ಈ ಭಾರತೀಯ‌ನ ಬಳಿ ಇರೋ ಕಾರು ಅಂಬಾನಿ,ಅದಾನಿ ಅಥವಾ ಅಮಿತಾಬ್,ಶಾರೂಖ್ ಹತ್ರ ಕೂಡಾ ಇಲ್ಲ!!

Entertainment Featured-Articles News

ಭಾರತದ ಅತಿ ದೊಡ್ಡ ಶ್ರೀಮಂತರ ಬಳಿಯಾಗಲೀ, ಬಾಲಿವುಡ್ ನ ಸೂಪರ್ ಸ್ಟಾರ್ ಗಳ ಬಳಿಯಾಗಲೀ ಇಲ್ಲದ ಸೂಪರ್ ಕಾರೊಂದು ಭಾರತ ಮೂಲದ ವ್ಯಕ್ತಿಯೊಬ್ಬರ ಬಳಿ ಇದೆ ಎಂದರೆ ಅಚ್ಚರಿ ಆಗಬಹುದಲ್ಲವೇ? ಅಚ್ಚರಿ ಪಡಬೇಡಿ ಏಕೆಂದರೆ ಇದು ನಿಜವಾದ ವಿಷಯವಾಗಿದೆ. ಹೌದು ಭಾರತದ ಅತಿ ಶ್ರೀಮಂತರಾದ ಅಂಬಾನಿ ಅಥವಾ ಅದಾನಿ ಹಾಗೆಯೇ ಬಾಲಿವುಡ್ ನ ದಿಗ್ಗಜರೆನಿಸಿದ ಅಮಿತಾನ್ ಅಥವಾ ಶಾರೂಖ್ ಖಾನ್ ಬಳಿ ಕೂಡಾ ಇನ್ನೂ ಈ ಮಾಡೆಲ್ ಕಾರು ಇಲ್ಲ ಎಂದೇ ಹೇಳಲಾಗಿದೆ. ಹಾಗಾದ್ರೆ ಯಾವುದು ಅಂತಹ ಸೂಪರ್ ಕಾರು?? ಅದರ ಮಾಲೀಕ ಯಾರು? ತಿಳಿಯೋಣ ಬನ್ನಿ.

ನಾವು ಈಗ ಹೇಳಲು ಹೊರಟಿರುವುದು ಬುಗಾಟಿ ಕಂಪನಿಯ ಸೂಪರ್ ಕಾರಾಗಿದೆ. ಈಗಾಗಲೇ ಈ ಕಂಪನಿಯ ಕಾರು ಬಾಲಿವುಡ್ ನ ದಿಗ್ಗಜ ನಟ ಶಾರೂಖ್ ಖಾನ್ ಹಾಗೂ ಅನ್ಯ ಕೆಲವು ನಟರ ಬಳಿ ಇದೆ ಎನ್ನುವ ಸುದ್ದಿಯಾಗಿತ್ತು. ಆದರೆ ಇದಕ್ಕೆ ಅಧಿಕೃತವಾದ ಯಾವುದೇ ಮಾಹಿತಿಯು ಸಹಾ ಇನ್ನೂ ಹೊರ ಬಂದಿಲ್ಲ ಎನ್ನುವುದು ಸಹಾ ವಾಸ್ತವ. ಬುಗಾಟಿ ಕಾರುಗಳ ಶ್ರೇಣಿ ಸುಮಾರು 11 ರಿಂದ 12 ಕೋಟಿ ರೂಪಾಯಿಗಳಿಂದ ಆರಂಭವಾಗುತ್ತದೆ ಎನ್ನಲಾಗಿದ್ದು ಇಂತಹ ಒಂದು ಕಾರನ್ನು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹೊಂದಿದ್ದಾರೆ.

ಹೌದು, ಈ ವಿಷಯ ನಿಮಗೆ ಆಶ್ಚರ್ಯ ಎನಿಸಬಹುದು. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮಯೂರ್ ಶ್ರೀ ಎನ್ನುವವರ ಬಳಿ ಬುಗಾಟಿ ಕಂಪನಿಯ ಸುಮಾರು 22 ಕೋಟಿ ಬೆಲೆ ಬಾಳುವ ಕಾರು ಇದೆ. ಅಲ್ಲದೇ ಒಂದು ವರದಿಯ ಪ್ರಕಾರ ಬುಗಾಟಿ ಕಂಪನಿಯ ಈ ಬ್ರಾಂಡ್ ಕಾರು ಇರುವ ಏಕೈಕ ಭಾರತೀಯ ಮಯೂರ್ ಶ್ರೀ ಎಂದು ಹೇಳಲಾಗಿದೆ. ಬಹಳಷ್ಟು ಜನ ಭಾರತೀಯರ ಬಳಿ ಬುಗಾಟಿ ವೆರಾನ್ ಕಾರು ಇದೆ, ಇದರ ಬೆಲೆ 12 ಕೋಟಿ ರೂ. ಎನ್ನಲಾಗಿದೆ.

ಆದರೆ 22 ಕೋಟಿ ರೂ ಬೆಲೆಯ ಬುಗಾಟಿ ಸಿರಾನ್ ಕಾರು ಮಯೂರ್ ಬಳಿ ಮಾತ್ರವೇ ಇದೆ ಎನ್ನಲಾಗಿದೆ. ಮಯೂರ್ ಶ್ರೀ ಅವರ ಬಳಿ ಇದಲ್ಲದೇ ಲ್ಯಾಂಬೊರ್ಗಿನಿ, ಎಸ್ಟೆನ್ ಮಾರ್ಟಿನ್, ಪೋರ್ಶ್, ಮೆಕ್ಲಾರೈನ್, ರೋಲ್ಸ್ ರಾಯ್ಸ್ ಸೇರಿದಂತೆ ವಿಶ್ವದ ಹಲವು ದುಬಾರಿ ಬ್ರಾಂಡ್ ನ ಕಾರುಗಳು ಸಹಾ ಇದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಮಯೂರ್ ಅವರು ಅಮೆರಿಕಾದ ಡೆಲಾಸ್ ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಾರೆ. ಇವರ ವ್ಯವಹಾರ ದಕ್ಷಿಣ ಆಫ್ರಿಕಾದ ವರೆಗೂ ಹರಡಿದೆ.

ಮಯೂರ್ ಅವರ ಕುಟುಂಬದ ವ್ಯವಹಾರವು ಡರ್ಬನ್ ನಗರದಲ್ಲಿ ಸಹಾ ಹರಡಿದ್ದು, ಭಂಡಾರ ಗೃಹಗಳು ಅಂದರೆ ಗೋದಾಮುಗಳ ವ್ಯವಹಾರವು ಅವರ ಕುಟುಂಬಕ್ಕೆ ಸೇರಿದೆ. ದಕ್ಷಿಣ ಆಫ್ರಿಕಾದಿಂದ ರಫ್ತಾಗುವ ಬಹುತೇಕ ಹಣ್ಣುಗಳು ಇವರ ಕೋಲ್ಡ್ ಸ್ಟೋರೇಜ್ ನಿಂದಲೇ ಹೋಗುತ್ತದೆ ಎಂದು ಮಯೂರ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇವರ ಪೂವರ್ಜರು 1860 ರಲ್ಲಿ ಗುಲಾಮಗಿರಿಯ ಕರಾರಿನಲ್ಲಿ ಆಫ್ರಿಕಾ ತಲುಪಿದ್ದರು ಎನ್ನಲಾಗಿದೆ.

Leave a Reply

Your email address will not be published.