ಈ ಲಕ್ಷಣಗಳು ಇರುವ ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲೂ ಮಿಂಚುತ್ತಾರೆ: ಆಚಾರ್ಯ ಚಾಣಾಕ್ಯ

Entertainment Featured-Articles News

ಆಚಾರ್ಯ ಚಾಣಾಕ್ಯನು ಹೇಳಿರುವ ವಿಚಾರಗಳು, ತಿಳಿಸಿರುವ ಮಾರ್ಗಗಳು ಜನರ ಉದ್ಧಾರಕ್ಕಾಗಿ, ಶ್ರೇಯೋಭಿವೃದ್ಧಿಗಾಗಿ ಹಾಗೂ ಜೀವನದಲ್ಲಿ ಸಾಧನೆ ಮಾಡಲು ಬಹಳ ಪೂರಕವಾಗಿದೆ. ಆದ್ದರಿಂದಲೇ ಇಂದಿಗೂ ಬಹಳಷ್ಟು ಜನರು ತಮ್ಮ ಜೀವನದಲ್ಲಿ ವಿಜಯವನ್ನು ಸಾಧಿಸಲು ಚಾಣಾಕ್ಯನು ನೀತಿ ಶಾಸ್ತ್ರದಲ್ಲಿ ತಿಳಿಸಿರುವ ನೀತಿ ಮಾರ್ಗಗಳನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಾಕ್ಯನು ವಿದ್ಯಾರ್ಥಿಗಳಿಗೆ ಇರಬೇಕಾದ ಕೆಲವು ವಿಶೇಷ ಲಕ್ಷಣಗಳ ಕುರಿತಾಗಿ ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.

ಚಾಣಾಕ್ಯನು ಹೇಳುವ ಪ್ರಕಾರ ವಿದ್ಯಾರ್ಥಿಗಳು ಈ ವಿಷಯಗಳ ಕಡೆಗೆ ಗಮನ ನೀಡಿದರೆ ಖಂಡಿತ ಅವರು ತಮ್ಮ ಗುರಿಯ ಕಡೆಗೆ ಸಾಗುವ ಹಾದಿಯು ಸುಗುಮವಾಗುವುದು ಮಾತ್ರವೇ ಅಲ್ಲದೇ, ಗುರಿಯನ್ನು ಬಹಳ ಬೇಗ ತಲುಪುವುದಕ್ಕೆ ಸಹಾ ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಚಾಣಾಕ್ಯನು ವಿದ್ಯಾರ್ಥಿಗಳಿಗಾಗಿ ತಿಳಿಸಿರುವ ಆ ವಿಚಾರಗಳು ಯಾವುವು ? ಅವುಗಳ ಮಹತ್ವವೇನು ? ಎನ್ನುವುದನ್ನು ತಿಳಿಯೋಣ ಬನ್ನಿ.

ಶಿಸ್ತು ಬದ್ಧತೆ : ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಎಲ್ಲದಕ್ಕಿಂತ ಮುಖ್ಯವಾಗಿದೆ. ಆಚಾರ್ಯ ಚಾಣಾಕ್ಯನ ಪ್ರಕಾರ ಶಿಸ್ತು ವಿದ್ಯಾರ್ಥಿ ಗಳನ್ನು ಅವರ ಗುರಿಯ ಕಡೆಗೆ ಶೀಘ್ರವಾಗಿ ತಲುಪುವುದಕ್ಕೆ ಬಹಳ ಮುಖ್ಯವಾದ ವಿಚಾರವಾಗಿರುತ್ತದೆ. ಶಿಸ್ತು ಇಲ್ಲದ ವಿದ್ಯಾರ್ಥಿಗಳ ಯಾವ ಕೆಲಸವು ಸಕಾಲದಲ್ಲಿ ಪೂರ್ತಿಯಾಗುವುದಿಲ್ಲ. ಅಶಿಸ್ತು ಅವರನ್ನು ತಪ್ಪು ದಾರಿಗೆ ನಡೆಸುತ್ತದೆ. ಆದ್ದರಿಂದಲೇ ಗುರಿ ತಲುಪಲು ವಿದ್ಯಾರ್ಥಿಗಳಿಗೆ ಶಿಸ್ತು ಅತ್ಯಗತ್ಯವಾಗಿದೆ.

ಸೋಮಾರಿತನವನ್ನು ದೂರ ಮಾಡಿ : ವಿದ್ಯಾರ್ಥಿಗಳ ಅತಿ ದೊಡ್ಡ ಶ ತೃ ಎಂದರೆ ಸೋಮಾರಿತನ. ಆಚಾರ್ಯ ಚಾಣಾಕ್ಯನ ಪ್ರಕಾರ ಯಾವ ವಿದ್ಯಾರ್ಥಿಗಳು ಸೋಮಾರಿತನದಿಂದ ದೂರ ಇರುವರೋ ಅವರು ಪ್ರತಿ ಕಾರ್ಯದಲ್ಲೂ ಸಹಾ ವಿಜಯವನ್ನು ಸಾಧಿಸುವರು. ಅವರು ಕೆಲಸ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಮುಗಿಸುವುದು ಮಾತ್ರವೇ ಅಲ್ಲದೇ ಉತ್ತಮ ಫಲವನ್ನು ನೀಡುತ್ತದೆ. ಸೋಮಾರಿತನ ಇದ್ದ ವಿದ್ಯಾರ್ಥಿಗೆ ಎಂದೂ ಮುಂದೆ ಸಾಗುವುದಿಲ್ಲ.

ದುರಾಸೆ ಪಡಬೇಡ : ದುರಾಸೆ ಅಥವಾ ಅತಿಯಾಸೆ ವಿದ್ಯಾರ್ಥಿಯ ಸಾಧನೆಯ ಹಾದಿಗೆ ಅಡ್ಡಗಾಲು ಆಗಿರುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ದುರಾಸೆ ಇರಬಾರದು. ಅವರ ಲಕ್ಷ್ಯವು ಹೆಚ್ಚಿನ ಜ್ಞಾನಾರ್ಜನೆಯನ್ನು ಅರ್ಜಿಸುವ ಕಡೆಗೆ ಇರಬೇಕು ಹಾಗೂ ಅದಕ್ಕಾಗಿಯೇ ಶ್ರಮವನ್ನು ಪಡಬೇಕು. ಇದು ಜೀವನದಲ್ಲಿ ವಿಜಯವನ್ನು ಸಾಧಿಸಲು ಅತ್ಯಾವಶ್ಯಕವಾಗಿದೆ.

ಗೌರವ : ವಿದ್ಯಾರ್ಥಿಗಳಿಗೆ ತಮ್ಮ ಹಿರಿಯರು, ಗುರುಗಳ ಬಗ್ಗೆ ಅಪಾರವಾದ ಗೌರವ ಇರಬೇಕು. ಅವರನ್ನು ಮರ್ಯಾದೆಯಿಂದ ನಡೆಸಿಕೊಳ್ಳಬೇಕು. ಗುರು, ಹಿರಿಯರು ಹೇಳುವ ಉತ್ತಮ ಮಾತುಗಳನ್ನು ಕೇಳುವುದರ ಜೊತೆಗೆ, ಅವರು ತೋರಿಸಿದಂತಹ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ಗುರು ಹಿರಿಯರು ಹೇಳಿದ್ದನ್ನು ಪಾಲಿಸಿದರೆ, ಅಂತಹ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತವಾದ ಹಂತವನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *