ಈ ಹಲ್ಲಿಯ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ: BMW ಕಾರಿನ ಬೆಲೆಗಿಂತ ದುಬಾರಿ ಹಲ್ಲಿಯ ವಿಶೇಷತೆ ಏನು ಗೊತ್ತಾ?

Entertainment Featured-Articles News Wonder

ಸಾಮಾನ್ಯವಾಗಿ ಎಲ್ಲರೂ ಸಹಾ ಮನೆಗಳಲ್ಲಿ ಹಲ್ಲಿಗಳನ್ನು ನೋಡಿರುತ್ತಾರೆ. ಮನೆಯ ಸದಸ್ಯರು ಹಲ್ಲಿಗಳನ್ನು ನೋಡಿದಾಗ ಭಯ ಪಟ್ಟಿರುವ ಸನ್ನಿವೇಶಗಳು ಕೂಡಾ ನಡೆದಿರುತ್ತದೆ.‌ ಅಲ್ಲದೇ ಅವು ಮನೆಯಲ್ಲಿ ಯಾರ ದೇಹದ ಯಾವುದೇ ಭಾಗದ ಮೇಲೆ ಬಿದ್ದಾಗ, ಹಲ್ಲಿ ಬಿದ್ದುದ್ದರಿಂದ ಯಾವ ಫಲ ಅಥವಾ ದೋಷವುಂಟಾಗುತ್ತದೆ ಎನ್ನುವುದನ್ನು ಪಂಚಾಂಗದಲ್ಲಿ ನೋಡುವವರ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ. ಇನ್ನು ಕೆಲವರು ಹಲ್ಲಿಗಳನ್ನು ಮನೆಯಿಂದ ಓಡಿಸುವುದಕ್ಕೆ ಪರಿಣಾಮಕಾರಿ ಮಾರ್ಗಗಳು ಯಾವುವು ಎಂದು ಹುಡುಕಿ ಅದರ ಪ್ರಯೋಗವನ್ನು ಮಾಡುವುದನ್ನು ನಾವು ಗಮನಿಸಿದ್ದೇವೆ.

ಇವೆಲ್ಲವುಗಳಿಗಿಂತ ಭಿನ್ನವಾಗಿ ಮನೆಯಲ್ಲಿರುವ ಹಲ್ಲಿಯು ನಿಮ್ಮನ್ನು ಕೋಟ್ಯಾಧಿಪತಿ ಯನ್ನಾಗಿ ಮಾಡಬಲ್ಲುದು ಎನ್ನುವ ಆಲೋಚನೆಯನ್ನು ಎಂದಾದರೂ ನೀವು ಮಾಡಿರುವಿರಾ? ಈ ಮಾತನ್ನು ಕೇಳಿದಾಗ ನಿಮಗೆ ಅಚ್ಚರಿ ಉಂಟಾಗಿರಬಹುದು. ಆದರೆ ನಾವು ಇಂದು ಹೇಳಲು ಹೊರಟಿರುವ ಹಲ್ಲಿಯ ಬೆಲೆಯು ಬಿಎಂಡಬ್ಲ್ಯೂ ಅಥವಾ ಫೆರಾರಿ ಕಾರಿನ ಬೆಲೆಯಷ್ಟೇ ದುಬಾರಿಯಾಗಿದೆ. ಈ ಹಲ್ಲಿಗಳು ಮನೆಯಲ್ಲಿ ಕಂಡುಬರುವ ಹಲ್ಲಿಗಳಿಗಿಂತ ಸ್ವಲ್ಪ ಭಿನ್ನವಾಗಿದ್ದು, ಈ ವಿಶೇಷ ಹಳ್ಳಿಯ ಹೆಸರು ಗೇಕೋ ಹಲ್ಲಿ ಎನ್ನಲಾಗಿದೆ. (Gecko Lizards) 

