ಉಕ್ರೇನ್ ನ ಸೆಕ್ಯೂರಿಟಿ ಗಾರ್ಡ್ ಗಾಗಿ ನಟ ರಾಮ್ ಚರಣ್ ಏನು ಮಾಡಿದ್ದಾರೆ ನೋಡಿ!! ಮತ್ತೊಮ್ಮೆ ಹೃದಯವಂತಿಕೆ ಮೆರೆದ ನಟ

Entertainment Featured-Articles News

ರಷ್ಯಾ ಉಕ್ರೇನ್ ಮೇಲೆ ಧಾ ಳಿ ನಡೆಸುವ ಮುನ್ನ ಒಂದು ಸುಂದರವಾದ ದೇಶವಾಗಿತ್ತು. ಎಷ್ಟೋ ಸುಂದರವಾದ ಐತಿಹಾಸಿಕ ಸ್ಮಾರಕಗಳು, ಕಟ್ಟಡಗಳು, ಸುಂದರವಾದ ಭವನಗಳು, ಅಂದವಾದ ಪ್ರಕೃತಿಯ ತಾಣವಾದ ನಾಡಾಗಿತ್ತು ಉಕ್ರೇನ್. ಆದ್ದರಿಂದಲೇ ನಿತ್ಯ ಅಲ್ಲಿ ಪ್ರವಾಸಿಗರ ದಂಡು, ಸಿನಿಮಾ ಚಿತ್ರೀಕರಣಕ್ಕಾಗಿ ಭಾರತೀಯ ಸಿನಿಮಾ ರಂಗದವರಿಂದಲೇ ತುಂಬಿರುತ್ತಿತ್ತು. ರಜನೀಕಾಂತ್ ರೋಬೋ 2.0 ಸಿನಿಮಾ ಕೂಡಾ ಉಕ್ರೇನ್ ನಲ್ಲಿ ಚಿತ್ರೀಕರಣಗೊಂಡಿತ್ತು. ಇನ್ನು ಹೊಸದಾಗಿ ನಿರ್ಮಾಣಗೊಂಡಿರುವ ಆರ್ ಆರ್ ಆರ್ ಸಿನಿಮಾ ಸಹಾ ಕಳೆದ ವರ್ಷ ಆಗಸ್ಟ್ ನಲ್ಲಿ ಉಕ್ರೇನ್ ನಲ್ಲಿ ಶೂಟಿಂಗ್ ನಡೆಸಿತ್ತು.

ನಾಟು ನಾಟು ಹಾಡು ಈಗಾಗಲೇ ಭರ್ಜರಿ ವೈರಲ್ ಆಗಿದ್ದು, ಈ ಹಾಡಿನ ಚಿತ್ರೀಕರಣ ನಡೆದಿರುವುದು ಉಕ್ರೇನ್ ನಲ್ಲೇ. ಅಲ್ಲದೇ ಹಾಡಿನಲ್ಲಿ ಡಾನ್ಸ್ ಮಾಡಿರುವವರು ಸಹಾ ಉಕ್ರೇನ್ ನ ಡಾನ್ಸರ್ ಗಳೇ ಆಡಿದ್ದಾರೆ. ಆದರೆ ಈಗ ಉಕ್ರೇನ್ ನ ಚಿತ್ರಣ ಸಂಪೂರ್ಣ ಬದಲಾಗಿದೆ. ಒಂದು ಕಡೆ ರಷ್ಯಾ ಧಾ ಳಿ ಗೆ ಸೇನಾ ಪಡೆಗಳು ವಿ ಧ್ವಂ ಸ ವಾದರೆ, ಇನ್ನೊಂದು ಕಡೆ ಇದರಿಂದಾಗಿ ಅಮಾಯಕ ಪ್ರಜೆಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಸಂಖ್ಯಾತ ಜನರು ತಮ್ಮ ನೆಲೆಯನ್ನು, ಭವಿಷ್ಯವನ್ನು ಕಳೆದುಕೊಂಡು ಬಳಲುವಂತಾಗಿದೆ.

ಇವೆಲ್ಲವುಗಳ ಬೆನ್ನಲ್ಲೇ ನಟ ರಾಮ್ ಚರಣ್ ತೇಜಾ ಅವರು ತಮ್ಮ ಆರ್ ಆರ್ ಆರ್ ಸಿನಿಮಾ ಪ್ರಮೋಷನ್ ವೇಳೆಯಲ್ಲಿ ಒಂದು ಭಾವುಕ ವಿಚಾರವನ್ನು ಹಂಚಿಕೊಂಡಿದ್ದಾರೆ. ರಾಮ್ ಚರಣ್ ಉಕ್ರೇನ್ ನಲ್ಲಿ ತನಗೆ ತಿಳಿದಿರುವ ವ್ಯಕ್ತಿಗೆ ಆರ್ಥಿಕ ಸಹಾಯವನ್ನು ಮಾಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಉಕ್ರೇನ್ ನಲ್ಲಿ ಯು ದ್ಧ ಆರಂಭವಾದ ಬೆನ್ನಲ್ಲೇ ಈ ಹಿಂದೆ ಶೂಟಿಂಗ್ ವೇಳೆ ತನಗೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿಗೆ ಕರೆ ಮಾಡಿ ಮಾತನಾಡಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ‌.

ತನಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದ ವ್ಯಕ್ತಿಯ ತಂದೆಗೆ 80 ವರ್ಷ ವಯಸ್ಸಾಗಿದ್ದು ಅವರು ಕೈಯಲ್ಲಿ ಗನ್ ಹಿಡಿದು ಯು ದ್ಧ ಕ್ಕೆ ಹೋಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ನ ಕುಟುಂಬಕ್ಕೆ ನಾನು ಸ್ವಲ್ಪ ಹಣ ಸಹಾಯವನ್ನು ಮಾಡಿದೆ. ನಾನು ಮಾಡಿದ ಸಹಾಯ ನಿಜಕ್ಕೂ ದೊಡ್ಡದೇನಲ್ಲ, ಆದರೆ ನನ್ನಿಂದ ಸಾಧ್ಯವಾದಷ್ಟು ನಾನು ಮಾಡಿದ್ದೇನೆ ಎನ್ನುವ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ರಾಮ್ ಚರಣ್ ಅವರು ಮಾಡಿದ ಸಹಾಯದ ವಿಷಯ ತಿಳಿದ ಅವರ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published.