ಈ ಚಿತ್ರದಲ್ಲಿ ಇರುವ ಸಂಖ್ಯೆ ಗುರುತಿಸೋದು ಸುಲಭ ಅಲ್ಲ! ನಿಮ್ಮ ದೃಷ್ಟಿಗೆ ಖಂಡಿತ ಇದೊಂದು ಕಠಿಣ ಸವಾಲು
ಮತ್ತೊಂದು ಸಂಖ್ಯಾ ಅಥವಾ ನಂಬರ್ ಪಜಲ್ ನೊಂದಿಗೆ ನಿಮ್ಮ ಮುಂದೆ ಒಂದು ಹೊಸ ಸವಾಲನ್ನು ಇಡುತ್ತಿದ್ದೇವೆ. ನಿಮ್ಮ ಕಣ್ಣಿನ ದೃಷ್ಟಿಗೆ ಈಗ ಕೆಲಸವನ್ನು ನೀಡಿ ಮತ್ತು ಈ ಸವಾಲಿನ ಉತ್ತರವನ್ನು ಕಂಡು ಹಿಡಿಯಲು ಮುಂದಾಗಿ. ಪಜಲ್ಸ್ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ, ಪಜಲ್ಸ್ ಗೆ ಸರಿಯಾದ ಉತ್ತರವನ್ನು ಹುಡುಕುವ ಅಥವಾ ಅವುಗಳನ್ನು ಪರಿಹರಿಸುವ ಟಾಸ್ಕ್ ನೀಡುವ ಕಿಕ್ ಏನು ಎಂಬುದನ್ನು ಪಜಲ್ಸ್ ನ ಉತ್ತರ ಕಂಡು ಹಿಡಿಯುವವರಿಗೆ ಮಾತ್ರವೇ ಗೊತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸುಡೊಕು, ಚಿತ್ರಗಳಲ್ಲಿ ವ್ಯತ್ಯಾಸ ಕಂಡು ಹಿಡಿಯುವುದು, ಫೋಟೋ ಪಜಲ್ಸ್, ಆಪ್ಟಿಕಲ್ ಇಲ್ಯೂಷನ್ ಹೀಗೆ ಬೇರೆ ಬೇರೆ ರೀತಿಯ ಪಜಲ್ ಗಳು ಲಭ್ಯವಿದೆ.
ಈ ಸವಾಲುಗಳು ನಮ್ಮ ಬುದ್ಧಿಯೊಡನೆ ಆಡುತ್ತವೆ, ನಮ್ಮ ದೃಷ್ಟಿಗೆ ಸವಾಲನ್ನು ಹಾಕುತ್ತವೆ. ಇವು ಕೇವಲ ಟೈಮ್ ಪಾಸ್ ಅಲ್ಲ ಬದಲಾಗಿ ನಮ್ಮ ಮೆದುಳಿಗೆ ಅದು ಕೆಲಸವನ್ನು ನೀಡುತ್ತದೆ. ಹಾಗಾದರೆ ಇನ್ನೇಕೆ ತಡ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹೊಸ ಫೋಟೋ ದಲ್ಲಿನ ಪಜಲ್ ಗೆ ಉತ್ತರವನ್ನು ನೀಡುವ ಕಡೆಗೆ ಗಮನವನ್ನು ನೀಡಿ. ಮೇಲೆ ನೀಡಿರುವ ಫೋಟೋದಲ್ಲಿ ನಿಮಗೆ ಏನು ಕಾಣಿಸುತ್ತಿದೆ ? ಬಹುಶಃ ಈ ಪ್ರಶ್ನೆಗೆ ನೀವು, ಆ ಚಿತ್ರದಲ್ಲಿ ಕಪ್ಪು ಚುಕ್ಕೆಗಳು ಕಾಣುತ್ತಿವೆ ಎನ್ನುವುದು ಸಹಜವಾಗಿಯೇ ನೀಡುವ ಉತ್ತರವಾಗಿರುತ್ತದೆ.
ಹೌದು ಅಲ್ಲಿ ಕಪ್ಪು ಚುಕ್ಕೆಗಳು ಇರಬಹುದು, ಆದರೆ ಅದರ ಹಿಂದೆ ಒಂದು ಸಂಖ್ಯೆ ಸಹಾ ಅಡಗಿದೆ. ಆ ಸಂಖ್ಯೆ ಯಾವುದು ಎನ್ನುವುದನ್ನು ನೀವು ಪತ್ತೆ ಹಚ್ಚಬೇಕಾಗಿದೆ. ನಿಮ್ಮ ದೃಷ್ಟಿಯಲ್ಲಿ ಪವರ್ ಇದೆ ಅನ್ನೋದಾದ್ರೆ ಮೊದಲ ನೋಟದಲ್ಲೇ ನೀವು ಉತ್ತರವನ್ನು ಹೇಳುವುದು ಖಚಿತ. ಹಾಗಾದರೆ ಲೇಟ್ ಯಾಕೆ? ಈ ಚಿತ್ರದಲ್ಲಿ ಇರುವ ಸಂಖ್ಯೆ ಯಾವುದು? ಪತ್ತೆ ಹಚ್ಚಿ. ಕೇವಲ ಹತ್ತು ಸೆಕೆಂಡ್ ಗಳಲ್ಲಿ ನೀವು ಉತ್ತರವನ್ನು ಕಂಡು ಹಿಡಿದರೆ ಖಂಡಿತ ನೀವು ಜೀನಿಯಸ್ ಮತ್ತು ನಿಮ್ಮ ದೃಷ್ಟಿಯ ಜೊತೆಗೆ ನಿಮ್ಮ ಮೆದುಳು ಸಹಾ ಚುರುಕಾಗಿದೆ ಎಂದರ್ಥ.