ಈ ವಿಶಿಷ್ಟ ಹಕ್ಕಿ ತನ್ನ ಜೀವನದಲ್ಲಿ ಒಮ್ಮೆ ಕೂಡಾ ನೆಲದ ಮೇಲೆ ಕಾಲನ್ನಿಡುವುದಿಲ್ಲ: ಅದ್ಭುತ ಎನಿಸುವ ಹಕ್ಕಿ ಇದು

Written by Soma Shekar

Published on:

---Join Our Channel---

ನಮ್ಮ ಜೀವ ಜಗತ್ತಿನಲ್ಲಿ ವೈವಿದ್ಯಮಯವಾದ ಅದೆಷ್ಟೋ ಪ್ರಾಣಿಗಳು, ಪಕ್ಷಿಗಳು ಇವೆ. ಇವುಗಳಲ್ಲಿ ಪಕ್ಷಿಗಳು ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆಯುತ್ತವೆ. ಕೆಲವು ಪಕ್ಷಿಗಳು ನೋಡಲು ಸುಂದರವಾಗಿದ್ದರೆ ಇನ್ನೂ ಕೆಲವು ಪಕ್ಷಿಗಳ ದನಿಯು ಇಂಪಾಗಿದ್ದು, ಮನಸ್ಸಿಗೊಂದು ಮುದವನ್ನು ನೀಡುತ್ತದೆ. ಆದರೆ ನಾವಿಂದು ನಿಮಗೆ ಒಂದು ವಿಶೇಷವಾದ ಹಕ್ಕಿಯ ಬಗ್ಗೆ ಹೇಳಲು ಹೊರಟಿದ್ದೇವೆ. ಇದರ ವಿಶೇಷತೆ ಏನೆಂದರೆ ಈ ಹಕ್ಕಿ ತನ್ನ ಜೀವತಾವಧಿಯಲ್ಲಿ ಎಂದೂ ಕೂಡಾ ನೆಲದ ಮೇಲೆ ಕಾಲನ್ನು ಇಡುವುದಿಲ್ಲ ಎನ್ನುವುದು. ಹೌದು ಇದು ನಿಜ. ಹಾಗಾದರೆ ಬನ್ನಿ ಆ ಹಕ್ಕಿಯ ಬಗ್ಗೆ ತಿಳಿಯೋಣ.

ಈ ಹಕ್ಕಿಯು ಇತರೆ ಹಕ್ಕಿಗಳಿಗಿಂತ ಬಹಳ ಭಿನ್ನವಾಗಿದೆ. ಅದರ ಬಣ್ಣ ಬಣ್ಣದ ಗರಿಗಳು, ಗುಂಡಾದ ಕಣ್ಣುಗಳು ಅದರ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹೌದು ನಾವೀಗ ಹೇಳಲು ಹೊರಟಿರುವುದು ಹಳದಿ ಪಾದದ ಹಸಿರು ಪಾರಿವಾಳದ ಬಗ್ಗೆ. ಈ ಹಕ್ಕಿ ತನ್ನ ಪಾದವನ್ನು ನೆಲದ ಮೇಲೆ ಏಕೆ ಇಡುವುದಿಲ್ಲ, ಇದರ ಹಿಂದಿನ ಕಾರಣವಾದರೂ ಏನು?? ಎನ್ನುವ ಕುತೂಹಲ ನಿಮಗೆ ಮೂಡಿದ್ದರೆ ಅದನ್ನು ಈಗ ತಿಳಿಯೋಣ ಬನ್ನಿ.

ಈ ಹಸಿರು ಹಕ್ಕಿ ಅಥವಾ ಹಸಿರು ಪಾರಿವಾಳ ಪ್ರಮುಖವಾಗಿ ಭಾರತದಲ್ಲೇ ಕಂಡು ಬರುವ ಹಕ್ಕಿಯಾಗಿದೆ. ಇದನ್ನು ಮಹಾರಾಷ್ಟ್ರದ ರಾಜ್ಯ ಪಕ್ಷಿ ಎಂತಲೂ ಕರೆಯುವುದುಂಟು. ಇದರ ಬಣ್ಣ ತಿಳಿ ಹಸಿರು, ಬೂದು ಅಥವಾ ಹಳದಿಯಲ್ಲಿದ್ದರೆ, ಇದರ ಪಾದಗಳು ಮಾತ್ರ ಗಾಢವಾದ ಹಳದಿ ಬಣ್ಣವನ್ನು ಹೊಂದಿದೆ. ಇದರ ಹಸಿರು ಬಣ್ಣದ ಕಾರಣದಿಂದಾಗಿ ಇದನ್ನು ಹಸಿರು ಹಕ್ಕಿ ಎಂದು ಕರೆಯುವರು. ಈ ಹಕ್ಕಿ ಆಲದ ಮರಗಳ ಮೇಲೆ ಎತ್ತರದಲ್ಲಿ ಗೂಡು ಕಟ್ಟಲು ಬಯಸುತ್ತದೆ.

