ಈ ಫೋಟೋದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಅದೇ ನಿಮ್ಮ ವ್ಯಕ್ತಿತ್ವ ಎಂತದ್ದು ಎಂದು ಹೇಳುತ್ತದೆ.

Entertainment Featured-Articles News Wonder

ಸೈಕಾಲಜಿ ಎನ್ನುವುದು ಒಂದು ಮಹಾ ಸಾಗರ ಇದ್ದಂತೆ. ನಾವು ಆಡುವ ಮಾತುಗಳಿಂದ ಮಾತ್ರವೇ ಅಲ್ಲದೇ, ನಮ್ಮ ನೋಟ ಹಾಗೂ ನಮ್ಮ ವರ್ತನೆಗಳನ್ನು ಗಮನಿಸಿಯೂ ಸಹಾ ಅದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ಎಂತಹದ್ದು ಎನ್ನುವುದನ್ನು ಸೈಕಾಲಜಿಯ ಮೂಲಕ ಹೇಳಲು ಸಾಧ್ಯವಿದೆ ಎಂದಾಗ ಅಚ್ಚರಿಯಾದರೂ ಸಹಾ ಅದು ವಾಸ್ತವವಾಗಿದೆ. ಮನೋವೈಜ್ಞಾನಿಕ ಶಾಸ್ತ್ರಜ್ಞರು ಇವುಗಳನ್ನು ಬಳಸಿಕೊಂಡೇ ಮನುಷ್ಯನ ಮೇಲೆ ವಿವಿಧ ಪ್ರಯೋಗಗಳನ್ನು ಮಾಡುತ್ತಾ ಅವರ ವ್ಯಕ್ತಿತ್ವವನ್ನು ನಿರ್ಧರಿಸುತ್ತಾರೆ. ಒಂದು ಫೋಟೋ ತೋರಿಸಿ ಅದರಲ್ಲಿ ಏನು ಕಾಣುತ್ತಿದೆ ಎಂದು ಕೇಳಿ, ನಾವು ಹೇಳುವ ಉತ್ತರದ ಆಧಾರದಲ್ಲಿ ನಮ್ಮ ವ್ಯಕ್ತಿತ್ವವನ್ನು ಅಳೆಯುತ್ತಾರೆ.

ಇಲ್ಲಿ ನಿಮಗೆ ಮೇಲೆ ಕಾಣುತ್ತಿರುವ ಫೋಟೋ ಸಹಾ ಒಂದು ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಾಂತಿ ಯ ಚಿತ್ರವಾಗಿದ್ದು, ಇದು ನಿಮ್ಮ ವ್ಯಕ್ತಿತ್ವವನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಈ ಫೋಟೋವನ್ನು ನೋಡಿದ ಕೂಡಲೇ ಕೆಲವರಿಗೆ ಇದರಲ್ಲಿ ತಲೆ ಬುರುಡೆ ಕಾಣುತ್ತದೆ, ಇನ್ನೂ ಕೆಲವರಿಗೆ ಅಲ್ಲೊಂದು ಪುಟ್ಟ ಹುಡುಗಿಯು ಕಾಣುತ್ತಾಳೆ. ಮತ್ತೆ ಕೆಲವರಿಗೆ ಸುಂದರವಾದ ಪ್ರಕೃತಿ ಕಾಣುತ್ತದೆ. ಆದರೆ ಇಲ್ಲಿ ನಿಮಗೆ ಈ ಚಿತ್ರದಲ್ಲಿ ಮೊದಲು ಏನು ಕಾಣುತ್ತದೆಯೋ ಅದರ ಆಧಾರದಲ್ಲಿ ನಿಮ್ಮ ಮನಸ್ತತ್ವ ಎಂತದ್ದು ಎನ್ನುವುದನ್ನು ತಿಳಿಯಬಹುದಾಗಿದೆ.

