“ಈ ಪ್ರೀತಿ ಅವರು ಬದುಕಿದ್ದಾಗ ಬೇಕಿತ್ತು”: ಸುಶಾಂತ್ ಮೇಲೆ ಪ್ರೀತಿ ತೋರಿಸುವವರ ಬಗ್ಗೆ ನಿರ್ದೇಶಕನ ಅಸಮಾಧಾನ

Written by Soma Shekar

Published on:

---Join Our Channel---

ಬಾಲಿವುಡ್‌ ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಈಗ ಕೇವಲ ನೆನಪು ಮಾತ್ರ. ಸುಶಾಂತ್ ಅವರ ಅಕಾಲಿಕ ಸಾ ವು ಅನಿರೀಕ್ಷಿತ ಹಾಗೂ ದೊಡ್ಡ ಆ ಘಾ ತವನ್ನೇ ಅನೇಕರಿಗೆ ನೀಡಿತ್ತು. ಸುಶಾಂತ್ ಸಿಂಗ್ ಹಾಗೂ ನಟಿ ಸಾರಾ ಆಲಿ ಖಾನ್ ಜೊತೆಯಾಗಿ ತಲೆ ಹಂಚಿಕೊಂಡಿದ್ದ ಸಿನಿಮಾ ‘ಕೇದಾರನಾಥ್’. ಈ ಸಿನಿಮಾ ತೆರೆ ಮೇಲೆ ಬಂದು ಇತ್ತೀಚಿಗೆ ಮೂರು ವರ್ಷಗಳನ್ನು ಪೂರೈಸಿದೆ. ಈ ವೇಳೆಯಲ್ಲಿ ಸಾರಾ ಆ ಸಿನಿಮಾದಲ್ಲಿ ತಮ್ಮ ಸಹ ನಟನಾಗಿದ್ದ ಸುಶಾಂತ್ ಅವರನ್ನು ಸ್ಮರಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದರು.

ಕೇದಾರ್ ನಾಥ್ ಸಿನಿಮಾದ ನಿರ್ದೇಶಕರಾದ ಅಭಿಷೇಕ ಕಪೂರ್ ಅವರು ಮಾದ್ಯಮಗಳ ಜೊತೆ ಮಾತನಾಡುತ್ತಾ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸುಶಾಂತ್ ಸಿಂಗ್ ಅವರನ್ನು ಹೇಗೆ ನೋಡಲಾಗುತ್ತಿತ್ತು, ಅವರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿತ್ತು ಎನ್ನುವ ವಿಚಾರಗಳನ್ನು ಮಾತನಾಡಿದ್ದಾರೆ. ಅಭಿಷೇಕ್ ಕಪೂರ್ ಅವರು ಹೇಳುವಂತೆ ಅವರು ಕೇದಾರ್ ನಾಥ್ ಸಿನಿಮಾ ಮಾಡುವಾಗ ಬಂಡವಾಳ ಹೂಡಲು ಯಾರೂ ಮುಂದೆ ಬರಲಿಲ್ಲವಂತೆ.‌

ಹೂಡಿಕೆದಾರರಲ್ಲಿ ಬಹುತೇಕ ಎಲ್ಲರೂ ಸಹಾ ಸುಶಾಂತ್ ಸ್ಟಾರ್ ಅಲ್ಲ ಎನ್ನುವ ಕಾರಣಕ್ಕೆ ಹಣ ಹೂಡಲು ಹಿಂದೇಟು ಹಾಕಿದರು. ಅದಕ್ಕೆ ಸುಶಾಂತ್ ಅವರು ತಮ್ಮ ಸ್ವಂತ ಹಣದಿಂದಲೇ ಸಿನಿಮಾವನ್ನು ಮಾಡುವ ಛಲದೊಂದಿಗೆ, ತನ್ನ ಜೇಬಿನಿಂದ ಹಣವನ್ನು ಖರ್ಚು ಮಾಡಿ ಈ ಸಿನಿಮಾವನ್ನು ಮಾಡಿದರು ಎನ್ನುವ ಮಾತನ್ನು ಹೇಳಿದ್ದಾರೆ. ಈ ಹಿಂದೆ ಕೂಡಾ ಅವರು ಸಿನಿಮಾ ವೇಳೆ ಸುಶಾಂತ್ ಗೆ ಎದುರಾಗಿದ್ದ ಸಂಕಷ್ಟದ ಕುರಿತು ಮಾತನಾಡಿದ್ದರು.

ಸುಶಾಂತ್ ಆ ತ್ಮ ಹ ತ್ಯೆ ಮಾಡಿಕೊಂಡ ನಂತರ, ಅವರ ಬಗ್ಗೆ ತಿಳಿದ ಜನರು, ಇಂದು ಅವರನ್ನು ಒಬ್ಬ ಪ್ರತಿಭಾವಂತ ನಟ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಈ ಪ್ರೀತಿ ಅವರು ಬದುಕಿದ್ದಾಗ ಬೇಕಿತ್ತು. ಆಗ ಅವರ ಜೊತೆ ಯಾರು ನಿಂತಿರಲಿಲ್ಲ. ಆದರೆ ಈಗ ಅವರ ಬಗ್ಗೆ ಮಾತನಾಡುವುದು ನೋಡಿದರೆ ವಿಚಿತ್ರ ಎನಿಸುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ. ಅವರನ್ನು ಜನರು ಇಂದು ಅಭಿಮಾನಿಸುತ್ತಾರೆ, ಬದುಕಿರುವಾಗ ಅವರನ್ನು ಯಾರು ಪ್ರೀತಿಸುತ್ತಾರೆ ಎಂದು ನೋಡಲಿಲ್ಲ ಎಂದಿದ್ದಾರೆ.‌

Leave a Comment