ಈ ಶಾಪಿತ ಶಿವ ಮಂದಿರದಲ್ಲಿ ಪೂಜೆ ಮಾಡಿದರೆ ಅವರ ಸರ್ವನಾಶ ಖಚಿತ: ಶಿವನನ್ನು ಪೂಜಿಸಲು ಹೆದರುವರು ಭಕ್ತರು

Entertainment Featured-Articles News Wonder
79 Views

ದೇಶದಲ್ಲಿ ಅನೇಕ ಶಿವ ಮಂದಿರಗಳು ಇದ್ದು, ಅವು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಭೋಳಾ ಶಂಕರನಾದ ಮಹಾ ಶಿವನನ್ನು ದೇವರುಗಳ ದೇವ ಮಹಾದೇವ ಎಂದೇ ಕರೆಯಲಾಗುತ್ತದೆ. ಲಯ ಕಾರನಾದ ಪರಮ ಶಿವನ ಮಂದಿರಗಳಲ್ಲಿ ಮಹಾ ಶಿವನ ಆರಾಧನೆ ಭಕ್ತಿ ಶ್ರದ್ಧೆಗಳಿಂದ ನಡೆಯುತ್ತದೆ. ಆದರೆ ನಾವಿಂದು ನಿಮಗೆ ಹೇಳಲು ಹೊರಟಿರುವುದು ಒಂದು ವಿಶೇಷ ಶಿವ ಮಂದಿರದ ಬಗ್ಗೆ. ಈ ಮಂದಿರವನ್ನು ನೋಡಲು ದೂರ ದೂರದಿಂದ ಭಕ್ತರು ಬರುವುದುಂಟು ಆದರೆ ಈ ಆಲಯದಲ್ಲಿ ಶಿವನಿಗೆ ಪೂಜೆ, ಅರ್ಚನೆ ಹಾಗೂ ಅಭಿಷೇಕಗಳು ನಡೆಯುವುದಿಲ್ಲ. ಕಾರಣ ಇಲ್ಲಿ ಪೂಜೆ ಮಾಡಿದರೆ ಅಂತಹ ವ್ಯಕ್ತಿಯ ಸರ್ವನಾಶ ಖಚಿತ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ. ಹಾಗಾದರೆ ಎಲ್ಲಿದೆ ಈ ವಿಶೇಷ ಮಂದಿರ? ಏನಿದರ ಕಥೆ? ಎನ್ನುವುದಕ್ಕೆ ಉತ್ತರ ಈ ಲೇಖನ.

ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡದ ಪಿತೋರ್ ಗಡ್ ನ ಥಲ್ ನಿಂದ ಆರು ಕಿಲೋ ಮೀಟರ್ ದೂರದಲ್ಲಿರುವ ಬಲ್ಲಿರ್ ಹಳ್ಳಿಯಿಂದ ಆರು ಕಿಮೀ ದೂರದಲ್ಲಿರುವ ಈ ಶಿವಮಂದಿರವನ್ನು ಹಥಿಯಾ ದೇಗುಲ ಎನ್ನಲಾಗಿದ್ದು,
ಈ ಮಂದಿರದಲ್ಲಿ ಶಿವ ಲಿಂಗವನ್ನು ಸ್ಥಾಪನೆ ಏನೋ ಮಾಡಲಾಗಿದೆ. ಆದರೆ ಶಿವನ ಪೂಜೆ ಮಾತ್ರ ನಡೆಯುವುದಿಲ್ಲ. ನಂಬಿಕೆಯ ಪ್ರಕಾರ ಇದೊಂದು ಶಾಪಿತ ಮಂದಿರ ಎನ್ನಲಾಗಿದೆ. ಒಂದು ವೇಳೆ ಇಲ್ಲಿ ಯಾರಾದರೂ ಪೂಜೆ ಮಾಡಿದರೆ, ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಅವರ ಸರ್ವನಾಶ ಖಚಿತ ಎನ್ನಲಾಗಿದೆ.

