ಈ ವಿಷಯಗಳಲ್ಲಿ ಮಹಿಳೆ ಪುರುಷನಿಗಿಂತ ಮುಂದೆ ಇರುತ್ತಾಳೆ: ತಿಳಿದರೆ ಅಚ್ಚರಿಯಾಗುತ್ತದೆ.

Entertainment Featured-Articles News
61 Views

ಆಚಾರ್ಯ ಚಾಣಕ್ಯ ನ ಅರ್ಥಶಾಸ್ತ್ರ, ರಾಜತಾಂತ್ರಿಕತೆ ಹಾಗೂ ರಾಜಕೀಯ ವಿಶ್ವ ಪ್ರಸಿದ್ಧವಾಗಿದೆ. ಇದು ಅನೇಕರಿಗೆ ಸ್ಪೂರ್ತಿಯಾಗಿದೆ. ಚಂದ್ರಗುಪ್ತ ಮೌರ್ಯನ ಮಾರ್ಗದರ್ಶಕ ಹಾಗೂ ಸಲಹೆಗಾರನಾದ ಚಾಣಕ್ಯನ ಬುದ್ಧಿವಂತಿಕೆ ಮತ್ತು ನೀತಿಗಳಿಂದ ನಂದ ವಂಶವನ್ನು ನಾಶಪಡಿಸುವ ಮೂಲಕ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಲಾಯಿತು. ಆಚಾರ್ಯ ಚಾಣಕ್ಯ ತನ್ನ ನೀತಿ ಗಳಿಂದಲೇ ಒಬ್ಬ ಸಾಮಾನ್ಯ ಬಾಲಕನಾಗಿದ್ದ ಚಂದ್ರಗುಪ್ತ ಮೌರ್ಯನನ್ನು ಸಾಮ್ರಾಟನನ್ನಾಗಿ ಮಾಡುವಲ್ಲಿ ಯಶಸ್ಸನ್ನು ಪಡೆದುಕೊಂಡರು.

ಅವರ ಇಂತಹ ನೀತಿಗಳ ಕಾರಣದಿಂದಲೇ ಅವರನ್ನು ಕೌಟಿಲ್ಯ ಎಂದು ಕೂಡ ಕರೆಯಲಾಗುತ್ತದೆ.‌ ಆಚಾರ್ಯ ಚಾಣಕ್ಯ ತಮ್ಮ ನೀತಿ ಸಂಹಿತೆಯ ಮೂಲಕ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿದ್ದಾರೆ. ಆಚಾರ್ಯ ಚಾಣಕ್ಯನ ನೀತಿಗಳನ್ನು ಅಳವಡಿಸಿಕೊಂಡವರು, ಅದನ್ನು ತಮ್ಮ ಜೀವನದಲ್ಲಿ ಪಾಲಿಸಿದವರು ಜೀವನದಲ್ಲಿ ವಿಫಲರಾಗುವುದು ಅಸಾಧ್ಯ. ಇಂದಿನ ಆಧುನಿಕ ಕಾಲದಲ್ಲಿಯೂ ಸಹಾ ಚಾಣಕ್ಯನ ನೀತಿ ಸಂಹಿತೆಗಳು ಬಹಳಷ್ಟು ಪರಿಣಾಮಕಾರಿಯಾಗಿವೆ.

ಆಚಾರ್ಯ ಚಾಣಾಕ್ಯ ತಮ್ಮ ಒಂದು ಪದ್ಯದಲ್ಲಿ ಮಹಿಳೆಯರ ನಾಲ್ಕು ಗುಣಗಳ ಬಗ್ಗೆ ಹೇಳುತ್ತಾರೆ. ಅವರು ಈ ಗುಣಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದೆ ಇರುತ್ತಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಹಾಗಾದರೆ ಮಹಿಳೆಯರು ಪುರುಷರಿಗಿಂತ ಮುಂದೆ ಇರುವಂತಹ ಆ ಗುಣಗಳು ಯಾವುವು ಎನ್ನುವುದನ್ನು ನಾವಿಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಧೈರ್ಯಶಾಲಿಗಳಾಗಿರುತ್ತಾರೆ. ಅವರು ಪುರುಷರಿಗಿಂತ ಆರು ಪಟ್ಟು ಹೆಚ್ಚು ಧೈರ್ಯಶಾಲಿ ಗಳಾಗಿರುತ್ತಾರೆ ಎನ್ನಲಾಗಿದ್ದು, ಅವರು ಯಾವುದೇ ಪರಿಸ್ಥಿತಿಯಲ್ಲೂ ಹೆದರುವುದಿಲ್ಲ ಎಂದು ಹೇಳಲಾಗುತ್ತದೆ. ಇನ್ನು ಕಾಮದ ವಿಚಾರದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ, ಅವರು ಈ ವಿಚಾರದಲ್ಲಿ ಪುರುಷನಿಗಿಂತ ಎಂಟು ಪಟ್ಟು ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಹಸಿವಿನ ವಿಚಾರದಲ್ಲಿ ಸ್ತ್ರೀಯರು ಪುರುಷರಿಗಿಂತ ದುಪ್ಪಟ್ಟು ಹಸಿವನ್ನು ಹೊಂದಿರುತ್ತಾರೆ ಎಂದು, ಆಚಾರ್ಯರು ಇದನ್ನೇ ಸ್ತ್ರೀನಾಂ ದ್ವಿಗುಣ ಆಹಾರೋ ಎಂದು ವಿವರಿಸುತ್ತಾರೆ. ಸ್ತ್ರೀಯರಿಗೆ ಪುರುಷರಿಗಿಂತ ಹೆಚ್ಚು ಹಸಿವಿನ ಅನುಭವವಾಗುತ್ತದೆ. ಊಟದ ವಿಚಾರದಲ್ಲಿ ಅವರು ಪುರುಷರಿಗಿಂತ ಮುಂದೆ ಇರುತ್ತಾರೆ. ಮಹಿಳೆಯರಿಗೆ ಅವರ ದೇಹದ ಸಂಯೋಜನೆಯಿಂದಾಗಿ ಹೆಚ್ಚಿನ ಕ್ಯಾಲರಿಗಳ ಅವಶ್ಯಕತೆ ಇರುತ್ತದೆ. ಆದ್ದರಿಂದಲೇ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವ ಸಲಹೆಗಳು ನೀಡಲಾಗುತ್ತದೆ.

ಬುದ್ಧಿವಂತಿಕೆಯ ವಿಚಾರದಲ್ಲೂ ಕೂಡಾ ಮಹಿಳೆಯರು ಪುರುಷರಿಗಿಂತ ಮುಂದೆ ಇರುತ್ತಾರೆ. ಅವರು ತಮ್ಮ ಬುದ್ದಿವಂತಿಕೆಯಿಂದ ಜೀವನದ ಕಠಿಣ ಪರಿಸ್ಥಿತಿಗಳಿಂದ ಹೊರಗೆ ಬರುತ್ತಾರೆ ಎಂದಿದ್ದಾರೆ‌ ಆಚಾರ್ಯರು. ಸಾಮಾನ್ಯವಾಗಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಧೈರ್ಯಶಾಲಿಗಳು ಎಂದು ಹೇಳಲಾಗಿದ್ದರೂ, ಚಾಣಕ್ಯ ನೀತಿಯಲ್ಲಿ ಇದಕ್ಕೆ ಸಂಪೂರ್ಣ ವಿಪರೀತವಾದ ನೀತಿಯನ್ನು ವಿವರಿಸಲಾಗಿದೆ.

Leave a Reply

Your email address will not be published. Required fields are marked *