ಈ ಫೋಟೋದಲ್ಲಿರುವ ಸಂಖ್ಯೆ ಎಷ್ಟು ಗುರುತಿಸಿ: ಸೆಕೆಂಡುಗಳಲ್ಲಿ ಗುರ್ತಿಸಿದರೆ ನೀವು ಖಂಡಿತ ಗ್ರೇಟ್ !!

Entertainment Featured-Articles News

ಪ್ರತಿನಿತ್ಯ ಅಂತರ್ಜಾಲದಲ್ಲಿ ವಿವಿಧ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಕೆಲವು ಫೋಟೋಗಳು ನಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಇನ್ನೂ ಕೆಲವು ನಮಗೆ ವಿಸ್ಮಯವನ್ನು ಹುಟ್ಟಿಸುತ್ತವೆ. ಅದೇ ವೇಳೆ ಇನ್ನೂ ಕೆಲವು ಫೋಟೋಗಳು ಗೊಂದಲವನ್ನು ಉಂಟು ಮಾಡುತ್ತವೆ. ಅಂತಹ ಫೋಟೋಗಳೇ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು. ಈ ರೀತಿಯ ಫೋಟೋಗಳನ್ನು ನೋಡಿದರೆ ತಲೆ ತಿರುಗುವ ಅನುಭವ ನಮಗೆ ಉಂಟಾಗಬಹುದು. ಏಕೆಂದರೆ ಈ ಚಿತ್ರಗಳಲ್ಲಿ ಇರೋದು ಒಂದಾದರೆ ನಾವು ನೋಡೋದು ಮತ್ತೊಂದು.

ಸದ್ಯ ಇಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿವೆ. ಅವು ನಮ್ಮ ಐಕ್ಯೂ ಮಟ್ಟ ಮತ್ತು ನಮ್ಮ ಕಣ್ಣಿನ ಶಕ್ತಿಯನ್ನು ಪರೀಕ್ಷೆ ಮಾಡುತ್ತವೆ. ಇದು ನಮ್ಮ ಮನಸ್ಸಿಗೆ ಮತ್ತು ಮೆದುಳಿಗೆ ಒಂದು ವ್ಯಾಯಾಮ ನೀಡುತ್ತದೆ. ಈ ಚಿತ್ರಗಳ ಮರ್ಮ ಏನೆಂದು ಮೊದಲ ನೋಟದಲ್ಲೇ ಪತ್ತೆ ಹಚ್ಚುವುದು ತುಂಬಾ ಕಷ್ಟ. ಅಂತಹ ವೈರಲ್ ಬ್ರೈನ್ ಟೀಸರ್ ಒಂದನ್ನು ಈಗ ನಾವು ಈಗ ನಿಮಗಾಗಿ ತಂದಿದ್ದೇವೆ. ಇಲ್ಲಿ ಅಡಗಿರುವ ಸಂಖ್ಯೆ ಏನು ಎಂದು ನೀವು ಕಂಡುಹಿಡಿಯಬೇಕು.

ಇದು ತುಂಬಾ ಕಷ್ಟ ಎಂದು ಮೊದಲೇ ಹೇಳುತ್ತಿದ್ದೇವೆ. ಆದರೆ ಉತ್ತರ ಕಂಡು ಹಿಡಿಯಲು ಒಂದು ಸುಳಿವು ಏನೆಂದರೆ, ಫೋನ್ ಅನ್ನು ಸ್ವಲ್ಪ ಓರೆಯಾಗಿಸಿದರೆ ಆಗ ನೀವು ಉತ್ತರಕ್ಕೆ ಸ್ವಲ್ಪ ಹತ್ತಿರವಾಗುವಿರಿ. ಅನೇಕ ಜನರು ಈ ಒಗಟು ಬಿಡಿಸಲು ಸಾಧ್ಯವಾಗದೆ ಕೈಬಿಟ್ಟಿದ್ದಾರೆ. ನಿಮ್ಮ ಕಣ್ಣುಗಳು ಸೂಪರ್ ಪವರ್ ಆಗಿದ್ದರೆ ನೀವು ಕೆಲವೇ ಸೆಕೆಂಡುಗಳಲ್ಲಿ ಆ ಸಂಖ್ಯೆಯನ್ನು ಕಂಡುಹಿಡಿಯಬಹುದು. ಹಾಗಾದರೆ ತಡವೇಕೆ? ಈಗಲೇ ಪ್ರಯತ್ನವನ್ನು ಆರಂಭಿಸಿ ನಿಮ್ಮ ಚುರುಕುತನಕ್ಕೆ ಈ ಸವಾಲನ್ನು ನೀಡಿ.

ಇನ್ನೂ ನಿಮಗೆ ಸರಿಯಾದ ಉತ್ತರ ಸಿಗಲಿಲ್ಲವೇ? ಹಾಗಾದರೆ ಉತ್ತರವನ್ನು ನಾವೇ ಹೇಳುತ್ತೇವೆ. ಈ ಫೋಟೋದಲ್ಲಿರುವ ಸಂಖ್ಯೆ 17. ನೀವು ಫೋನ್ ಅನ್ನು ಸ್ವಲ್ಪ ಓರೆಯಾಗಿಸಿದರೆ, ನೀವು ಆ ಸಂಖ್ಯೆಯನ್ನು ನೋಡಬಹುದು. ಅನೇಕರು ಈ ಒಗಟು ಬಿಡಿಸಲು ವಿಫಲರಾಗಿದ್ದಾರೆ. ಇಂತಹ ಇನ್ನಷ್ಟು ಒಗಟುಗಳನ್ನು ನಾವು ನಿಮಗಾಗಿ ತರುತ್ತೇವೆ. ಒದು ನಿಮ್ಮ ಮನಸ್ಸನ್ನು ರಂಜಿಸಲು ಮಾತ್ರವೇ ಅಲ್ಲದೇ ನಿಮ್ಮ ಕಣ್ಣಿನ ಶಕ್ತಿಯನ್ನು ಪರೀಕ್ಷಿಸಲು ಸಹಾಯ ಮಾಡುವುದು. ಇನ್ನಷ್ಟು ಸವಾಲುಗಳಿಗೆ ಸಿದ್ಧವಾಗಿರಿ.

Leave a Reply

Your email address will not be published.