ಉಕ್ರೇನ್ ನ ಸಮರಾಂಗಣದಲ್ಲೇ ಸತಿ ಪತಿಯಾದ ಜೋಡಿ: ವಿಶ್ವ ಮಟ್ಟದಲ್ಲಿ ವೈರಲ್ ಆಗ್ತಿದೆ ವೀಡಿಯೋ

Entertainment Featured-Articles News Viral Video

ಉಕ್ರೇನ್ ಮೇಲೆ ರಷ್ಯಾ ನಿರಂತರವಾಗಿ ತನ್ನ ದಾ ಳಿ ಯನ್ನು ಮುಂದುವರೆಸಿದೆ. ಬಾಂಬ್ ಹಾಗೂ ಕ್ಷಿಪಣಿಗಳ ಈ ನಿರಂತರ ದಾ ಳಿಯಿಂದಾಗಿ ಉಕ್ರೇನಿನ ರಾಜಧಾನಿ ಕೀವ್ ಮತ್ತೆ ಕಾರ್ಕಿವ್ ನಗರಗಳ ಪರಿಸ್ಥಿತಿ ಶೋಚನೀಯವಾಗಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಕೂಡಾ ಉಕ್ರೇನ್ ಸೈನ್ಯ ಮತ್ತು ಅಲ್ಲಿನ ಜನರು ಮಾತ್ರ ರಷ್ಯಾದ ಮುಂದೆ ಸೋಲು ಒಪ್ಪಿಕೊಳ್ಳುವುದಕ್ಕೆ ಸಿದ್ಧರಾಗಿಲ್ಲ. ಅವರು ತಮ್ಮ ಹೋ ರಾ ಟವನ್ನು ಮುಂದುವರೆಸಿದ್ದಾರೆ. ಹೀಗೆ ಎಲ್ಲೆಲ್ಲೂ ಭ ಯ ಹಾಗೂ ಆ ತಂ ಕ ತುಂಬಿರುವಂತಹ ಪರಿಸ್ಥಿತಿಯ ನಡುವೆಯೇ ಒಂದು ಅಚ್ಚರಿಯನ್ನು ಮೂಡಿಸುವಂತಹ ಘಟನೆ ವರದಿಯಾಗಿದೆ.

ರಷ್ಯಾದ ನಿರಂತರ ದಾ ಳಿ ಯ ಸನ್ನಿವೇಶಗಳ ನಡುವೆಯೇ ಉಕ್ರೇನಿನ ಸೈನ್ಯದಲ್ಲಿ ಒಂದು ಜೋಡಿ ಯು ದ್ಧ ದ ನಡುವೆ ತಮ್ಮ ವಿವಾಹವನ್ನು ಮಾಡಿಕೊಂಡಿದ್ದಾರೆ. ಯು ದ್ಧ ಭೂಮಿಯಲ್ಲಿ ನಡೆದ ಈ ವಿವಾಹದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ ಮ ರಾಂ ಗ ಣದಲ್ಲಿ ನಡೆದ ಒಂದು ಜೋಡಿಯ ವಿವಾಹದ ದೃಶ್ಯವನ್ನು ಜರ್ಮನಿಯ ಸುದ್ದಿ ವಾಹಿನಿಯ ವರದಿಗಾರ ಪಾಲ್ ರೋಯ್ಮರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದೊರೆತಿರುವ ಮಾಹಿತಿಗಳ ಪ್ರಕಾರ ಟೆರಿಟೋರಿಯಲ್ ಡಿಫೆನ್ಸ್ ನ ಯೋಧರಾದ ಲೆಸಿಯ ಹಾಗೂ ವೆಲೆರಿ ಕೀವ್ ಹತ್ತಿರ ವಿವಾಹ ಮಾಡಿ ಕೊಂಡಿದ್ದಾರೆ.

ಇವರ ಮದುವೆಯ ದೃಶ್ಯವು ಇದೀಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುವ ಮೂಲಕ ವಿಶ್ವದ ಗಮನವನ್ನು ಸೆಳೆಯುತ್ತಿದೆ. ವಿಡಿಯೋದಲ್ಲಿ ಗಮನಿಸಿದಾಗ ಲೆಸಿಯಾ ಕೈಯಲ್ಲಿ ಒಂದು ಹೂ ಗುಚ್ಚವನ್ನು ಹಿಡಿದಿರುವುದು ಕಾಣಬಹುದು. ಅದೇ ವೇಳೆಯಲ್ಲಿ ವೆಲೆರಿ ಕೈಯಲ್ಲಿ ಶಾಂಪೈನ್ ಬಾಟಲ್ ಕಂಡುಬರುತ್ತದೆ. ಈ ಸಂತೋಷದ ಸನ್ನಿವೇಶದಲ್ಲಿ ಅವರ ಜೊತೆಗೆ ಅವರ ಸೈನಿಕ ಮಿತ್ರರು ಕೂಡಾ ಇದ್ದು ಸಂಭ್ರಮ ಪಡುವುದನ್ನು ನಾವು ನೋಡಬಹುದಾಗಿದೆ.

ಸಂತೋಷದ ಸಮಯವನ್ನು ಸಂಭ್ರಮಿಸುವ ಸಲುವಾಗಿ ಒಬ್ಬ ಸೈನಿಕ ಕೈಯಲ್ಲಿ ಗಿಟಾರ್ ಹಿಡಿದು, ಅದನ್ನು ನುಡಿಸುತ್ತಾ ನವದಂಪತಿಗಳಿಗಾಗಿ ಹಾಡನ್ನು ಹಾಡುತ್ತಿರುವುದನ್ನು ಗಮನಿಸಬಹುದು. ಮತ್ತೊಂದು ಕಡೆ ವೆಲೆರಿಯ ಕೈಯನ್ನು ಹಿಡಿದಿರುವ ಸಮವಸ್ತ್ರಧಾರಿ ಲೆಸಿಯಾ ಹೆಲ್ಮೆಟ್ ನ ಬದಲಾಗಿ ಕೂದಲಿಗೆ ಧರಿಸುವಂತಹ ವಸ್ತ್ರವನ್ನು ಧರಿಸಿದ್ದಾರೆ. ಉಕ್ರೇನಿನ ಜನಪ್ರಿಯ ಸಂಗೀತ ಸಾಧನ ಬಂಡೂರವನ್ನು ಹಿಡಿದಂತಹ ಸೈನಿಕ ಸಂಗೀತ‌ ನುಡಿಸಿದ್ದು, ಉಳಿದ ಸೈನಿಕರು ಆತನೊಂದಿಗೆ ಸರಿ ಹಾಡನ್ನು ಹಾಡಿದ್ದಾರೆ.

Leave a Reply

Your email address will not be published.