ಈ ವಾರ ನಿಮ್ಮ ಮೆಚ್ಚಿನ ರಿಯಾಲಿಟಿ ಶೋ ನಂಬರ್ ಒನ್ ಸ್ಥಾನಕ್ಕೆ ಬಂದಿದ್ಯಾ? ಇಲ್ಲಿದೆ ಮಾಹಿತಿ

0
140

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಮನರಂಜನೆಯ ಬಹು ದೊಡ್ಡ ಮೂಲಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ಯಶಸ್ಸಿನ ನಾಗಾಲೋಟದಲ್ಲಿ ಹಲವು ಸೀರಿಯಲ್ ಗಳು ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವು ಸೀರಿಯಲ್ ಗಳು ಅಲ್ಲಿ ಸ್ಥಾನವನ್ನು ಪಡೆಯಲು ತಮ್ಮದೇ ಆದ ಪ್ರಯತ್ನವನ್ನು ಮಾಡುತ್ತವೆ. ಒಂದು ಕಡೆ ಧಾರಾವಾಹಿಗಳದ್ದು ಕಾರುಬಾರಾದರೆ ಮತ್ತೊಂದು ಕಡೆ ರಿಯಾಲಿಟಿ ಶೋ ಗಳು ಸಹಾ ಮಿಂಚುತ್ತವೆ.

ಹಾಗಾದ್ರೆ ಸದ್ಯಕ್ಕೆ ಕಿರುತೆರೆಯಲ್ಲಿ ಮಿಂಚುತ್ತಿರುವ ರಿಯಾಲಿಟಿ ಶೋ ಗಳಲ್ಲಿ ಯಾವುದು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ, ಟಿ ಆರ್ ಪಿ ಹೆಚ್ಚು ಪಡೆದು ಯಾವ ರಿಯಾಲಿಟಿ ಶೋ ನಂಬರ್ ಒನ್ ಸ್ಥಾನಕ್ಕೆ ಬಂದಿದೆ ಎನ್ನುವುದನ್ನು ತಿಳಿಯುವ ಆಸಕ್ತಿ ನಿಮ್ಮದಾದರೆ ಅದಕ್ಕೆ ಇಲ್ಲಿದೆ ಉತ್ತರ. ರಿಯಾಲಿಟಿ ಶೋ ಗಳು ಬಹಳ ಬೇಗ ಜನಮನವನ್ನು ಗೆಲ್ಲುತ್ತದೆ. ರಿಯಾಲಿಟಿ ಶೋ ಗಳಿಗೆ ಬರುವ ಸ್ಪರ್ಧಿಗಳ, ಸೆಲೆಬ್ರಿಟಿ ಗೆಸ್ಟ್ ಗಳು ಅವರ ಬಗೆಗಿನ ವಿಚಾರಗಳು ಬಹಳ ಬೇಗ ಪ್ರೇಕ್ಷಕರನ್ನು ತಮ್ಮ ಕಡೆಗೆ ಸೆಳೆದು ಬಿಡುತ್ತವೆ.

ಹಾಗಾದ್ರೆ ಮಾದ್ಯಮ ವರದಿಗಳ ಪ್ರಕಾರ ಈ ವಾರ ಯಾವ ರಿಯಾಲಿಟಿ ಶೋ ಗಳು ಟಾಪ್ ರೇಸ್ ನಲ್ಲಿ ಇದೆ ಎನ್ನುವುದನ್ನು ತಿಳಿಯೋಣ ಬನ್ನಿ. ಕಿರುತೆರೆಗೆ ಕೆಲವೇ ದಿನಗಳ ಹಿಂದೆಯಷ್ಟೇ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಿರೂಪಣೆಯ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋ ಕಿರುತೆರೆಯಲ್ಲಿ ಭರ್ಜರಿ ಆರಂಭವನ್ನು ಮಾಡಿದೆ. ವಿಶೇಷ ಎತ್ತರ ಪ್ರಸಾರವಾದ ಮೊದಲನೇ ವಾರವೇ ಈ ರಿಯಾಲಿಟಿ ಶೋ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಆದರೆ ಎರಡನೇ ವಾರದಲ್ಲಿ ಲೆಕ್ಕಾಚಾರಗಳು ಬದಲಾಗಿದೆ.

ಹೌದು ಈ ಬಾರಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ರಿಯಾಲಿಟಿ ಶೋ ಡಾನ್ಸಿಂಗ್ ಚಾಂಪಿಯನ್ 3.4 ಟಿ ಆರ್ ಪಿ ಪಡೆದಿದ್ದು, ಈ ಮೂಲಕ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಈ ಬಾರಿ ಗೋಲ್ಡನ್ ಗ್ಯಾಂಗ್ 2.8 ಟಿ ಆರ್ ಪಿ ಪಡೆದುಕೊಂಡಿದ್ದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ ಎನ್ನಲಾಗಿದೆ. ಡಾನ್ಸಿಂಗ್ ಚಾಂಪಿಯನ್ ಹಾಗೂ ಗೋಲ್ಡನ್ ಗ್ಯಾಂಗ್ ಎರಡೂ ಕೂಡಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಖಂಡಿತ ಪಡೆದಿದೆ. ಮುಂದಿನ ವಾರ ಮತ್ತೆ ಸ್ಥಾನಗಳ ಬದಲಾದರೂ ಆಶ್ಚರ್ಯ ಇಲ್ಲ.

LEAVE A REPLY

Please enter your comment!
Please enter your name here