಟ್ಟೆಯ ಬದಲಾಗಿ ಹೂವು, ಪ್ಲಾಸ್ಟಿಕ್, ಮೊಬೈಲ್ ಗಳನ್ನು ಬಟ್ಟೆಯಂತೆ ಧರಿಸಿ, ಕೆಲವೊಮ್ಮೆ ಪ್ಲೇಟ್, ಹಣ್ಣುಗಳಿಂದ ತನ್ನ ದೇಹದ ಭಾಗವನ್ನು ಮುಚ್ಚಿಕೊಂಡು ಪೋಸ್ ನೀಡುವ ಉರ್ಫಿ ಈಗಾಗಲೇ ಇಂತಹ ವಿಚಿತ್ರ ಡ್ರೆಸ್ ಸೆನ್ಸ್ ನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಸಹಾ ಆಗಿದ್ದಾರೆ. ಆದರೆ ಉರ್ಫಿ(Urfi dresses) ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎನ್ನುವುದು ಸಹಾ ವಾಸ್ತವ.

ಇದೀಗ ಉರ್ಫಿ ಟ್ವಿಟರ್ ನಲ್ಲಿ(Urfi Tweet) ಮಾಡಿರುವ ಒಂದು ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿಯು ಈಗ ಹೊಸದೊಂದು ಆ ರೋ ಪವನ್ನು ಮಾಡಿದ್ದಾರೆ. ಹೌದು, ಉರ್ಫಿ(Urfi House) ತನಗೆ ಯಾರೂ ಬಾಡಿಗೆ ಮನೆಯನ್ನು ನೀಡಲು ಸಿದ್ಧರಿಲ್ಲ, ಮುಂಬೈನಲ್ಲಿ ಬಾಡಿಗೆ ಮನೆ ಪಡೆಯುವುದು ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ ಎಂದು ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

ಉರ್ಫಿ(Urfi complaint) ತನಗೆ ಮನೆ ಏಕೆ ಬಾಡಿಗೆಗೆ ಸಿಗುತ್ತಿಲ್ಲ ಎನ್ನುವ ವಿಚಾರವಾಗಿ ಕಾರಣಗಳನ್ನು ಸಹಾ ಬರೆದುಕೊಂಡಿದ್ದಾರೆ. ತಾನು ಧರಿಸುವ ಚಿತ್ರ, ವಿಚಿತ್ರವಾದ ಬಟ್ಟೆಗಳ ಕಾರಣದಿಂದಾಗಿ ಮುಸ್ಲಿಂ ಮನೆ ಮಾಲೀಕರು ನನಗೆ ಮನೆಯನ್ನು ಬಾಡಿಗೆಗೆ ಕೊಡಲು ಸಿದ್ಧರಿಲ್ಲ ಎಂದು ಮೊದಲ ಕಾರಣವನ್ನು ಅವರು ತಿಳಿಸಿದ್ದಾರೆ.

ನಾನು ಮುಸ್ಲಿಂ ಎನ್ನುವ ಕಾರಣಕ್ಕೆ ಹಿಂದೂಗಳು ಸಹಾ ನನಗೆ ಮನೆಯನ್ನು ನೀಡುತ್ತಿಲ್ಲ. ಇನ್ನೂ ಕೆಲವು ಮನೆ ಮಾಲೀಕರಿಗೆ ನನಗೆ ರಾಜಕೀಯವಾಗಿ ಎದುರಾಗುವ ಬೆ ದ ರಿಕೆಗಳ ಕಾರಣದಿಂದ ಮನೆಯನ್ನು ಬಾಡಿಗೆಗೆ ನೀಡಲು ಹೆ ದ ರುತ್ತಿದ್ದಾರೆ. ಒಟ್ಟಾರೆ ಮುಂಬೈ(Mumbari) ನಲ್ಲಿ ಬಾಡಿಗೆ ಮನೆಯನ್ನು ಪಡೆಯುವುದು ಬಹಳ ಕಷ್ಟ ಎಂದು ಉರ್ಫಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಈಗ ಎಲ್ಲೆಡೆ ವೈರಲ್ ಆಗಿದೆ.

ತನಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ತಾ ಇಲ್ಲ ಎಂದು ಉರ್ಫಿ ಮಾಡಿದ ಪೋಸ್ಟ್ ವೈರಲ್ ಆದ ಮೇಲೆ ಅದಕ್ಕೆ ನೆಟ್ಟಿಗರು ವೈವಿದ್ಯಮಯ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ನಮಗೆ ಸಹಾ ಇಂತಹ ಸಮಸ್ಯೆಗಳೇ ಎದುರಾಗಿದೆ ಮುಂಬೈನಲ್ಲಿ ಬಾಡಿಗೆ ಮನೆ ಸಿಗುವುದು ಬಹಳ ಕಷ್ಟ ಎಂದು ನಟಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಇದೇ ವೇಳೆ ಎಂದಿನಂತೆ ಒಂದಷ್ಟು ನೆಗೆಟಿವ್ ಕಮೆಂಟ್ ಗಳು ಸಹಾ ಹರಿದು ಬರುತ್ತಿದೆ. ಅದರಲ್ಲಿ ಅನೇಕರು ಮೊದಲು ನೀನು ಹಾಕುವ ವಸ್ತ್ರಗಳ ಕಡೆ ಗಮನ ಕೊಡು, ಆಮೇಲೆ ಆ ರೋ ಪ ಮಾಡು ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಉರ್ಫಿಯನ್ನು ಟೀಕಿಸುತ್ತಾ ಮೊದಲು ಸರಿಯಾದ ಬಟ್ಟೆಗಳನ್ನು ಧರಿಸಿ ಆಗ ಬಾಡಿಗೆ ಮನೆ ಸಿಗುತ್ತದೆ, ಸೆಲೆಬ್ರಿಟಿ ಆಗಿರುವ ನೀವು ಬೇರೆಯವರಿಗೆ ಮಾದರಿಯಾಗಿರಬೇಕು ಎಂದಿದ್ದಾರೆ.

ಉರ್ಫಿ ಜಾವೇದ್(Urfi Javed) ಹಿಂದಿ ಬಿಗ್ ಬಾಸ್ ನ ಓಟಿಟಿ(Big Boss Ott) ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆಗ ಪಡೆದ ಜನಪ್ರಿಯತೆಯನ್ನು ನಟಿ ಈಗ ತಾನು ಧರಿಸುವ ವಸ್ತ್ರಗಳ ಮೂಲಕವೇ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಸದಾ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಡ್ರೆಸ್ ಗಳನ್ನು ಧರಿಸಿ ಕ್ಯಾಮರಾ ಮುಂದೆ ಬರುವ ಉರ್ಫಿ ಮೇಲೆ ಈಗಾಗಲೇ ದೂರುಗಳು ಸಹಾ ದಾಖಲಾಗಿದೆ.

LEAVE A REPLY

Please enter your comment!
Please enter your name here