ಈ ಹಕ್ಕಿಯ ಕಣ್ಣುಗಳು ಕಡು ನೀಲಿ ಬಣ್ಣದಲ್ಲಿರುತ್ತದೆ. ಇದು ಹಲಸು, ಸೀಬೆ ಹಾಗೂ ಇತರೆ ಮಾಗಿದ ಹಣ್ಣುಗಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ಈ ಹಸಿರು ಪಾರಿವಾಳಗಳನ್ನು ನೋಡುವುದು ಕಷ್ಟ. ಇವು ನಾಚಿಕೆಯ ಗುಣವನ್ನು ಹೊಂದಿದ್ದು, ಮನುಷ್ಯರ ಬಳಿ ಬರಲು ಇಷ್ಟ ಪಡುವುದಿಲ್ಲ. ಆದ್ದರಿಂದಲೇ ಮನುಷ್ಯರ ಹೆಜ್ಜೆಯ ಸಪ್ಪಳ ಅಥವಾ ಇರುವಿಕೆಯ ಸೂಚನೆ ಸಿಕ್ಕ ಕೂಡಲೇ ಇವು ಅಡಗಿಕೊಳ್ಳುತ್ತವೆ. ಆದ್ದರಿಂದ ಹೆಚ್ಚಾಗಿ ಜನರ ಕಣ್ಣಿಗೆ ಇವು ಬೀಳುವುದಿಲ್ಲ.

ಇನ್ನು ಈ ಹಕ್ಕಿಗಳು ಜೀವನ ಕಾಲದಲ್ಲಿ ನೆಲದ ಮೇಲೆ ಅಥವಾ ಭೂಮಿಯ ಮೇಲೆ ಕಾಲನ್ನು ಇಡದೇ ಇರಲು ಪ್ರಮುಖ ಕಾರಣ ಇವುಗಳ ಸೋಮಾರಿತನ ಎನ್ನಲಾಗಿದೆ. ಇವು ತಮ್ಮ‌ ನೀರು ಆಹಾರಕ್ಕೆ ಸಮಸ್ಯೆಯಿರದ ಜಾಗಗಳಲ್ಲಿ ಎತ್ತರವಾದ, ಆಹಾರ ಸುಲಭವಾಗಿ ಸಿಗುವ ಮರಗಳ ಮೇಲೆ ಗೂಡು ಕಟ್ಟುತ್ತವೆ. ಆದ್ದರಿಂದಲೇ ನೆಲದ ಮೇಲೆ ಬರುವಂತಹ ಅವಶ್ಯಕತೆ ಬೀಳುವುದಿಲ್ಲ. ಅಲ್ಲದೇ ಇದು ಒಂದು ಮರದ ಕೊಂಬೆ ಯಿಂದ ಇನ್ನೊಂದಕ್ಕೆ ಹಾರಿ ಸುತ್ತ ಮುತ್ತಲಿನ ಪರಿಸರವನ್ನು ಪರಿವೀಕ್ಷಣೆ ಮಾಡುತ್ತದೆ.

ಜೀವನ ಪೂರ್ತಿ ಮರದ ಮೇಲೆ ಕಳೆಯುವ ಈ ಹಕ್ಕಿಯನ್ನು ಸೋಮಾರಿ ಹಕ್ಕಿ ಎನ್ನುವರು. ಸಾಮಾನ್ಯವಾಗಿ ಬೇರೆ ಹಕ್ಕಿಗಳು ಸ್ನಾನ ಮಾಡಲು, ಮಣ್ಣಿನಲ್ಲಿರುವ ಹುಳು, ಹುಪ್ಪಟೆಗಳನ್ನು ತಿನ್ನಲು ಕೆಳಗೆ ಬರುತ್ತವೆ. ಆದರೆ ಈ ಹಸಿರು ಹಕ್ಕಿ ಸಸ್ಯಾಹಾರಿ ಆಗಿದ್ದು, ಇದಕ್ಕೆ ಅಂತಹ ಅವಶ್ಯಕತೆ ಇರುವುದಿಲ್ಲ. ಇವುಗಳು ಹೆಣ್ಣು ಮತ್ತು ಗಂಡು ಹಕ್ಕಿಗಳು ನೋಡಲು ಒಂದೇ ರೀತಿಯಲ್ಲಿ ಕಾಣುತ್ತವೆ. ಇವುಗಳ ಜೀವತಾವಧಿ 26 ವರ್ಷಗಳಾಗಿದ್ದು, ಮೂರು ಸೆಂಟಿಮೀಟರ್ ವರೆಗೂ ಬೆಳೆಯುತ್ತವೆ.

ಇವು ಸಾಮಾನ್ಯವಾಗಿ ಐದರಿಂದ ಹತ್ತು ಹಕ್ಕಿಗಳ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳ ಧ್ವನಿ ಮಧುರವಾಗಿದ್ದು, ಇಡೀ ಗುಂಪು ಏಕಕಾಲದಲ್ಲಿ ಧ್ವನಿ ಹೊರಡಿಸಿದಾಗ ರೋಮಾಂಚನವಾಗುತ್ತದೆ. ಈ ಹಕ್ಕಿಗಳು ಭಾರತ ಮಾತ್ರವೇ ಅಲ್ಲದೇ ಶ್ರೀಲಂಕಾ, ನೇಪಾಳ, ಬರ್ಮಾ, ಚೀನಾ, ಪಾಕಿಸ್ತಾನ ಗಳಲ್ಲೂ ಸಹಾ ಕಂಡು ಬರುತ್ತವೆ. ಹಸಿರು ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುವ ಇವು ಮನುಷ್ಯರ ನೆಲೆಗಳಿಂದ ದೂರವೇ ಇರುತ್ತವೆ.

Leave a Comment