ಈ ಪಾತ್ರಕ್ಕೆ ಆಲಿಯಾ ನಿರ್ದೇಶಕರ ಮೊದಲ ಆಯ್ಕೆ ಆಗಿರಲಿಲ್ಲ: ಯಾವೆಲ್ಲಾ ನಟಿಯರು ಈ ಪಾತ್ರ ರಿಜೆಕ್ಟ್ ಮಾಡಿದ್ರು??

Entertainment Featured-Articles News

ಬಾಲಿವುಡ್ ಬೆಡಗಿ ಆಲಿಯಾ ಭಟ್ ಸದ್ಯಕ್ಕೆ ಒಂದು ದೊಡ್ಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬಹು ದಿನಗಳ ನಂತರ ಆಲಿಯಾ ನಟನೆಗೆ ಎಲ್ಲೆಡೆಯಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಆಲಿಯಾ ನಟನೆಯ ಹೊಸ ಸಿನಿಮಾ. ಬಾಲಿವುಡ್ ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮತ್ತೊಂದು ಅದ್ಭುತ ಸಿನಿಮಾ ತೆರೆಯ ಮೇಲೆ ಅಬ್ಬರಿಸಿದೆ. ಕಾಮಾಟಿಪುರದ ವೇಶ್ಯೆಯೊಬ್ಬರ ಜೀವನವನ್ನು ಆಧರಿಸಿದ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಬಾಲಿವುಡ್ ಮಂದಿಯ ಗಮನವನ್ನು ಸೆಳೆಯುತ್ತಿದೆ.

ಕಾಮಾಟಿಪುರದ ವೇಶ್ಯಾಗೃಹದ ಮಾಲೀಕಳು, ಲೈಂ ಗಿ ಕ ಕಾರ್ಯಕರ್ತೆಯರ ಹಕ್ಕುಗಳಿಗಾಗಿ, ಅವರ ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿ, ಇಚ್ಛೆಯಿಲ್ಲದ ಹೆಣ್ಣುಗಳನ್ನು ವೇ ಶ್ಯಾ ವಾಟಿಕೆಯಿಂದ ತಪ್ಪಿಸಿದ ನಾಯಕಿಯಾಗಿದ್ದ ಗಂಗೂಬಾಯಿ ಕಾಥಿಯಾವಾಡಿಯ ನಿಜ ಜೀವನದ ಕಥೆಯನ್ನು ಸಂಜಯ್ ಲೀಲಾ ಬನ್ಸಾಲಿ ತೆರೆಗೆ ಏರಿಸಿದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಮಿಂಚಿದ್ದು, ಆಲಿಯಾ ಅಭಿನಯಕ್ಕೆ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಸಹಾ ಫಿದಾ ಆಗಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಆಲಿಯಾ ಗೆ ಇಷ್ಟೆಲ್ಲಾ ಹೆಸರನ್ನು ತಂದ ಈ ಪಾತ್ರಕ್ಕೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೊದಲ ಆಯ್ಕೆ ಆಲಿಯಾ ಭಟ್ ಆಗಿರಲಿಲ್ಲ ಎನ್ನಲಾಗಿದೆ. ಹೌದು, ಆಲಿಯಾ ಗೂ ಮುನ್ನ ಗಂಗೂಬಾಯಿ ಪಾತ್ರಕ್ಕೆ ಮೂವರು ನಾಯಕಿಯರ ಹೆಸರು ಕೇಳಿ ಬಂದಿತ್ತು. ಆದರೆ ಕೊನೆಗೆ ಪಾತ್ರ ಮಾಡಿದ್ದು ಆಲಿಯಾ ಎನ್ನಲಾಗಿದೆ. ಗಂಗೂಬಾಯಿ ಪಾತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಅವರ ಮೊದಲ ಆಯ್ಕೆ ದೀಪಿಕಾ ಪಡುಕೋಣೆ ಆಗಿತ್ತು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಸ್ಕ್ರಿಪ್ಟ್ ನೊಂದಿಗೆ ಮೊದಲು ದೀಪಿಕಾ ಅವರನ್ನು ಸಂಪರ್ಕಿಸಿದ್ದರು.

ದೀಪಿಕಾ ಪಡುಕೋಣೆ ಎರಡು ಹೊಸ ಸಿನಿಮಾಗಳ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿರುವ ಕಾರಣದಿಂದಾಗಿ ಈ ಸಿನಿಮಾ ಮಾಡಲು ಆಗುವುದಿಲ್ಲ ಎನ್ನುವ ಮಾತನ್ನು ಹೇಳಿದರು. ಇದಾದ ನಂತರ ಸಂಜಯ್ ಲೀಲಾ ಬನ್ಸಾಲಿ ಅವರ ಆಯ್ಕೆ ನಟಿ ಪ್ರಿಯಾಂಕಾ ಚೋಪ್ರಾ ಆಗಿತ್ತು. ಆದರೆ ಸಂದರ್ಶನವೊಂದರಲ್ಲಿ ಪ್ರಿಯಾಂಕ ತಾನು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಸದ್ಯಕ್ಕೆ ಹಿಂದಿ ಸಿನಿಮಾಗಳಲ್ಲಿ ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದರು.

ಪ್ರಿಯಾಂಕ ಮಾತು ಕೇಳಿ ಸಂಜಯ್ ಲೀಲಾ ಬನ್ಸಾಲಿ ಅಲ್ಲಿಗೆ ಪ್ರಿಯಾಂಕ ಅವರನ್ನು ಸಂಪರ್ಕಿಸಲಿಲ್ಲ. ಇದಾದ ನಂತರ ಅವರ ಕಣ್ಣು ಹೊರಳಿದ್ದು ಅವರ ಫೇವರಿಟ್ ನಟಿ ರಾಣಿ ಮುಖರ್ಜಿ ಆಗಿದ್ದರು. ಆದರೆ ರಾಣಿ ಮುಖರ್ಜಿ ಕೆಲವು ವೈಯಕ್ತಿಕ ಕಾರಣಗಳಿಂದ ಸಿನಿಮಾ ಮಾಡಲು ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ‌. ಆಗ ಪಾತ್ರ ಆಲಿಯಾ ಭಟ್ ಪಾಲಿಗೆ ಒಲಿಯಿತು. ಇಲ್ಲಿಯವರೆಗೆ ಹೆಚ್ಚು ಗ್ಲಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಆಲಿಯಾ ಈ ಸಿನಿಮಾ ಮೂಲಕ ತನ್ನ ನಟನೆಯ ಮೂಲಕ ತಾನು ಆ ಪಾತ್ರಕ್ಕೆ ಪರ್ಫೆಕ್ಟ್ ಎಂದು ಸಾಬೀತು ಮಾಡಿದ್ದಾರೆ.

Leave a Reply

Your email address will not be published. Required fields are marked *