ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? ಸಂಭವನೀಯ ಹೆಸರುಗಳು ರಿಲೀಸ್!!

Entertainment Featured-Articles Movies News

ಬಿಗ್ ಬಾಸ್ ಶೋ ಎಂದರೆ ಅದನ್ನು ನೋಡುವ ದೊಡ್ಡ ಪ್ರೇಕ್ಷಕರ ಬಳಗವೇ ಇದೆ. ವಿಶೇಷ ಅಭಿಮಾನಿಗಳು ಇದ್ದಾರೆ. ಆದ್ದರಿಂದಲೇ ಬಿಗ್ ಬಾಸ್ ನ ಪ್ರತಿಯೊಂದು ಸೀಸನ್ ಸಹಾ ಬಹಳ ಜನಪ್ರಿಯತೆ ಪಡೆದುಕೊಳ್ಳುತ್ತದೆ.‌ ಕನ್ನಡದಲ್ಲೂ ಸಹಾ ಬಿಗ್ ಬಾಸ್ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿದ್ದು, ಒಂಬತ್ತನೇ ಹೊಸ ಸೀಸನ್ ಶೀಘ್ರದಲ್ಲೇ ಆರಂಭ ಎನ್ನುವ ಅಧಿಕೃತ ಘೋಷಣೆ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಸೀಸನ್ ನ ಕುರಿತಾಗಿ ಚರ್ಚೆಗಳು ಆರಂಭವಾಗಿದೆ. ಬಿಗ್ ಬಾಸ್ ಮನೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಎಂಟ್ರಿ ನೀಡಲಿದ್ದಾರೆ ಎಂದು ಒಂದಷ್ಟು ಹೆಸರುಗಳು ಹರಿದಾಡಿವೆ.

ಪ್ರತಿ ಸಲ ಹೊಸ ಬಿಗ್ ಬಾಸ್ ಘೋಷಣೆ ಆದ ಕೂಡಲೇ ಒಂದಷ್ಟು ಹೆಸರುಗಳು ಕೇಳಿ ಬರುತ್ತವೆ. ಈ ಬಾರಿಯು ಅಂತಹುದೇ ಸಂಭವನೀಯ ಹೆಸರುಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಮಾದ್ಯಮಗಳಲ್ಲಿ ಸದ್ದು ಮಾಡುತ್ತಿವೆ. ಹಾಗಾದರೆ ಯಾರು ಈ ಬಾರಿಯ ಸಂಭಾವನೀಯ ಸ್ಪರ್ಧಿಗಳು ಎನ್ನುವುದನ್ನು ತಿಳಿಯೋಣ ಬನ್ನಿ. ಕನ್ನಡದ ಖ್ಯಾತ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಸಿನಿಮಾದಲ್ಲಿ ಹೆಸರನ್ನು ಮಾಡಿ ಇದೀಗ ಕಿರುತೆರೆಯಲ್ಲಿ ನಟ, ನಿರ್ಮಪಕ ಆಗಿರುವ ದಿಲೀಪ್ ರಾಜ್, ನಟ ಮತ್ತು ನಿರ್ದೇಶಕ ಆಗಿರುವ, ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಮಗ ನವೀನ್ ಕೃಷ್ಣ ಅವರ ಹೆಸರು ಕೇಳಿ ಬಂದಿದೆ.

ಇದಲ್ಲದೇ ನಟಿ ಪವಿತ್ರಾ ಲೋಕೇಶ್, ಸುಪ್ರಸಿದ್ಧ ಜ್ಯೋತಿಷಿ ಆರ್ಯವರ್ಧನ್, ನಾಗಿಣಿ 2 ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ, ಸುದೀಪ್ ಅವರ ಕಿಚ್ಚ ಸಿನಿಮಾದ ನಾಯಕಿಯಾಗಿದ್ದ ರೇಖಾ ವೇದವ್ಯಾಸ್, ಇಂದ್ರಜಿತ್ ಲಂಕೇಶ್, ಹಿರಿಯ ನಟಿ ಪ್ರೇಮ, ನಿರ್ದೇಶಕ ರವಿ ಶ್ರೀವಾತ್ಸವ, ಇನ್ಸ್ಟಾಗ್ರಾಂ ರೀಲ್ಸ್ ಖ್ಯಾತಿಯ ಭೂಮಿಕ ಬಸವರಾಜ್ ಅವರ ಹೆಸರುಗಳು ಈಗ ಸದ್ದು ಮಾಡಿವೆ. ವಾಹಿನಿ ಈಗಾಗಲೇ ಕೆಲವರನ್ನು ಸಂಪರ್ಕಿಸಿದೆ ಎನ್ನುವ ಸುದ್ದಿಗಳು ಹರಿದಾಡಿದೆ. ಆದರೆ ಇದು ಆಧಿಕೃತವಾಗಿ ತಿಳಿಯುವುದು ಮಾತ್ರ ಶೋ ಆರಂಭದ ದಿನ ಎನ್ನುವುದು ಸಹಾ ಸತ್ಯ.

Leave a Reply

Your email address will not be published.