ತಲೆಬುರುಡೆ: ಈ ಚಿತ್ರವನ್ನು ನೋಡಿದ ಕೂಡಲೇ ನಿಮಗೆ ಮೊಟ್ಟ ಮೊದಲಿಗೆ ತಲೆಬುರುಡೆ ಕಂಡರೆ ಅದನ್ನು ತಪ್ಪು ಎಂದು ಭಾವಿಸಬೇಡಿ. ಏಕೆಂದರೆ ತಲೆಬುರುಡೆ ಕಂಡರೆ ಅದು ನಿಮ್ಮ ಮೇಧಾಶಕ್ತಿಯ ಅಥವಾ ಬುದ್ಧಿಶಕ್ತಿಯ ಪ್ರತೀಕವಾಗಿರುತ್ತದೆ. ನಿಮ್ಮ ಜೀವನದಲ್ಲಿ ನಿಮಗಿರುವ ದೊಡ್ಡ ಬಲವೇ ನಿಮ್ಮ ಬುದ್ಧಿವಂತಿಕೆ ಎಂದು ಅರ್ಥ ಮಾಡಿಕೊಳ್ಳಿ. ನೀವು ವಿಷಯಗಳನ್ನು ಬಹಳ ಆಳವಾಗಿ ತಿಳಿದು ಅನಂತರ ನಿರ್ಧಾರ ಮಾಡುವಂತಹ ಬುದ್ಧಿವಂತ ವ್ಯಕ್ತಿಗಳಾಗಿರುವಿರಿ.

ಬಾಲಕಿ : ಈ ಫೋಟೋದಲ್ಲಿ ನಿಮಗೆ ಮೊದಲು ಪುಟ್ಟ ಹುಡುಗಿಯು ಕಂಡರೆ ನೀವು ಹಿಂದಿನ ಕಷ್ಟಗಳಿಂದ ಬಹಳ ಬೇಗ ಹೊರಗೆ ಬರುವಿರಿ ಎಂದು ಅರ್ಥ ಮಾಡಿಕೊಳ್ಳಿ. ನಿಮಗೆ ಎದುರಾದ ಕಷ್ಟಗಳಿಂದ ಬಹಳ ಸುಲಭವಾಗಿ ಹೊರಗೆ ಬರುವ ಸಾಮರ್ಥ್ಯ ನಿಮಗೆ ಇರುತ್ತದೆ. ಜೀವನದ ಮೇಲೆ ಅಪಾರವಾದ ನಂಬಿಕೆ ಇರುವ ನೀವು ಎಂತಹದೇ ಸಮಸ್ಯೆ ಎದುರಾದರೂ ಕೂಡಾ ತಾಳ್ಮೆಯಿಂದ ಆಲೋಚಿಸಿ ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುವ ವ್ಯಕ್ತಿತ್ವವನ್ನು ಪಡೆದುಕೊಂಡಿರುವಿರಿ.

ಪ್ರಕೃತಿ: ಈ ಫೋಟೋವನ್ನು ನೋಡಿದ ಕೂಡಲೇ ಹಿನ್ನೆಲೆಯಲ್ಲಿ ಕಾಣುವ ಪ್ರಕೃತಿ ನಿಮಗೆ ಮೊದಲು ಕಂಡರೆ, ನಿಮ್ಮನ್ನು ನೀವು ನಂಬುವಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿರುವಿರಿ. ಎಲ್ಲರೂ ಭ ಯ ಪಡುವ ಸಂದರ್ಭದಲ್ಲೂ, ಧೈರ್ಯವಾಗಿ ನಿಮ್ಮ ಮೇಲೆ ನಂಬಿಕೆ ಇರಿಸಿ ನಿಲ್ಲುವ ಸ್ವಭಾವ ನಿಮ್ಮದಾಗಿರುತ್ತದೆ. ನೀವು ಮಾಡುವ ಕೆಲಸದ ಮೇಲೆ ನಿಮಗೆ ನಂಬಿಕೆ ಇರುತ್ತದೆ. ಕಷ್ಟದ ಸಮಯದಲ್ಲೂ ಒಳ್ಳೆಯ ನಿರ್ಧಾರ ಮಾಡಿ ಸಮಸ್ಯೆಯಿಂದ ಹೊರಗೆ ಬರುವಿರಿ.

Leave a Reply

Your email address will not be published.