ಈ 5 ವಾಸ್ತು ಸಲಹೆ ಪಾಲಿಸಿದರೆ ವ್ಯಾಪಾರ ವೃದ್ಧಿ ಖಂಡಿತ ಎನ್ನುತ್ತಿದೆ ವಾಸ್ತು ಶಾಸ್ತ್ರ: ತಪ್ಪದೇ ಪಾಲಿಸಿ ಈ 5 ಸಲಹೆಗಳು

0 1

ವ್ಯವಹಾರದಲ್ಲಿ ಪ್ರತಿಯೊಬ್ಬರೂ ಸಹಾ ಪ್ರಗತಿಯನ್ನು ಸಾಧಿಸಲು, ಉತ್ತಮವಾದ ಫಲಿತಾಂಶವನ್ನು ಪಡೆಯಲು ಬಯಸುತ್ತಾರೆ. ಆದರೆ ಬಹಳಷ್ಟು ಪ್ರಯತ್ನಗಳ ನಂತರವೂ ಸಹಾ ನಿರೀಕ್ಷಿತ ಯಶಸ್ಸು ಎನ್ನುವುದು ಸಿಗುವುದಿಲ್ಲ. ಇದಕ್ಕೆ ಕಾರಣ ವಾಸ್ತುವಿನಲ್ಲಿ ಇರುವ ದೋಷ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅನೇಕರು ತಮ್ಮ ಈ ಸಮಸ್ಯೆಯಿಂದ ಪರಿಹಾರವನ್ನು ಬಯಸುತ್ತಾರೆ.‌ ವಾಸ್ತುಶಾಸ್ತ್ರದ ಪ್ರಕಾರ ವ್ಯಾಪಾರ, ವ್ಯವಹಾರ ವೃದ್ಧಿಗೆ ಈ ಐದು ಶುಭಕರ ಸಲಹೆಗಳು ಪಾಲಿಸಬೇಕು ಎನ್ನಲಾಗಿದೆ. ಹಾಗಿದ್ದರೆ ಯಾವುವು ಆ ಐದು ಸಲಹೆಗಳನ್ನು ತಪ್ಪದೇ ಪಾಲಿಸಿ.

೧. ಅರಿಶಿನ ಮತ್ತು ಗೋಮತಿ ಚಕ್ರ : ಶುಕ್ಲಪಕ್ಷದ ಗುರುವಾರದ ದಿನ ಅರಿಶಿನ ಮತ್ತು ಗೋಮತಿ ಚಕ್ರಕ್ಕೆ ತಿಲಕ ವನ್ನು ಹಚ್ಚಿ, ಹಳದಿ ಬಟ್ಟೆಯಲ್ಲಿ ಅದನ್ನು ಇರಿಸಿ, ವ್ಯವಹಾರ ಅಥವಾ ವ್ಯಾಪಾರ ನಡೆಸುವ ಸ್ಥಳ ಅಥವಾ ಕಛೇರಿಯ ಪ್ರವೇಶ ದ್ವಾರದಲ್ಲಿ ಇರಿಸಬಹುದು. ಅದೇ ರೀತಿಯಲ್ಲಿ ನೀವು ಬಯಸುವುದಾದರೆ ಆ ಚಕ್ರವನ್ನು ಕ್ಯಾಶ್ ನಲ್ಲಿ ಕೂಡಾ ಇಟ್ಟುಕೊಳ್ಳ ಬಹುದಾಗಿರುತ್ತದೆ.

೨. ಈ ಪ್ರಾಣಿಗಳಿಗೆ ಆಹಾರವನ್ನು ನೀಡಿ : ವ್ಯಾಪಾರಕ್ಕೆ ಹೊರಡುವ ಮೊದಲು ಹಸು ,ನಾಯಿ ಅಥವಾ ಕಾಗೆಗಗಳಿಗೆ ಆಹಾರವನ್ನು ನೀಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಹೀಗೆ ಮಾಡಿದರೆ ವ್ಯವಹಾರದಲ್ಲಿ ಉತ್ತಮ ಪ್ರಗತಿಯು ಕಾಣುವುದು ಎಂದೂ ಹಾಗೂ ವ್ಯವಹಾರದಲ್ಲಿ ಸಿಲುಕಿರುವ ಹಣ ಕೂಡಾ ವಾಪಸಾಗುವ ಅಥವಾ ಅದರ ಸುಲಭ ಚಲನೆಗೆ ನೆರವನ್ನು ನೀಡುತ್ತದೆ.

೩. ನಿಂಬೆ ಮತ್ತು ಹಸಿರು ಮೆಣಸಿನಕಾಯಿ : ವ್ಯವಹಾರದ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ ನಷ್ಟ ಉಂಟಾಗುವುದು ಎನ್ನುವ ನಂಬಿಕೆ ಇದ್ದು, ಇಂತಹ ದೃಷ್ಟಿಯಿಂದ ತಪ್ಪಿಸಲು ಒಂದು ನಿಂಬೆಹಣ್ಣು ಹಾಗೂ ಏಳು ಮೆಣಸಿನಕಾಯಿಗಳನ್ನು ತೆಗೆದುಕೊಂಡು, ಅದನ್ನು ಪೋಣಿಸಿ, ವ್ಯವಹಾರದ ಸ್ಥಳದಲ್ಲಿ ಅದನ್ನು ಕಟ್ಟಬೇಕು. ಇದರಿಂದ ಯಾರದೇ ದೃಷ್ಟಿಯು ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರದು.

೪. ಕಚ್ಚಾ ನೂಲಿನ ಬಳಕೆ : ಹಸಿಯಾದ ಹತ್ತಿಯನ್ನು ಕೇಸರಿ ದ್ರಾವಣದಲ್ಲಿ ನೆನೆಸಿಡಿ. ನಂತರ ಅದನ್ನು ನಿಮ್ಮ ವ್ಯಾಪಾರದ ಸ್ಥಳದಲ್ಲಿ ಅಥವಾ ಕ್ಯಾಶ್ ನಲ್ಲಿ ಇಟ್ಟು ಕೊಳ್ಳುವುದು ಸಹಾ ಶುಭ ಫಲವನ್ನು ನೀಡುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುವುದುಂಟು.

೫. ಸೂಕ್ತ ಆಸನದ ದಿಕ್ಕು : ವ್ಯಾಪಾರದ ಸ್ಥಳದಲ್ಲಿ ಯಾವಾಗಲೂ ಈಶಾನ್ಯ ಮೂಲೆಯಲ್ಲಿ ಆಸನವನ್ನು ಹಾಕಿ, ಕೂರುವುದು ವ್ಯಾಪಾರಕ್ಕೆ ಶುಭ ಪ್ರದ ಎನ್ನಲಾಗಿದೆ. ಇದರಿಂದ ವ್ಯಾಪಾರ ಸ್ಥಳದ ವಾಸ್ತು ದೋಷಗಳು ನಿವಾರಣೆ ಆಗುತ್ತವೆ ಎನ್ನಲಾಗಿರುವುದು ಮಾತ್ರವೇ ಅಲ್ಲದೇ ವ್ಯಾಪಾರದಲ್ಲಿ ವೃದ್ಧಿ ಕೂಡಾ ಆಗುತ್ತದೆ ಎಂದು ಹೇಳಲಾಗುತ್ತದೆ.

Leave A Reply

Your email address will not be published.