ಈ ದೇಗುಲಕ್ಕೆ ಬರುವ ಭಕ್ತರು ಕೋರಿಕೆಗಳನ್ನು ಶಿವನ ಮುಂದೆ ಇಡುತ್ತಾರೆ. ಆದರೆ ಶಿವಲಿಂಗ ಕ್ಕೆ ಪುಷ್ಪ ಇರಿಸುವುದಿಲ್ಲ, ಶಿವಲಿಂಗ ಕ್ಕೆ ಅಭಿಷೇಕ ಮಾಡುವುದೂ ಇಲ್ಲ. ಪುರಾಣಗಳ ಪ್ರಕಾರ ಇಲ್ಲೊಬ್ಬ ಶಿಲ್ಪಕಾರನಿದ್ದನು ಎನ್ನಲಾಗಿದ್ದು, ದು ರ್ಘ ಟನೆ ಒಂದರಲ್ಲಿ ಆತ ತನ್ನ ಒಂದು ಕೈ ಕಳೆದುಕೊಂಡನು. ನಂತರ ಆತ ತಾನು ತನ್ನ ಒಂದೇ ಕೈಯಿಂದ ಶಿವಲಿಂಗ ನಿರ್ಮಿಸುವ ಕಾರ್ಯವನ್ನು ಮಾಡಲು ನಿರ್ಧಾರ ಮಾಡಿದ. ಆದರೆ ಜನ ಅಪಹಾಸ್ಯ ಮಾಡಿದರು. ಇದರಿಂದ ಬೇಸತ್ತ ಆತ ಒಂದು ರಾತ್ರಿ ಗ್ರಾಮ ತೊರೆದು ಹೋಗುತ್ತಾ, ದಕ್ಷಿಣ ದಿಕ್ಕಿನಲ್ಲಿ ಇದ್ದ ಒಂದು ದೊಡ್ಡ ಬಂಡೆಯನ್ನು ಕೊರೆದು ಶಿವಾಲಯ ನಿರ್ಮಾಣ ಮಾಡಿ ಹೊರಟು ಹೋದ.

ಮರುದಿನ ಜನರು ದೇವಾಲಯವನ್ನು ಕಂಡು ಆಶ್ಚರ್ಯ ಪಟ್ಟರು. ಆ ಶಿಲ್ಪಿಯನ್ನು ಹುಡುಕಿದರು ಆದರೆ ಸಿಗಲಿಲ್ಲ. ಆತ ಒಂದು ಕೈಯಿಂದ ನಿರ್ಮಾಣ ಮಾಡಿದ ದೇಗುಲ ಏಕ ಹಾಥಿಯಾ ದೇಗಲು ಎಂದೇ ಕರೆಯಲ್ಪಟ್ಟಿತು. ನಂತರ ಅರ್ಚಕರು ದೇಗುಲದಲ್ಲಿ ನೋಡಿದಾಗ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ಹರಿಯುವ ನೀರಿನ ಧಾರೆ ಸಾಮಾನ್ಯವಾಗಿ ಹರಿಯುವ ದಿಕ್ಕಿಗೆ ವಿ ರು ದ್ಧ ದಿಕ್ಕಿನಲ್ಲಿ ಹರಿಯುವ ಹಾಗೆ ಶಿಲ್ಪಿ ಶಿವಲಿಂಗ ಕೆತ್ತನೆ ಮಾಡಿದ್ದನ್ನು ಗಮನಿಸಿದರು. ಆದ್ದರಿಂದಲೇ ಇಲ್ಲಿ ಶಿವಲಿಂಗ ಕ್ಕೆ ಪೂಜೆ ಮಾಡಿದರೆ ಶುಭದ ಬದಲಿಗೆ ಅಶುಭ ಫಲಗಳು ಪ್ರಾಪ್ತವಾಗುತ್ತದೆ ಎಂಬುದು ಇಲ್ಲಿನ ಸ್ಥಳ ಪುರಾಣವಾಗಿದೆ.

Leave a Reply

Your email address will not be published. Required fields are marked *