ಈ ಫೋಟೋದಲ್ಲಿನ ದೇಶದ ದಿಗ್ಗಜ ಉದ್ಯಮಿ ಯಾರು?? ಈ ಫೋಟೋದ ವಿಶೇಷತೆ ಏನು ಗೊತ್ತಾ??

Entertainment Featured-Articles News

ಟಾಟಾ ಗ್ರೂಪ್ ಚೇರ್ಮನ್, ದಿಗ್ಗಜ ಉದ್ಯಮಿ ರತನ್ ಟಾಟಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಉತ್ಸಾಹದಿಂದ ಸಕ್ರಿಯರಾಗಿದ್ದಾರೆ. ಆಗಾಗ ಅವರು ತಮ್ಮ ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಹಿಂಬಾಲಕ ರಿಗೆ ಅಚ್ಚರಿ ಯನ್ನು ಮೂಡಿಸುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಇತ್ತೀಚಿಗೆ ತಮ್ಮ ಒಂದು ಕಾಲೇಜಿನ ದಿನಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡು, ಮತ್ತೊಮ್ಮೆ ಎಲ್ಲರ ಗಮನವನ್ನು ಅತ್ತ ಸೆಳೆಯುವಂತೆ ಮಾಡಿದ್ದು, ಫೋಟೋ ವೈರಲ್ ಆಗಿದೆ.

ಮುಂಬೈ ಮತ್ತು ಶಿಮ್ಲಾ ದಲ್ಲಿ ತಮ್ಮ ಶಿಕ್ಷಣ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ರತನ್ ಟಾಟಾ ಅವರು 1955 ರಲ್ಲಿ ನ್ಯೂಯಾರ್ಕ್ ನಗರದಲ್ಲಿನ ರಿವರ್ ಡೇಲ್ ಕಂಟ್ರಿ ಸ್ಕೂಲ್ ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ತಿ ಮಾಡಿದರು. 82 ವಯಸ್ಸಿನ ರತನ್ ಟಾಟಾ ಅವರು ತಮ್ಮ ಕಾಲೇಜು ದಿನಗಳ ಫೋಟೋವನ್ನು #THROWBACKTHURSDAY ಎನ್ನು ಹ್ಯಾಷ್ ಟ್ಯಾಗ್ ಹಾಕಿ ಶೇರ್ ಮಾಡಿಕೊಂಡಿದ್ದಾರೆ.‌ ಕಾಲೇಜಿನ ಇಯಲ್ ಬುಕ್ ನಲ್ಲಿ ರತನ್ ಟಾಟಾ ಅವರನ್ನು ಫೇಯರ್ಲಿ ಅಮೆರಿಕನ್, ಚಾರ್ಮಿಂಗ್ ಅಂಡ್ ಫ್ರಾಂಕ್ ಎಂದು ಹೊಗಳಿದ್ದಾರೆ.

ರತನ್ ಟಾಟಾ ಭಾರತೀಯರು ಅವರು ಅಮೆರಿಕಾದಲ್ಲಿ ದೊಡ್ಡ ಸಂಖ್ಯೆಯ ಸ್ನೇಹಿತರನ್ನು ಹೊಂದಿದ್ದಾರೆ.‌ ಅಮೆರಿಕಾದಲ್ಲಿ ಇದ್ದ ಅಲ್ಪ ಕಾಲದಲ್ಲೇ ಅವರು ಒಬ್ಬ ಅಮೆರಿಕನ್ ನಂತೆ ಬದಲಾಗಿದ್ದರು. ಅವರು ಶೀರ್ಷಿಕೆಯಲ್ಲಿ ಇಂಜಿನಿಯರ್ ಆಗಿ ಬೆಳೆಯಲಿದ್ದಾರೆ ಹಾಗೂ ಬೇಸ್ ಬಾಲ್ ಕ್ರೀಡೆಯಲ್ಲಿ ವಿಜೃಂಭಿಸುತ್ತಾರೆ ಎಂದು ಸಹಾ ಅವರ ಬಗ್ಗೆ ಇಯರ್ ಬುಕ್ ನಲ್ಲಿ ಬರೆಯುವ ಮೂಲಕ ರತನ್ ಟಾಟಾ ಅವರ ಪ್ರತಿಭೆಗಳ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ.

ರತನ್ ಟಾಟಾ ಅವರು ಶೇರ್ ಮಾಡಿಕೊಂಡ ಅವರ ಈ ವಿಶೇಷವಾದ ಫೋಟೋಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬಂದಿವೆ. ಸುಮಾರು ಎಂಟು ಲಕ್ಷಕ್ಕಿಂತಲೂ ಅಧಿಕ ಮಂದಿ ಫೋಟೋಗೆ ಲೈಕ್ ಗಳನ್ನು ನೀಡಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಮಂದಿ ನೆಟ್ಟಿಗರು ಫೋಟೋಗೆ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಹಳಷ್ಟು ಜನರು ಈ ವೀಡಿಯೋ ಗೆ ಅಪಾರವಾದ ಮೆಚ್ಚುಗೆ ನೀಡಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave a Reply

Your email address will not be published.