ಉದ್ಯೋಗಿಯ ಪ್ರಾಮಾಣಿಕತೆಗೆ 1200 ಕೋಟಿ ಬೆಲೆಯ ಊಹೆಗೂ ಮೀರಿದ ಗಿಫ್ಟ್ ನೀಡಿದ ಮುಖೇಶ್ ಅಂಬಾನಿ!! ಏನು ಆ ಗಿಫ್ಟ್??
ಮುಖೇಶ್ ಅಂಬಾನಿ, ಈ ಹೆಸರಿಗೆ ಖಂಡಿತ ಪರಿಚಯದ ಅಗತ್ಯವಿಲ್ಲ. ದೇಶದ ಪ್ರಮುಖ ಉದ್ಯಮಪತಿ, ರಿಲಯನ್ಸ್ ನ ಮುಖ್ಯಸ್ಥ ಹಾಗೂ ಭಾರತದ ಹಾಗೂ ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಇವರು ತಮ್ಮ ಲೈಫ್ ಸ್ಟೈಲ್, ತಮ್ಮ ಉದ್ಯಮ ಹಾಗೂ ಅವರ ಆಸ್ತಿಯ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಪ್ರಸ್ತುತ ಮುಖೇಶ್ ಅಂಬಾನಿ ಇದ್ಯಾವುದೂ ಅಲ್ಲದೇ ಹೊಸ ವಿಷಯವೊಂದರಿಂದ ಅವರು ಸುದ್ದಿಯಾಗಿದ್ದಾರೆ ಹಾಗೂ ಅವರ ಕಾರ್ಯಕ್ಕೆ ಮೆಚ್ಚುಗೆಗಳು ಸಹಾ ಹರಿದು ಬರುತ್ತಿದೆ. ಹಾಗಾದರೆ ಮುಖೇಶ್ ಅಂಬಾನಿ ಅಂತದ್ದೇನು ಮಾಡಿದರು? ಬನ್ನಿ ತಿಳಿಯೋಣ.
ಸಾಮಾನ್ಯವಾಗಿಯೇ ಒಬ್ಬ ಉದ್ಯಮಪತಿಯು ನಿರಂತರ ಯಶಸ್ಸನ್ನು ಪಡೆದು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿದ್ದಾನೆ ಎಂದರೆ ಅದರಲ್ಲಿ ಆತನ ಉದ್ಯಮದಲ್ಲಿ ಪ್ರಾಮಾಣಿಕವಾಗಿ ಹಾಗೂ ಆತ್ಮ ಸಮರ್ಪಣಾ ಭಾವದಿಂದ ಉದ್ಯೋಗ ಮಾಡುವ ನಿಷ್ಠಾವಂತ ಉದ್ಯೋಗಿಗಳ ಪಾತ್ರವು ಇರುತ್ತದೆ ಎನ್ನುವುದು ಸತ್ಯ. ಉದ್ಯೋಗಿಗಳು ತಾವು ಕೆಲಸ ಮಾಡುವ ಕಂಪನಿ ಹಾಗೂ ಅದರ ಮಾಲೀಕರಿಗೆ ನಿಷ್ಠಾವಂತರಿಂದ ಕೆಲಸ ಮಾಡಿ ಪ್ರಾಮಾಣಿಕತೆ ಮೆರೆಯುತ್ತಾರೆ. ಪ್ರಸ್ತುತ ಮುಖೇಶ್ ಅಂಬಾನಿ ತಮ್ಮ ಉದ್ಯೋಗಿಯೊಬ್ಬರ ಇಂತಹ ಗುಣವನ್ನು ಗುರುತಿಸಿ ಅತ್ಯಮೂಲ್ಯ ಉಡುಗೊರೆ ನೀಡಿದ್ದಾರೆ.
ಹೌದು ಮುಖೇಶ್ ಅಂಬಾನಿ ಅವರು ಮನೋಜ್ ಮೋದಿ ಹೆಸರಿನ ತಮ್ಮ ಉದ್ಯೋಗಿಯೊಬ್ಬರಿಗೆ ನೀಡಿರುವ ಉಡುಗೊರೆ ಸಾಮಾನ್ಯವಾದುದು ಖಂಡಿತ ಅಲ್ಲ, ಮುಖೇಶ್ ಅಂಬಾನಿ ಅವರು ತಮ್ಮ ಉದ್ಯೋಗಿಯ ಪ್ರಮಾಣಿಕತೆ ಹಾಗೂ ನಿಷ್ಠೆಗೆ ಪ್ರತಿಯಾಗಿ ಬರೋಬ್ಬರಿ 1200 ಕೋಟಿ ರೂ.ಗಳ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಬಹು ಅಂತಸ್ತಿನ ಮನೆಯಾಗಿದ್ದು, ಮನೆಯಲ್ಲಿ ಎಲ್ಲಾ ಐಶಾರಾಮೀ ಸವಲತ್ತುಗಳು ಇವೆ ಎನ್ನಲಾಗಿದೆ. ಮುಖೇಶ್ ಅಂಬಾನಿ ಅವರು ನೀಡಿದ ಈ ಕೊಡುಗೆ ಈಗ ಸುದ್ದಿ ಮಾಡಿದೆ.
ಮನೋಜ್ ಮೋದಿಯವರು ರಿಲಯನ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದಲೂ ಸಹಾ ಉದ್ಯೋಗದಲ್ಲಿದ್ದು ಅವರು ಬಹಳ ನಿಷ್ಠಾವಂತ ಉದ್ಯೋಗಿಯಾಗಿದ್ದಾರೆ ಎನ್ನಲಾಗಿದೆ. ಮುಖೇಶ್ ಅಂಬಾನಿ ಅವರು ಉಡುಗೊರೆಯಾಗಿ ನೀಡಿರುವ ಈ ಮನೆಯ ಹೆಸರು ಕ್ರಿಸನ್ಡ್ ವೃಂದಾವನ್ ಎಂದು ತಿಳಿದು ಬಂದಿದೆ. ಅಂಬಾನಿ ತಮ್ಮ ಉದ್ಯೋಗಿಗೆ ಇಂತಹುದೊಂದು ಉಡುಗೊರೆ ನೀಡಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಮುಖೇಶ್ ಅಂಬಾನಿ ಹಾಗೂ ಮನೋಜ್ ಮೋದಿ ಇಬ್ಬರ ಬಗ್ಗೆಯೂ ಸಹಾ ಮೆಚ್ಚುಗೆ ನೀಡುತ್ತಿದ್ದಾರೆ.