ಉತ್ತಮ ಉದ್ದೇಶಕ್ಕಾಗಿ ಹಸಿರು ಬಣ್ಣದ ಜೆರ್ಸಿ ತೊಟ್ಟು RCB, ಹೈದ್ರಾಬಾದ್ ತಂಡದ ವಿರುದ್ಧ ಮೈದಾನಕ್ಕೆ ಇಳಿಯಲಿದೆ!

Written by Soma Shekar

Published on:

---Join Our Channel---

ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯಲಿರುವ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಸಿರು ಬಣ್ಣದ ಜರ್ಸಿ ಧರಿಸಿ ಅಭಿಮಾನಿಗಳ ಮುಂದೆ ಬರಲಿದೆ. ಆರ್ ಸಿ ಬಿ ತಂಡದ ಅಭಿಮಾನಿಗಳಿಗೆ ಆರ್ ಸಿ ಬಿ ಕ್ರೀಡಾಕಾರರು ಹಸಿರು ಜರ್ಸಿಯನ್ನು ತೊಟ್ಟು ಬರುವುದರ ಹಿಂದಿನ ಕಾರಣ ಏನೆಂದು ಈಗಾಗಲೇ ತಿಳಿದಿರುತ್ತದೆ. ಈ ವಿಷಯ ತಿಳಿಯದೆ ಇರುವವರಿಗೆ ಅದನ್ನು ತಿಳಿಸಲು ಹೊರಟಿದ್ದೇವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಸಿರು ಬಣ್ಣದ ಜರ್ಸಿ ತೊಟ್ಟು ಬರುವುದರ ಹಿಂದೆ ಒಂದು ಬಹಳ ಉತ್ತಮವಾದ ಉದ್ದೇಶವಿದೆ.

ಪ್ರತಿವರ್ಷ ಆರ್ ಸಿ ಬಿ ತಂಡ ಒಂದು ಟೂರ್ನಿಯಲ್ಲಿ ಹಸಿರು ಬಣ್ಣದ ಜರ್ಸಿಯನ್ನು ತೊಡುವ ಮೂಲಕ ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಮೂಡಿಸುತ್ತಿದೆ. ಅದರಂತೆ ಈ ಬಾರಿಯೂ ಸಹಾ ನಾಳೆ ನಡೆಯಲಿರುವ ಪಂದ್ಯದಲ್ಲಿ ಆರ್ ಸಿ ಬಿ ತಂಡದ ಕ್ರೀಡಾಪಟುಗಳು ಹಸಿರು ಬಣ್ಣದ ಜರ್ಸಿಯನ್ನು ತೊಟ್ಟು ಮೈದಾನಕ್ಕೆ ಇಳಿಯಲಿದ್ದಾರೆ. ಈಗಾಗಲೇ ಆರ್ ಸಿ ಬಿ ಆಟಗಾರರು ಹಸಿರು ಬಣ್ಣದ ಜರ್ಸಿ ತೊಟ್ಟಿರುವ ವಿಡಿಯೋ ಆರ್ ಸಿ ಬಿಯ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಕಳೆದ ವರ್ಷದ ವಿಚಾರವನ್ನು ಮಾತನಾಡುವುದಾದರೆ ಕಳೆದ ವರ್ಷ ತಂಡವು ಹಸಿರು ಬಣ್ಣದ ಜರ್ಸಿಯ ಬದಲಾಗಿ ಪಿಪಿಇ ಕಿಟ್ ನಂತಹ ತಿಳಿನೀಲಿ ಬಣ್ಣದ ಜರ್ಸಿ ಯನ್ನು ಧರಿಸುವ ಮೂಲಕ ಕೆಕೆಆರ್ ತಂಡದ ವಿರುದ್ಧ ಕಣಕ್ಕೆ ಇಳಿದಿತ್ತು. ಈ ಮೂಲಕ ಕೊರೊನಾ ವಾರಿಯರ್ಸ್ ಗೆ ಗೌರವವನ್ನು ಸಲ್ಲಿಸಲಾಗಿತ್ತು. ಪಂದ್ಯ ಮುಗಿದ ನಂತರ ಆಟಗಾರ ಜರ್ಸಿಗಳನ್ನು ಹರಾಜು ಹಾಕಲಾಗಿತ್ತು. ಅದರಿಂದ ಬಂದ ಹಣವನ್ನು ಕೊರೊನಾ ಲಸಿಕೆಗೆ ನೀಡಲು ಆರ್ ಸಿ ಬಿ ಫ್ರಾಂಚೈಸಿ ಸಜ್ಜಾಗಿತ್ತು.

Leave a Comment