ಈ ಕಾರಣಕ್ಕೆ ಜೈಲಿನಿಂದ ಮನೆಗೆ ಬಂದ ಮಗನ ಬ್ಲಡ್ ಟೆಸ್ಟ್ ಮಾಡಿಸಲು ಮುಂದಾದ ಗೌರಿ ಖಾನ್

0 0

ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಸ್ತುತ ಜಾಮೀನಿನ ಮೇಲೆ 22 ದಿನಗಳ ನಂತರ ಜೈಲಿನಿಂದ ಮನೆಗೆ ಹಿಂತಿರುಗಿ ಕೊಂಚ ರಿಲೀಫ್ ಆಗಿದ್ದಾನೆ. ಡ್ರ ಗ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ಮಗನನ್ನು ಹೊರಗೆ ಕರೆ ತರಲು ಅಪ್ಪ ಶಾರೂಖ್ ಖಾನ್ ಮತ್ತು ಅಮ್ಮ ಗೌರಿ ಖಾನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಸರ್ವ ಪ್ರಯತ್ನಗಳ ನಂತರ ಅಕ್ಟೋಬರ್ 30 ರಂದು ಹೇಗೋ ಬೇಲ್ ದೊರೆತು ಆರ್ಯನ್ ಖಾನ್ ತಮ್ಮ ಐಶಾರಾಮೀ ಮನೆ ಮನ್ನತ್ ಹಿಂತಿರುಗಿದ್ದು, ತಾಯಿ ಗೌರಿ ಖಾನ್ ಮಗನ ಆರೈಕೆಗೆ ಬಹಳ ಮುತುವರ್ಜಿಯನ್ನು ವಹಿಸಿ, ಜೈಲಿನಿಂದ ಬಂದ ಮಗನ ಕಾಳಜಿಯನ್ನು ವಹಿಸಿದ್ದಾರೆ.

ಮನೆಗೆ ಬಂದಿರುವ ಮಗನ ಆರೈಕೆಯನ್ನು ಮಾಡುತ್ತಲೇ ಇದೀಗ ಗೌರಿ ಖಾನ್ ತಮ್ಮ ಮಗ ಆರ್ಯನ್ ಖಾನ್ ರಕ್ತ ಪರೀಕ್ಷೆಯನ್ನು ಮಾಡಿಸಲು ಮುಂದಾಗಿದ್ದಾರೆ. ಇದೇನಿದು ಪೋಲಿಸರೇ ಬ್ಲಡ್ ಟೆಸ್ಟ್ ಮಾಡಿಸಿಲ್ಲ, ಗೌರಿ ಖಾನ್ ಏಕೆ ಮಗನ ಬ್ಲಡ್ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ ಎಂದರೆ ಅದಕ್ಕೆ ಕಾರಣವೂ ಇದೆ. ಆರ್ಯನ್ ಖಾನ್ ಒಟ್ಟು 22 ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಈ ವೇಳೆ ಆತ ಜೈಲಿನಲ್ಲಿ ನೀಡಿದ್ದ ಆಹಾರವನ್ನು ಸೇವಿಸಿದ್ದನು. ಇದರಿಂದ ಮಗನ ರೆಗ್ಯುಲರ್ ಡಯಟ್ ನಲ್ಲಿ ವ್ಯತ್ಯಾಸ ಗಳಾಗಿವೆ.

ಮಗನ ಡಯಟ್ ನಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ಚಿಂತೆಗೀಡಾಗಿರುವ ಗೌರಿ ಖಾನ್ ಮಗನ ಬ್ಲಡ್ ಟೆಸ್ಟ್ ಮಾಡಿಸಿ, ಅದರ ವರದಿಯ ಆಧಾರದಲ್ಲಿ ಮಗನ ಡಯಟ್ ಪ್ಲಾನ್ ಮಾಡಲು, ನ್ಯೂಟ್ರಿಶಿಯಸ್ ಆಹಾರವನ್ನು ಮಗನಿಗೆ ನೀಡಲು ಆಕೆ ಆಲೋಚನೆ ಮಾಡಿದ್ದಾರೆ ಎನ್ನಲಾಗಿದೆ. ಹುಟ್ಟಿದಾಗನಿಂದಲೂ ಸಹಾ ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದ ಮಗನಿಗೆ ಜೈಲಿನಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ತೀರ್ಪಿಗೂ ಮೊದಲೇ ಆತನನ್ನು ಕೆಲವರು ತಪ್ಪಿತಸ್ಥ ಎನ್ನುವ ದೃಷ್ಟಿಯಲ್ಲಿ ನೋಡಿದ್ದರು.

ಈ ಎಲ್ಲಾ ಘಟನೆಗಳು ಮಗನ ಮೇಲೆ ಮಾನಸಿಕವಾಗಿ ಬಹಳ ಪರಿಣಾಮವನ್ನು ಬೀರಿದೆ. ಆತನು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಾನೆ. ಆದ್ದರಿಂದಲೇ ಮಗನನ್ನು ಮಾಮೂಲಿ ಸ್ಥಿತಿಗೆ ಮರಳಿ ತರಲು ಗೌರಿ ಖಾನ್ ಆಪ್ತ ಸಮಾಲೋಚನೆ ಕೂಡಾ ಮಾಡಿಸಲು ನಿರ್ಧಾರವನ್ನು ಮಾಡಿದ್ದು, ಪುತ್ರನ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡುವ ಮೂಲಕ ಮಗನ ಬಗ್ಗೆ ತೀವ್ರವಾದ ಆಸಕ್ತಿಯನ್ನು ತಳೆದಿದ್ದಾರೆ ಗೌರಿ ಖಾನ್.

Leave A Reply

Your email address will not be published.