ಈ ನಟಿಗಾಗಿ ಕಷ್ಟದಲ್ಲಿ ಕೈ ಹಿಡಿದ ಪತ್ನಿಯನ್ನೇ ಬಿಡಲು ಸಜ್ಜಾದ್ರ ನಿರ್ದೇಶಕ ಪುರಿ ಜಗನ್ನಾಥ್??

Entertainment Featured-Articles Movies News

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಅಪ್ಪು ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್. ತೆಲುಗಿನಲ್ಲಿ ಸ್ಟಾರ್ ನಿರ್ದೇಶಕರ ಸಾಲಿಗೆ ಸೇರಿರುವ ಪುರಿ ಜಗನ್ನಾಥ್ ಸಿನಿಮಾಗಳು ಎಂದರೆ ಅದನ್ನು ನೋಡುವ ಪ್ರತ್ಯೇಕ ಅಭಿಮಾನಿಗಳ ಬಳಗವೇ ಇದೆ. ಆದರೆ ಇದೀಗ ನಿರ್ದೇಶಕ ಪುರಿ ಜಗನ್ನಾಥ್ ತಮ್ಮ ಸಿನಿಮಾ ವಿಷಯಗಳ ಬದಲಾಗಿ ಅವರ ಖಾಸಗಿ ಜೀವನದ ವಿಷಯವಾಗಿ ಸುದ್ದಿಯಾಗಿದ್ದು, ಅವರ ಖಾಸಗಿ ಬದುಕಿನ ಕುರಿತಾಗಿ ಒಂದು ಪ್ರಶ್ನೆಯು ಎಲ್ಲೆಲ್ಲೂ ಹರಿದಾಡಿದೆ.

ಹೌದು ನಿರ್ದೇಶಕ ಪುರಿ ಜಗನ್ನಾಥ್ ಅವರ ಸಾಂಸಾರಿಕ ಜೀವನದಲ್ಲೊಂದು ಬಿರುಗಾಳಿ ಎದ್ದಿದೆ ಎನ್ನುವ ವಿಷಯವೊಂದು ಈಗ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಒಬ್ಬ ನಟಿ ಎಂದೇ ಹೇಳಲಾಗಿತ್ತಿದೆ. ದಕ್ಷಿಣ ಸಿನಿಮಾ ರಂಗದ ಖ್ಯಾತ ನಟಿ, ತೆಲುಗು ಸಿನಿಮಾ ರಂಗದಲ್ಲಿ ತನಗಾಗಿ ಒಂದು ಸ್ಥಾನ ಹೊಂದಿರುವ ನಟಿ ಚಾರ್ಮಿ ಕೌರ್ ನಿರ್ದೇಶಕ ಪುರಿ ಅವರ ಜೀವನದಲ್ಲಿ ಎದ್ದಿರುವ ಬಿರುಗಾಳಿಗೆ ಕಾರಣ ಎನ್ನಲಾಗುತ್ತಿದ್ದು, ಈ ಅನುಮಾನ ಗಳಿಗೆ ಕೆಲವು ವಿಚಾರಗಳು ಪುಷ್ಟಿ ನೀಡುವಂತಿದೆ.

ಕಳೆದ ಒಂಬತ್ತು ವರ್ಷಗಳಿಂದಲೂ ನಟಿ ಚಾರ್ಮಿ ಕೌರ್ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದಾರೆ. ನಟಿ ಚಾರ್ಮಿ ಪುರಿ ಜಗನ್ನಾಥ್ ಪುತ್ರನಿಗಾಗಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಪುರಿ ಜಗನ್ನಾಥ್ ತಮ್ಮ ಪತ್ನಿಯ ಜೊತೆಗಿಂತ ಚಾರ್ಮಿ ಜೊತೆಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿರುವ ವಿಚಾರ ಸಹಾ ರಹಸ್ಯವಾಗಿ ಏನೂ ಉಳಿದಿಲ್ಲ. ಆದ್ದರಿಂದಲೇ ಅವರು ಪತ್ನಿಯನ್ನು ತೊರೆಯಲಿದ್ದಾರೆ ಎನ್ನುವ ಸುದ್ದಿಗಳು ದಟ್ಟವಾಗುತ್ತಿದೆ.

ಪುರಿ ಜಗನ್ನಾಥ್ ಅವರ ಪುತ್ರ, ನಟ ಆಕಾಶ್ ಕೂಡಾ ಚಾರ್ಮಿ ಹಾಗೂ ತಮ್ಮ ತಂದೆಯ ಕುರಿತಾಗಿ ಹೇಳಿರುವ ಕೆಲವೊಂದು ಮಾತುಗಳನ್ನು ಕೇಳಿದ ನಂತರ ಅನೇಕರಿಗೆ ಚಾರ್ಮಿ ಮತ್ತು ಪುರಿ ಜಗನ್ನಾಥ್ ನಡುವೆ ಒಂದು ಆತ್ಮೀಯತೆ ಇದೆ ಎನ್ನುವುದು ಅರ್ಥವಾಗಿದೆ‌. ಪುರಿ ಜಗನ್ನಾಥ್ ಅವರ ಪುತ್ರ ಮಾತನಾಡುತ್ತಾ, ಅಪ್ಪನ ಕಷ್ಟದ ಸಮಯದಲ್ಲಿ ಅಮ್ಮ ಅವರ ಜೊತೆಯಾಗಿ ನಿಂತಿದ್ದವರು, ಅಪ್ಪನ ಯಶಸ್ಸಿಗೆ ಅಮ್ಮ ಕೂಡಾ ಕಾರಣ, ಅವರಿಬ್ಬರೂ ದೂರಾಗುವ ಪ್ರಶ್ನೆಯೇ ಇಲ್ಲ ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ.

Leave a Reply

Your email address will not be published.