ಈ ಚಿತ್ರದಲ್ಲಿ ಅಡಗಿರುವ ವಸ್ತು ಯಾವುದು? ನೂರು ಪ್ರಯತ್ನದ ನಂತರವೂ ಸಿಕ್ತಿಲ್ಲ ಉತ್ತರ! ನೀವು ಒಮ್ಮೆ ಪ್ರಯತ್ನಿಸಿ ನೋಡಿ

0 3

ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಗಳ ಮೆದುಳಿನ ಮೇಲೆ ಬಹಳ ಪರಿಣಾಮವನ್ನು ಉಂಟು ಮಾಡುತ್ತದೆ. ಇಂತಹ ಚಿತ್ರಗಳು ಮೊದಲ ನೋಟದಲ್ಲಿ ಒಂದು ರೀತಿಯಲ್ಲಿ ಕಾಣುತ್ತವೆ. ಆದರೆ ಅವುಗಳನ್ನು ನೋಡುತ್ತಾ ಹೋದಂತೆ ಅಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಬೇರೇನೋ ಇದೆ ಎನ್ನುವುದು ನಮ್ಮ ಅನುಭವಕ್ಕೆ ಬರುತ್ತದೆ. ‌ಅಲ್ಲದೇ ಈ ಚಿತ್ರಗಳು ನಮಗೆ ತಮ್ಮಲ್ಲಿ ಅಡಗಿರುವ ರಹಸ್ಯವನ್ನು ಪತ್ತೆ ಹಚ್ಚುವಂತೆ ಸವಾಲನ್ನು ಹಾಕುತ್ತವೆ. ಆಗ ಒಂದು ದೀರ್ಘ ಉಸಿರನ್ನು ತೆಗೆದುಕೊಂಡು, ಬಿಟ್ಟಾಗ ನಿಮ್ಮಲ್ಲಿ ಇಂತಹ ಚಿತ್ರಗಳ ಸವಾಲನ್ನು ಪರಿಹರಿಸುವ ಸಾಮರ್ಥ್ಯ ಮೂಡುತ್ತದೆ.

ಇತ್ತೀಚಿನ ದಿನಗಳಲ್ಲಿ ದೃಷ್ಟಿ ಭ್ರಮೆಯನ್ನು ಉಂಟು ಮಾಡುವಂತಹ ಫೋಟೋಗಳು ಬಹಳ ಬೇಗ ವೈರಲ್ ಆಗುತ್ತದೆ‌.‌ ನೆಟ್ಟಿಗರು ಸಹಾ ಇಂತಹ ಚಿತ್ರಗಳು ಒಡ್ಡುವಂತಹ ಸವಾಲನ್ನು ಸ್ವೀಕರಿಸಲು ಆಸಕ್ತಿಯನ್ನು ತೋರುತ್ತಿದ್ದಾರೆ. ತಮ್ಮ ದೃಷ್ಟಿ ಮತ್ತು ಮೆದುಳಿನ ಸಾಮರ್ಥ್ಯವನ್ನು ಪರೀಕ್ಷಿಸಲು ಅನೇಕರಲ್ಲಿ ಆಸಕ್ತಿ ಮತ್ತು ಕುತೂಹಲ ಎರಡೂ ಇರುವುದರಿಂದ ಇಂತಹ ಚಿತ್ರಗಳ ಬೇಡಿಕೆ ಹೆಚ್ಚಿದೆ. ದೃಷ್ಟಿ ಭ್ರಮೆಯ ಚಿತ್ರಗಳಲ್ಲಿ ಸಣ್ಣ ಸಣ್ಣ ವಸ್ತುಗಳನ್ನು, ವಿವರಗಳನ್ನು ಮತ್ತು ಆಕೃತಿಗಳನ್ನು ಗುರುತಿಸುವುದು ಬಹಳ ಕಠಿಣ ಆಗಿರುತ್ತದೆ.

