ಈ ಸಿಗ್ನೇಚರ್ ಫೋರ್ಜರಿ ಮಾಡೋ ಧಮ್ ಇದ್ಯಾ?? ವೈರಲ್ ಆಗ್ತಿದೆ ಈ ಡಾಕ್ಟರ್ ಸಿಗ್ನೇಚರ್!!

Entertainment Featured-Articles News

ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಅನೇಕ ಫೋಟೋಗಳು, ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ನೆಟ್ಟಿಗರು ಸಹಾ ಇಂತಹ ವೀಡಿಯೋಗಳನ್ನು ಮತ್ತು ಫೋಟೋಗಳನ್ನು ಸಖತ್ ಎಂಜಾಯ್ ಮಾಡುತ್ತಾರೆ. ಹೀಗೆ ವೈರಲ್ ಆಗುವ ಫೋಟೋಗಳಲ್ಲಿ ವೈವಿದ್ಯಮಯ ಎನಿಸುವಂತಹ, ವಿಚಿತ್ರ ಎನಿಸುವಂತಹ ಹಾಗೂ ಕೆಲವೊಮ್ಮೆ ತಮಾಷೆ ಎನಿಸುವ ಫೋಟೋಗಳು ಸಹಾ ಎಲ್ಲರ ಗಮನವನ್ನು ಸೆಳೆಯುತ್ತವೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಎಲ್ಲರ ಗಮನವನ್ನು ಸೆಳೆಯುತ್ತಿದ್ದರು, ಫೋಟೋ ನೋಡಿ ಜನರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈಗ ವೈರಲ್ ಆಗಿರುವುದು ಡಾಕ್ಟರ್ ಒಬ್ಬರ ಸಹಿಯ ಫೋಟೋ ಆಗಿದೆ. ಈ ಫೋಟೋ ಮಾದ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ‌ಇನ್ನು ವೈರಲ್ ಆಗಿರುವ ಫೋಟೋದಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುವಿರಾ? ಹಾಗೆನ್ನುವುದಾದರೆ ಖಂಡಿತ ಈ ಫೋಟೋದಲ್ಲಿ ಒಂದು ವಿಶೇಷ ಇದೆ. ಆ ವಿಶೇಷ ಏನೆಂದರೆ ಈ ವೈದ್ಯರು ಮಾಡಿರುವ ಸಹಿಯನ್ನು ಬೇರೆ ಯಾರಿಂದಲೂ ಸಹಾ ಫೋರ್ಜರಿ ಮಾಡುವುದು ಅಸಾಧ್ಯ ಎಂದೇ ನಾವು ಹೇಳಬಹುದಾಗಿದೆ.

ವೈದ್ಯರು ಮಾಡಿರುವ ಈ ಸಹಿಯನ್ನು ಫೋರ್ಜರಿ ಮಾಡುವುದು ಖಂಡಿತ ಕಠಿಣ ಎನ್ನುವಷ್ಟು ಕಠಿಣವಾಗಿದೆ ಈ ಸಹಿ. ಮಕ್ಕಳು ಸಾಮಾನ್ಯವಾಗಿ ಶಾಲೆಯ ದಿನಗಳಿಂದಲೇ ತಮ್ಮದೊಂದು ವಿಶಿಷ್ಟ ಸಹಿ ಇರಬೇಕೆಂದು ಪ್ರಯತ್ನಗಳನ್ನು ಮಾಡುತ್ತದೆ‌. ಅವರ ನೋಟ್ ಬುಕ್ ಗಳ ಕೊನೆಯ ಪುಟದಲ್ಲಿ ಅದೆಷ್ಟೋ ಜನರು ಸಹಿಗಳನ್ನು ಹಾಕಿಕೊಂಡಿರುವುದನ್ನು ನಾವು ಗಮನಿಸಬಹುದು. ಈಗ ಈ ಡಾಕ್ಟರ್ ಸಹಿಯನ್ನು ನೋಡಿದರೆ ಅವರು ಇಂತಹ ಸಹಿಯನ್ನು ಕಲಿಯಲು ಎಷ್ಟು ದಿನ ಪ್ರಯತ್ನ ಪಟ್ಟಿದ್ದರೋ, ಎಷ್ಟು ಅಭ್ಯಾಸವನ್ನು ಮಾಡಿದ್ದರೋ ಎನ್ನುತ್ತಿದ್ದಾರೆ ನೆಟ್ಟಿಗರು.

ಐಪಿಎಸ್ ಅಧಿಕಾರಿ ರುಪೇನ್ ಶರ್ಮಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವೈದ್ಯರ ಈ ವಿಚಿತ್ರ ಸಹಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಅವರು ಫೋಟೋ ಶೇರ್ ಮಾಡಿ, ಶೀರ್ಷಿಕೆಯಲ್ಲಿ ಎಲ್ಲಾ ಸಹಿಗಳಿಗೂ ಅಪ್ಪ ಎಂದು ಬರೆದಿದ್ದಾರೆ.‌ ನೆಟ್ಟಿಗರೊಬ್ಬರು ಇದು ಸಹಿಯಂತೆ ಇಲ್ಲ, ಬಹುಶಃ ಸಹಿ ಹಾಕಿದವರು ತಮ್ಮ ಪೆನ್ ಸರಿಯಾಗಿ ಬರೆಯುತ್ತದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡಿದಂತೆ ಇದೆ ಎಂದು ಹೇಳಿದ್ದಾರೆ. ಕೆಲವರು ಇದನ್ನು ನೋಡಿದರೆ ನವಿಲುಗರಿಯಂತೆ ಇದೆ ಎಂದಿದ್ದಾರೆ.

Leave a Reply

Your email address will not be published.