ಈ ಬಾರಿ ತನ್ನ ಮನೆಯ ಬದಲಿಗೆ ತಂಗಿ ಮನೆಯಲ್ಲಿ ಸಲ್ಮಾನ್ ಖಾನ್ ಈದ್ ಪಾರ್ಟಿ ಮಾಡಿದ್ದೇಕೆ?? ಇಲ್ಲಿದೆ ಕಾರಣ

0 1

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಈದ್ ಪಾರ್ಟಿ ವಿಚಾರವಾಗಿ ಇನ್ನೂ ಕೂಡಾ ಸಾಕಷ್ಟು ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಈ ಬಾರಿ ಈದ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಅವರ ಆಪ್ತರು ಹಾಗೂ ಅವರ ನಿಕಟವರ್ತಿಗಳು ಭಾಗಿಯಾಗಿ ಹಬ್ಬದ ಸಂಭ್ರಮವನ್ನು ಆಚರಣೆ ಮಾಡಿದ್ದಾರೆ. ಪಾರ್ಟಿಯ ಫೋಟೋಗಳು ಹಾಗೂ ವಿಡಿಯೋಗಳು ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ. ಪಾರ್ಟಿಯಲ್ಲಿ ಭಾಗಿಯಾದ ಸೆಲೆಬ್ರಿಟಿ ಗಳ ಸುದ್ದಿಗಳು, ಫೋಟೋಗಳು ಅಭಿಮಾನಿಗಳ ಮೆಚ್ಚುಗೆ ಪಡೆದಿವೆ.

ಇನ್ನು ಈಗ ಪಾರ್ಟಿ ಮುಗಿದ ಕೆಲವು ದಿನಗಳ ನಂತರ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ಅವರ ಪತಿ ಆಯುಷ್ ಶರ್ಮಾ ಪಾರ್ಟಿಯ ಕುರಿತಾದ ಕೆಲವು ಆಸಕ್ತಿಕರ ವಿಚಾರಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಆಯುಷ್ ಶರ್ಮಾ ಪಾರ್ಟಿಯ ಬಗ್ಗೆ ಮಾಹಿತಿಗಳನ್ನು ನೀಡುತ್ತಾ, ಲಂಚ್ ಗೆ ಸಿದ್ಧಪಡಿಸುವ ಬಿರಿಯಾನಿಯನ್ನು ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಅವರೇ ಈ ಬಾರಿಯೂ ಸಹಾ ಸಿದ್ಧಪಡಿಸಿದ್ದರು ಎಂದು ಹೇಳಿದ್ದಾರೆ.

ಇದು ಹಿಂದಿನಿಂದಲೂ ನಡೆದು ಬರುತ್ತಿರುವ ಸಂಪ್ರದಾಯವಾಗಿದ್ದು, ಪ್ರತಿ ಬಾರಿಯೂ ಲಂಚ್ ನಲ್ಲಿ ಸಲ್ಮಾ ಅವರೇ ಬಿರಿಯಾನಿ ತಯಾರು ಮಾಡುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ಬಾರಿ ಸಂಜೆ ಬರುವ ಅತಿಥಿಗಳಿಗಾಗಿಯೂ ಸಲ್ಮಾ ಅವರೇ ಬಿರಿಯಾನಿ ತಯಾರು ಮಾಡಿದ್ದರು. ಅತಿಥಿ ಗಳಿಗೆ ಅದು ಬಹಳ ಇಷ್ಟವಾಯಿತು ಎನ್ನುವ ಮಾತನ್ನು ಹೇಳಿದ್ದಾರೆ. ಮಾದ್ಯಮದ ಜೊತೆಗೆ ಆಯುಷ್ ಶರ್ಮಾ ಎಲ್ಲದಕ್ಕಿಂತ ಆಸಕ್ತಿಕರ ವಿಚಾರವೊಂದನ್ನು ಸಹಾ ಹಂಚಿಕೊಂಡಿದ್ದಾರೆ.