ಗೆಕೋ ಹಲ್ಲಿಗೆ ಇಷ್ಟೊಂದು ದುಬಾರಿ ಬೆಲೆ ಏಕೆ ಎಂದರೆ, ಅದಕ್ಕೆ ಕೆಲವು ವಿಶೇಷ ಕಾರಣಗಳಿವೆ. ಈ ಜಾತಿಯ ಹಲ್ಲಿಗಳು ಇಡೀ ವಿಶ್ವದಲ್ಲಿ ಎರಡು ಕಡೆ ಮಾತ್ರ ಕಂಡುಬರುತ್ತದೆ. ಭಾರತದ ಬಿಹಾರ ರಾಜ್ಯದಲ್ಲಿ ಮತ್ತು ನೇಪಾಳದಲ್ಲಿ ಮಾತ್ರ ಇವು ನೋಡಲು ಸಿಗುತ್ತವೆ. ಈ ಹಲ್ಲಿಗಳ ಸಂಖ್ಯೆ ಬಹಳ ವಿರಳವಾಗಿರುವುದರಿಂದ ಇವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಅಲ್ಲದೇ ಭಾರತದಲ್ಲಿ ಅವುಗಳನ್ನು ಬೇಟೆಯಾಡುವುದು, ಮಾರಾಟ ಮಾಡುವುದು ಹಾಗೂ ಖರೀದಿ ಮಾಡುವುದನ್ನು ಅಕ್ರಮ ಎಂದು ಘೋಷಣೆ ಮಾಡಲಾಗಿದೆ.

ಕಾನೂನಿನ ಕಠಿಣ ನಿಯಮ ಕಾರಣದಿಂದಾಗಿ ಕಳ್ಳಸಾಗಾಣಿಕೆದಾರರು ಈ ಹಲ್ಲಿಗಳನ್ನು ಗುಟ್ಟಾಗಿ ಹಿಡಿದು, ಕಾಳ ಸಂತೆಯಲ್ಲಿ ಅವುಗಳ ಮಾರಾಟವನ್ನು ಮಾಡುತ್ತಾರೆ. ಗೆಕೋ ಹಲ್ಲಿಯ ಬೆಲೆ ಸಾಮಾನ್ಯವಾಗಿ 70 ರಿಂದ 80 ಲಕ್ಷ ರೂಪಾಯಿಗಳ ಆಗಿರುತ್ತವೆ. ಒಂದು ವೇಳೆ ಅವುಗಳ ಗಾತ್ರ ದೊಡ್ಡದಾಗಿದ್ದರೆ ಅವುಗಳಿಗೆ ಕೋಟಿ ರೂಪಾಯಿ ಬೆಲೆಯನ್ನು ಕೂಡಾ ಕೊಟ್ಟು ಅದನ್ನು ಖರೀದಿ ಮಾಡುವವರಿದ್ದಾರೆ ಎಂದರೆ ಅದು ಅತಿಶಯೋಕ್ತಿ ಅಲ್ಲ.‌ ಗೆಕೋ ಹಲ್ಲಿಗೆ ಇಷ್ಟೊಂದು ದುಬಾರಿ ಬೆಲೆ ಏತಕ್ಕೆ ನೀಡುತ್ತಾರೆ ಎನ್ನುವುದಕ್ಕೂ ಕಾರಣವಿದೆ.

ಈ ಹಲ್ಲಿಯನ್ನು ಕೆಲವೊಂದು ಮಾ ರ ಣಾಂ ತಿಕ ಕಾಯಿಲೆಗಳ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎನ್ನಲಾಗಿದೆ. ಅಲ್ಲದೇ ಚೀನಾದಲ್ಲಿ ಸಾಂಪ್ರದಾಯಿಕ ಔಷಧಿಗಳ ತಯಾರಿಕೆಯಲ್ಲಿ ಈ ಹಲ್ಲಿಗೆ ವಿಶೇಷ ಮಹತ್ವವಿದೆ ಎಂದು ತಿಳಿದುಬಂದಿದ್ದು ಇದೇ ಕಾರಣದಿಂದಾಗಿಯೇ ಈ ಹಲ್ಲಿಯನ್ನು ದುಬಾರಿ ಬೆಲೆ ನೀಡಿ ಖರೀದಿ ಮಾಡುತ್ತಾರೆ ಎನ್ನಲಾಗಿದೆ.

Leave a Reply

Your email address will not be published.