ಈ ವಿಷಯದಲ್ಲಿ ಕನ್ನಡ ಚಿತ್ರರಂಗವನ್ನು ಕೇಂದ್ರ ಸರ್ಕಾರ ಪದೇ ಪದೇ ಕಡೆಗಣಿಸುತ್ತಿರುವುದು ಎಷ್ಟು ಸರಿ??

Written by Soma Shekar

Published on:

---Join Our Channel---

ಗಣರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಕೇಂದ್ರ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಬಾರಿ ಕೇಂದ್ರ ಸರ್ಕಾರವು 4 ಪದ್ಮವಿಭೂಷಣ, 17 ಪದ್ಮಭೂಷಣ ಹಾಗೂ 107 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಣೆ ಮಾಡಿದ ನಂತರ ಮಾಧ್ಯಮಗಳ ಮೂಲಕ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಸಾಧಕರ ಪರಿಚಯ ಎಲ್ಲರಿಗೂ ಆಗಿದೆ.

ಈ ಬಾರಿ ಪದ್ಮ ಪ್ರಶಸ್ತಿಗಳಲ್ಲಿ 34 ಜನ ಮಹಿಳೆಯರು ಹತ್ತು ಜನ ವಿದೇಶೀಯರು ಇದ್ದು, 13 ಮಂದಿ ಸಾಧಕರಿಗೆ ಮ ರ ಣೋತ್ತರವಾಗಿ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಆದರೆ ಗಮನಿಸಬೇಕಾದ ಅಂಶವೇನೆಂದರೆ ಈ ಬಾರಿಯೂ ಕೂಡಾ ಕನ್ನಡ ಚಿತ್ರರಂಗಕ್ಕೆ ಯಾವುದೇ ಪದ್ಮ ಪ್ರಶಸ್ತಿ ದಕ್ಕಿಲ್ಲ. ಕೇಂದ್ರ ಸರ್ಕಾರ ಮತ್ತೊಮ್ಮೆ ಕನ್ನಡ ಚಿತ್ರರಂವನ್ನು ಕಡೆಗಣಿಸಿತೇನು? ಎನ್ನುವ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಸಹಾ ಮೂಡಿದೆ.

2022 ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಯಾರಿಗೆ ಸಿಗಬೇಕು ಎನ್ನುವುದನ್ನು ಆಯ್ಕೆ ಮಾಡಿ ಎಂದು ಆಯಾ ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆಯನ್ನು ನೀಡಿದ್ದರು. ಆಗ ಕರ್ನಾಟಕದ ಜನತೆ ಕನ್ನಡ ಚಿತ್ರರಂಗದಿಂದ ಯಾವ ನಟನಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎನ್ನುವುದರ ಕುರಿತಾಗಿ ಒಂದು ಅಭಿಯಾನವನ್ನೇ ಪ್ರಾರಂಭಿಸಿದ್ದರು. ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಹೆಸರನ್ನು ಮಾಡಿರುವ ಹಿರಿಯ ನಟ ಅನಂತನಾಗ್ ಕನ್ನಡಿಗರ ಆಯ್ಕೆಯಾಗಿದ್ದರು.

ಅನಂತನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕೆಂದು ನಾಡಿನ ಜನತ ಸೋಶಿಯಲ್ ಮೀಡಿಯಾ ಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದರು. ಹಲವು ಮಾದ್ಯಮಗಳಲ್ಲಿ ಈ ವಿಷಯ ಸುದ್ದಿಯಾಯಿತು. ದೊಡ್ಡ ಮಟ್ಟದಲ್ಲಿ ಅಭಿಯಾನ ಸದ್ದು ಮಾಡಿತು. ಆದರೆ ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಜನತೆಯು ನಡೆಸಿದ್ದ ಅಭಿಯಾನಕ್ಕೆ ಯಾವುದೇ ಮನ್ನಣೆ ದೊರೆಯಲಿಲ್ಲ, ಕೇಂದ್ರ ಸರ್ಕಾರ ನಾಡಿನ ಜನರ ಅಭಿಪ್ರಾಯಕ್ಕೆ ಗಮನ ನೀಡಲಿಲ್ಲವೇ? ಎನ್ನುವ ಪ್ರಶ್ನೆ ಪ್ರಶಸ್ತಿ ವಿಜೇತರ ಹೆಸರು ಘೋಷಣೆ ಆದ ಮೇಲೆ ಮೂಡಿದೆ.

ಇದಲ್ಲದೇ ಕನ್ನಡ ಚಿತ್ರರಂಗದಲ್ಲಿ ಅಪಾರವಾದ ಸಾಧನೆಯನ್ನು ಮೆರೆದು, ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ನಟ ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿಯೇ ಅಕಾಲಿಕವಾಗಿ ಇಹಲೋಕವನ್ನು ತ್ಯಜಿಸಿದರು. ನಾಡಿನ ಜನತೆಗೆ ದೊಡ್ಡ ಆ ಘಾ ತವನ್ನು ನೀಡಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎನ್ನುವ ವಿಚಾರವನ್ನು ಕೇಂದ್ರದ ಗಮನಕ್ಕೆ ತಂದಿದ್ದರು, ಆದರೆ ಅದು ಕೂಡಾ ಪ್ರಯೋಜನವಾಗಿಲ್ಲ.

ಕಳೆದ ವರ್ಷ ಬಾಲಿವುಡ್ ನಲ್ಲಿ ನಟಿ ಕಂಗನಾ ರಣಾವತ್, ನಿರ್ಮಾಪಕರಾದ ಕರಣ್ ಜೋಹರ್ ಹಾಗೂ ಏಕ್ತಾಕಪೂರ್ ಸೇರಿದಂತೆ ಮೂರು ಜನಕ್ಕೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಈ ವರ್ಷವಾದರೂ ಕನ್ನಡ ಚಿತ್ರರಂಗದ ಸಾಧಕರಿಗೆ ಪದ್ಮ ಪ್ರಶಸ್ತಿ ಸಿಗುತ್ತದೆ ಎಂದು ಕಟ್ಟಿದ ನಿರೀಕ್ಷೆಗಳು ಸುಳ್ಳಾಗಿದೆ. ಮತ್ತೊಮ್ಮೆ ಇದು ಜನರ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಅಲ್ಲದೇ ಪ್ರಶಸ್ತಿಗಳ ವಿಚಾರದಲ್ಲಿ ಕನ್ನಡ ಚಿತ್ರರಂಗವನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿರುವುದು ಏಕೆಂದು ಕನ್ನಡ ಸಿನಿ ಪ್ರೇಮಿಗಳು ಪ್ರಶ್ನೆ ಮಾಡುತ್ತಿದ್ದಾರೆ.

Leave a Comment