ಆಯುಶ್ ಶರ್ಮಾ ಅವರು ಈ ಬಾರಿ ಈದ್ ಪಾರ್ಟಿಯನ್ನು ಸಲ್ಮಾನ್ ಖಾನ್ ತಮ್ಮ ಮನೆಯಲ್ಲಿ ಏಕೆ ವ್ಯವಸ್ಥೆ ಮಾಡಲಿಲ್ಲ ಎನ್ನುವ ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಳೆದ ಮಂಗಳವಾರದಂದು ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಅವರ ಮನೆಯಲ್ಲಿ ಅದ್ದೂರಿಯಾಗಿ ಈದ್ ಪಾರ್ಟಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಪಾರ್ಟಿಗೆ ಬಾಲಿವುಡ್‌ ನ ಸ್ಟಾರ್ ನಟ, ನಟಿಯರು ಆಗಮಿಸಿದ್ದರು.

ಈ ಬಾರಿ ಮತ್ತೊಂದು ವಿಶೇಷ ಎನ್ನುವಂತೆ ಮೊದಲ ಬಾರಿಗೆ ನಟಿ ಕಂಗನಾ ರಣಾವತ್ ಸಹಾ ಸಲ್ಮಾನ್ ಖಾನ್ ಅವರ ಈ ಅದ್ದೂರಿ ಈದ್ ಪಾರ್ಟಿಯಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಕಂಗನಾ ಆಗಮನ ಸುದ್ದಿಗಳಲ್ಲಿ ಒಂದು ಸಂಚಲನವನ್ನೇ ಸೃಷ್ಟಿಸಿತ್ತು. ಪ್ರತಿವರ್ಷವೂ ಈ ಪಾರ್ಟಿಯನ್ನು ಸಲ್ಮಾನ್ ಖಾನ್ ಅವರ ಮನೆಯಲ್ಲೇ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಈ ಬಾರಿ ಅವರ ಮನೆಯಲ್ಲಿ ಅಲ್ಲದೇ ಅವರ ಸಹೋದರಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಆಯುಷ್ ಶರ್ಮಾ ಅವರು ಮಾಧ್ಯಮದೊಂದಿಗೆ ಈ ವಿಚಾರವನ್ನು ಮಾತನಾಡುತ್ತಾ, ಬಹಳ ದಿನಗಳ ನಂತರ ಪಾರ್ಟಿಯೊಂದನ್ನು ವ್ಯವಸ್ಥೆ ಮಾಡುತ್ತಿದ್ದ ಕಾರಣದಿಂದ ಸಲ್ಮಾನ್ ಖಾನ್ ರವರು ಬಹಳ ಗ್ರ್ಯಾಂಡ್ ಆಗಿ ಪಾರ್ಟಿಯನ್ನು ಆಯೋಜಿಸಲು ಆಲೋಚನೆ ಮಾಡಿದ್ದರು. ಆದ್ದರಿಂದಲೇ ಅವರು ತಮ್ಮ ನಿಲಯ ಗ್ಯಾಲಕ್ಸಿಯ ಬದಲಾಗಿ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ಪಾರ್ಟಿಯನ್ನು ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ್ದಾರೆ.

ಈದ್ ಪಾರ್ಟಿ ತಂಗಿಯ ಮನೆಯಲ್ಲಿ ನಡೆದರೂ ಸಲ್ಮಾನ್ ಖಾನ್ ಅವರು ಒಬ್ಬ ಉತ್ತಮ ಹೋಸ್ಟ್ ಆಗಿ ಪಾರ್ಟಿಯನ್ನು ನಡೆಸಿಕೊಟ್ಟರು, ಎಲ್ಲಾ ಅತಿಥಿಗಳೊಡನೆ ಆತ್ಮೀಯವಾಗಿ ಬೆರೆತು, ಸಂಭ್ರಮಿಸಿದ್ದಾರೆ ಎನ್ನುವ ಮಾತನ್ನು ಆಯುಷ್ ಶರ್ಮಾ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರ ಈದ್ ಪಾರ್ಟಿ ಈ ಬಾರಿ ವಿಶೇಷವಾಗಿದ್ದು ಕೆಲವು ಅನಿರೀಕ್ಷಿತ ಸ್ಟಾರ್ ಗಳ ಆಗಮನ ಎನ್ನುವುದು ಸಹಾ ನಿಜವಾಗಿದೆ.

Leave A Reply

Your email address will not be published.