ಈ ಮಹಿಳೆ ತೊಟ್ಟ ಸೀರೆ ಸಾಮಾನ್ಯದ್ದಲ್ಲ: ಸೀರೆ ನೋಡಿ ನೆಟ್ಟಿಗರು ಕೊಟ್ಟ ಉತ್ತರ ಕೂಡಾ ಕಡಿಮೆಯೇನಿಲ್ಲ!!

Entertainment Featured-Articles News Viral Video
27 Views

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಯಾವ ಮಟ್ಟದಲ್ಲಿ ಪ್ರಭಾವಶಾಲಿಯಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅನೇಕ ವಿಷಯಗಳು ಕೆಲವೇ ಕ್ಷಣಗಳಲ್ಲಿ ಜಗತ್ತಿನ ಮೂಲೆ ಮೂಲೆಗಳನ್ನು ತಲುಪುವ ಸಾಮರ್ಥ್ಯವನ್ನು ಈ ಸಾಮಾಜಿಕ ಜಾಲತಾಣಗಳ ಮೂಲಕ ಪಡೆದುಕೊಂಡಿವೆ. ಆದ್ದರಿಂದಲೇ ವಿಶೇಷ, ವಿಚಿತ್ರ, ವೈವಿಧ್ಯಮಯ ಹಾಗೂ ವಿಸ್ಮಯ ಹುಟ್ಟಿಸುವಂತಹ ದೃಶ್ಯಗಳು, ಫೋಟೋಗಳು , ವೀಡಿಯೊಗಳು ಅಥವಾ ಮಾಹಿತಿಗಳು ಬಹಳ ಬೇಗ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಬಿಡುತ್ತವೆ.

ಚಿಪ್ಸ್ ಎಂದರೆ ಬಹಳಷ್ಟು ಜನರಿಗೆ ಸಾಕಷ್ಟು ಇಷ್ಟವಾಗುವಂತಹ ಪದಾರ್ಥವಾಗಿದೆ. ಅನೇಕ ಮಂದಿ ಟೈಂ ಪಾಸ್ ಮಾಡುವುದಕ್ಕೆ ಕೂಡಾ ಚಿಪ್ಸ್ ಗಳನ್ನು ತಿನ್ನುತ್ತಾ ಕಾಲ ಕಳೆಯುತ್ತಾರೆ. ಇನ್ನು ಚಿಪ್ಸ್ ತಿಂದು ಮುಗಿಸಿದ ಮೇಲೆ, ಅದರ ರುಚಿಯನ್ನು ಸವಿದಾದ ಮೇಲೆ ಸಾಮಾನ್ಯವಾಗಿ ಜನರು ಚಿಪ್ಸ್ ಪ್ಯಾಕೆಟನ್ನು ಕಸದ ತೊಟ್ಟಿಗೆ ಎಸೆಯುತ್ತಾರೆ. ಏಕೆಂದರೆ ಆದರಿಂದ ಉಪಯೋಗವಿಲ್ಲ ಎಂದುಕೊಂಡು, ಇಟ್ಟುಕೊಂಡು ಏನು ಮಾಡುವುದು ಎನ್ನುವ ಆಲೋಚನೆಯಿಂದ ಅದನ್ನು ಎಸೆದು ಬಿಡುತ್ತಾರೆ.

ಆದರೆ ಇಲ್ಲೊಬ್ಬ ಮಹಿಳೆ ಬಹಳ ಕ್ರಿಯೇಟಿವ್ ಆಗಿ ಆಲೋಚನೆಯೊಂದನ್ನು ಮಾಡಿದ್ದಾರೆ. ಚಿಪ್ಸ್ ಪ್ಯಾಕೆಟ್ ಗಳಿಂದ ಹೀಗೂ ಮಾಡಬಹುದೇ ಎಂದು ಜನರು ಅಚ್ಚರಿಪಡುವಂತಹ ಕೆಲಸವನ್ನು ಆಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿದರೆ ನೀವು ಕೂಡಾ ಆಶ್ಚರ್ಯ ಪಡುವಿರಿ. ಅಲ್ಲದೇ ವೀಡಿಯೋ ನೋಡಿದ ಮೇಲೆ ನೀವು ಸಹಾ ಒಂದು ನೀಡಬಹುದು ಅಥವಾ ಆ ಕ್ರಿಯೇಟಿವಿಟಿಯನ್ನು ನೋಡಿ ನಕ್ಕು ಸುಮ್ಮನೆ ಆಗಲೂಬಹುದು.

ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಎನ್ನುವುದಾದರೆ ಮಹಿಳೆಯೊಬ್ಬರು ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ಗಳನ್ನು ಬಳಸಿಕೊಂಡು ಸಿದ್ಧಪಡಿಸಿದ ಬೆಳ್ಳಿಯ ಬಣ್ಣದ ಸೀರೆಯನ್ನು ಧರಿಸಿರುವುದು ವಿಡಿಯೋದಲ್ಲಿ ಕಾಣುತ್ತದೆ. ಅಲ್ಲದೇ ಆಕೆ ಆ ಸೀರೆಗೆ ಮ್ಯಾಚ್ ಆಗುವಂತಹ ಬಳೆಗಳು ಹಾಗೂ ಕಿವಿಯೋಲೆಯನ್ನು ಧರಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋವನ್ನು ಬಹಳಷ್ಟು ಜನ ನೋಡಿದ್ದಾರೆ.

ವೈರಲ್ ಆದ ವಿಡಿಯೋವನ್ನು ನೋಡಿದ ಮೇಲೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯ ಕ್ರಿಯೇಟಿವಿಟಿ ನೋಡಿ ಚಿಪ್ಸ್ ಪಾಕೆಟ್ ಗಳನ್ನು ಹೀಗೂ ಬಳಸಬಹುದು ಎಂಬುದನ್ನು ತೋರಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಆಕೆಯ ಪ್ರತಿಭೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ಫ್ಯಾಶನ್ ಹೆಸರಿನಲ್ಲಿ ಇನ್ನೂ ಏನೇನು ನೋಡಬೇಕೋ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಾರೆ ವಿಡಿಯೋ ಮಾತ್ರ ಸದ್ದು ಮಾಡಿದೆ.

Leave a Reply

Your email address will not be published. Required fields are marked *