ಈ ಕೂಲಿ ಕಾರ್ಮಿಕನನ್ನು ಹುಡುಕಿ ಸನ್ಮಾನಿಸಬೇಕು ಎಂದ ಉದ್ಯಮಿ ಆನಂದ್ ಮಹೀಂದ್ರಾ: ಯಾರು ಆ ಕಾರ್ಮಿಕ??

Written by Soma Shekar

Published on:

---Join Our Channel---

ಮಹಿಂದ್ರ ಅಂಡ್ ಮಹಿಂದ್ರ ಕಂಪನಿಯ ಚೇರ್ಮನ್ ಆಗಿರುವಂತಹ ಉದ್ಯಮಿ ಆನಂದ್ ಮಹೀಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸಕ್ರಿಯವಾಗಿ ಇರುತ್ತಾರೆ. ಅವರು ಸದಾ ಒಂದಲ್ಲಾ ಒಂದು ವಿಶೇಷವಾದ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವುದನ್ನು ನಾವು ಗಮನಿಸಬಹುದು. ವಿಶೇಷ ಎನಿಸುವಂತಹ ವ್ಯಕ್ತಿಗಳ ಫೋಟೋಗಳು ಹಾಗೂ ವಿಶಿಷ್ಟ ಎನಿಸುವಂತಹ ವಿಡಿಯೋಗಳನ್ನು ಅವರು ಶೇರ್ ಮಾಡುತ್ತಲೇ ಇರುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರು ಶ್ರಮಜೀವಿಗಳ ಕ್ರಮವನ್ನು ಗುರುತಿಸುವ ಕೆಲಸವನ್ನು ಸಹ ಮಾಡುತ್ತಾರೆ. ಪ್ರತಿಭಾವಂತರ ಪ್ರತಿಭೆಯನ್ನು ಎಲ್ಲರ ಮುಂದೆ ಇರಿಸುವ ಪ್ರಯತ್ನ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಾಸ್ಯ ಎನಿಸುವ ಸಂದರ್ಭ ಅಥವಾ ಸನ್ನಿವೇಶಗಳ ಕುರಿತಾದ ಮಾಹಿತಿಯನ್ನು ಸಹ ಹಂಚಿಕೊಳ್ಳುತ್ತಾರೆ.

ಪ್ರಸ್ತುತ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವಿಶೇಷವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋ ಬಹಳ ವೈರಲ್ ಆಗುತ್ತಾ ಸಾಗಿದೆ. ಅವರು ಶೇರ್ ಮಾಡಿದ ವಿಡಿಯೋ ನೋಡಿದ ನಂತರ ನೆಟ್ಟಿಗರು ಅದಕ್ಕೆ ಮೆಚ್ಚುಗೆಯನ್ನು ಸೂಚಿಸುವುದರ ಜೊತೆಗೆ ಆನಂದ ಮಹೀಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸೆಲೆಬ್ರಿಟಿಯೂ ಹೌದು ಎಂದು ಬಹಳಷ್ಟು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಆನಂದ್ ಮಹೇಂದ್ರ ಅವರು ಶೇರ್ ಮಾಡಿರುವ ವಿಶೇಷ ವಿಡಿಯೋದ ಕುರಿತಾಗಿ ಸ್ವಲ್ಪ ತಿಳಿಯೋಣ.

ವಿಡಿಯೋದಲ್ಲಿರುವ ದೃಶ್ಯವನ್ನು ನಾವು ಗಮನಿಸಿದಾಗ, ಇಲ್ಲಿ ಕಟ್ಟಡವೊಂದರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಕೂಲಿಕಾರ್ಮಿಕ ಒಂದರ ನಂತರ ಮತ್ತೊಂದು ಎನ್ನುವಂತೆ 30 ಇಟ್ಟಿಗೆಗಳನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಹೋಗುವ ದೃಶ್ಯವನ್ನು ನಾವು ನೋಡಬಹುದಾಗಿದೆ. ಆ ಕೂಲಿ ಕಾರ್ಮಿಕನ ಶ್ರಮದ ಜೊತೆಗೆ ಅಷ್ಟು ಇಟ್ಟಿಗೆಗಳನ್ನು ತಲೆಯ ಮೇಲೆ ಇಟ್ಟು ಕೊಳ್ಳುವ ಆತನ ಕೌಶಲ್ಯವನ್ನು ನೋಡಿದ ಮೇಲೆ ನಾವು ಮೆಚ್ಚದೆ ಇರಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಆನಂದ ಮಹೀಂದ್ರ ಅವರು ವಿಡಿಯೋವನ್ನು ಶೇರ್ ಮಾಡಿಕೊಂಡು ಅದರ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

” ಅಂತಹ ಅ ಪಾ ಯಕಾರಿ ಕೆಲಸವನ್ನು ಯಾವ ಕೂಲಿ ಕಾರ್ಮಿಕರೂ ಮಾಡಬಾರದು. ಆದರೆ ಈ ಮನುಷ್ಯ ತನ್ನ ದುಡಿಮೆಯನ್ನು ಕೂಡಾ ಒಂದು ಕಲೆಯನ್ನಾಗಿ ಪರಿವರ್ತಿಸಿದ್ದಕ್ಕಾಗಿ ನೀವು ಅವರನ್ನು ಮೆಚ್ಚಬೇಕು. ಇದು ಎಲ್ಲಿನ ದೃಶ್ಯ, ಆತ ಯಾರು ಎಂದು ಯಾರಿಗಾದರೂ ತಿಳಿದಿದೆಯೇ? ಆತನಿಗೆ ಉದ್ಯೋಗ ನೀಡಿದವರು ಆತನಿಗೆ ಯಂತ್ರ ಒದಗಿಸಬಹುದೇ?? ಮತ್ತು ಅವರ ಉನ್ನತ ಮಟ್ಟದ ಕೌಶಲ್ಯಗಳನ್ನು ಗುರುತಿಸಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರು ಶೇರ್ ಮಾಡಿಕೊಂಡಿರುವ ವಿಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಜನರು ಮೆಚ್ಚುಗೆಗಳನ್ನು ಸೂಚಿಸಿದ್ದಾರೆ.

Leave a Comment