ಹೀಗೆ ದೃಷ್ಟಿ ಭ್ರಮೆಯ ಚಿತ್ರಗಳು ಒಡ್ಡುವ ಸವಾಲನ್ನು ಪರಿಹರಿಸುವುದು ನಿಜಕ್ಕೂ ಒಂದು ಕಠಿಣವಾದ ಕೆಲಸವಾಗಿದ್ದು, ಪರಿಹಾರ ಕಂಡು ಹಿಡಿದರೆ ಅದು ನಮ್ಮ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಒಂದು ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರ ನೋಡಲು ಒಂದು ಸುಂದರವಾದ ವಿನ್ಯಾಸವನ್ನು ಒಳಗೊಂಡಿದೆ ಎನ್ನುವಂತೆ ಕಾಣುತ್ತಿದೆ. ಆದರೆ ಆ ಗೆರಗಳ ವಿನ್ಯಾಸದಲ್ಲೇ ಅಡಗಿದೆಯೊಂದು ಬಹಳ ಪ್ರಮುಖವಾದ ವಸ್ತು.

ಆ ವಸ್ತು ಯಾವುದು? ಎಂದು ಕಂಡು ಹಿಡಿದರೆ ಖಂಡಿತ ನಿಮ್ಮ ದೃಷ್ಟಿ ಮತ್ತು ಮೆದುಳಿನ ಸಾಮರ್ಥ್ಯ ಬಹಳ ಚುರುಕಾಗಿದೆ ಎಂದರ್ಥ. ಒಂದು ವೇಳೆ ತಡವಾದರೂ ಪರವಾಗಿಲ್ಲ. ನಿಧಾನವಾಗಿ ಚಿತ್ರವನ್ನು ಗಮನಿಸಿ ನೋಡಿ, ಆ ಗೆರಗಳ ನಡುವೆ ನಿಮಗೆ ಒಂದು ಆಕೃತಿ ಖಂಡಿತ ಕಾಣುತ್ತದೆ. ಆಗ ಆ ಆಕೃತಿಯನ್ನು ಸೂಕ್ಷ್ಮವಾಗಿ ನೋಡಿದಾಗ ನಿಮಗೆ ಅದೇನು ಎನ್ನುವುದು ಸಹಾ ಸ್ಪಷ್ಟವಾಗಿ ಕಾಣುತ್ತದೆ. ಇಂಟರ್ನೆಟ್ ನಲ್ಲಿ ವೈರಲ್ ಆದ ಈ ಫೋಟೋದಲ್ಲಿ ಅಡಗಿರುವ ಆ ವಸ್ತು ಏನು ಎಂದು ಕಂಡು ಹಿಡಿಯಲು ಬಹಳಷ್ಟು ಜನರು ಪ್ರಯತ್ನವನ್ನು ಮಾಡಿದ್ದರು.

ಇನ್ನೇಕೆ ತಡ, ನೀವು ಸಹಾ ಇಲ್ಲಿ ಅಡಗಿರುವ ವಸ್ತು ಯಾವುದು ಎಂದು ಕಂಡು ಹಿಡಿಯುವ ಪ್ರಯತ್ನ ಮಾಡಿ. ಒಂದು ವೇಳೆ ಬಹಳ ಸುಲಭವಾಗಿ ನೀವು ಅದನ್ನು ಗುರ್ತಿಸಿದಿರಿ ಎಂದರೆ ಖಂಡಿತ ನಿಮ್ಮ ಮೆದುಳು ಬಹಳ ಚುರುಕಾಗಿದೆ ಎಂದರ್ಥ. ಒಂದು ವೇಳೆ ಕಾಣದೇ ಹೋದರೆ ಚಿತ್ರದ ಮಧ್ಯ ಭಾಗದಲ್ಲಿ ಸರಿಯಾಗಿ ನೋಡಿ, ಸ್ವಲ್ಪ ಉಬ್ಬಿದಂತೆ ಕಾಣುವ ಭಾಗವನ್ನು ಸೂಕ್ಷ್ಮವಾಗಿ ಗಮಿಸಿದ ಅಲ್ಲಿ ನಿಮಗೆ ಬೈಸಿಕಲ್ ಒಂದು ಕಾಣುವುದು.

Leave A Reply

Your email address will not be published.