ಈ ಒಳ್ಳೆ ಹುಡುಗನಿಗೇಕೆ ಇನ್ನೂ ಮದುವೆ ಆಗಿಲ್ಲ? ಪ್ರಭಾಸ್ ಗೆ ನಟಿ ಪೂಜಾ ಹೆಗ್ಡೆ ಪ್ರಶ್ನೆ!!

Entertainment Featured-Articles News

ನಟ ಪ್ರಭಾಸ್ ಪ್ರಸ್ತುತ ಬಹಳಷ್ಟು ಬ್ಯುಸಿ ಇರುವ ಪ್ಯಾನ್ ಇಂಡಿಯಾ ಸ್ಟಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ. ವೈವಿದ್ಯಮಯ ಪಾತ್ರಗಳಿಗೆ ಜೀವ ತುಂಬುವಂತೆ, ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಅವರು ತೆರೆಯ ಮೇಲೆ ಬರಲು, ನಾಲ್ಕು ವಿಭಿನ್ನ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಸದ್ಯ ಅವರ ಕೈಯಲ್ಲಿ ಸಲಾರ್, ರಾಧೇ ಶ್ಯಾಮ್, ಆದಿಪುರುಷ್, ಸ್ಪಿರಿಟ್ ಸಿನಿಮಾಗಳಿದ್ದು, ಅದರಲ್ಲಿ ಬಹುನಿರೀಕ್ಷಿತ ಸಿನಿಮಾ ರಾಧೇ ಶ್ಯಾಮ್ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 13 ಕ್ಕೆ ತೆರೆಗೆ ಬರಲಿದೆ ಎನ್ನುವ ದಿನಾಂಕ ಸಹಾ ಘೋಷಣೆ ಆಗಿದೆ.

ನಟ ಪ್ರಭಾಸ್ ಗೆ ಈಗ ವಯಸ್ಸು 42, ಆದರೂ ಇನ್ನು ಕೂಡಾ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ‌ಪ್ರಭಾಸ್ ಅವರ ಮದುವೆಯ ವಿಚಾರವಾಗಿ ಈಗಾಗಲೇ ಸಾಕಷ್ಟು ಬಾರಿ, ಹತ್ತು ಹಲವು ಗಾಳಿ ಸುದ್ದಿಗಳು ಸಹಾ ಹರಿದಾಡಿವೆ. ಹಲವು ಬಾರಿ ನಟನ ಹೆಸರು ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಜೊತೆಗೆ ತಳಕು ಹಾಕಿಕೊಂಡಿದ್ದು ಕೂಡಾ ವಾಸ್ತವ. ಅಲ್ಲದೇ ಅನುಷ್ಕಾ ಶೆಟ್ಟಿ ಕೂಡಾ ಇನ್ನೂ ಮದುವೆ ಆಗಿಲ್ಲ. ಪ್ರಭಾಸ್ ಮತ್ತು ಅನುಷ್ಕಾ ಇಬ್ಬರೂ ಬಹಳ ಆತ್ಮೀಯರು ಎನ್ನುವುದು ಗೊತ್ತಿರುವ ವಿಷಯ.

ಆದ ಕಾರಣ ಇವರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ, ಅವರು ಮದುವೆಯಾಗುವ ಸಾಧ್ಯತೆಗಳು ಇವೆ ಎನ್ನುವ ಸುದ್ದಿಗಳು ಹರಡಿದ್ದವು. ಸುದ್ದಿಗಳು ಏನೇ ಆದರೂ ಸಹಾ ನಟ ಪ್ರಭಾಸ್ ಗೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಇದೆ, ಅವರ ಇಮೇಜ್ ಗೆ ಗೌರವ ಇದೆ. ಯಾವುದೇ ವಿ ವಾ ದ ಗಳಾಗಲೀ, ಹೇಳಿಕೆಗಳಿಂದ ಚರ್ಚೆ ಹುಟ್ಟು ಹಾಕಿದ್ದಾಗಲೀ ಇರುವುದಿಲ್ಲ. ಇಷ್ಟೆಲ್ಲಾ ಒಳ್ಳೆಯ ವ್ಯಕ್ತಿಗೆ ಮದುವೆ ಏಕೆ ಇನ್ನೂ ಆಗಿಲ್ಲ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ. ಈಗ ಇದೇ ಪ್ರಶ್ನೆಯನ್ನು ನಟಿ ಪೂಜಾ ಹೆಗ್ಡೆ ಅವರು ಕೇಳಿದ್ದಾರೆ.‌

ನಿನ್ನೆ ಪ್ರೇಮಿಗಳ ದಿನದ ವಿಶೇಷವಾಗಿ ಹಲವು ಸಿನಿಮಾಗಳು ತಮ್ಮ ಪೋಸ್ಟರ್, ಹಾಡುಗಳು, ಟೀಸರ್ ಗಳನ್ನು ಬಿಡುಗಡೆ ಮಾಡಿವೆ. ಅದೇ ರೀತಿ ರಾಧೇ ಶ್ಯಾಮ್ ಚಿತ್ರ ತಂಡವು ಸಹಾ ಸಿನಿಮಾದಲ್ಲಿನ ಮನಮೋಹಕ ದೃಶ್ಯಗಳನ್ನು ಸೇರಿಸಿ ಒಂದು ಸುಂದರವಾದ ಗ್ಲಿಂಪ್ಸ್ ಒಂದನ್ನು ಸಿದ್ಧ ಮಾಡಿ ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳ ಗಮನವನ್ನು ಸೆಳೆದಿದ್ದಾರೆ. ಆ ಗ್ಲಿಂಪ್ಸ್ ನಲ್ಲೇ ನಟ ಪ್ರಭಾಸ್ ಅವರನ್ನು ಪೂಜಾ ಹೆಗ್ಡೆ ಮದುವೆಯ ಪ್ರಶ್ನೆಯನ್ನು ಮಾಡುವುದನ್ನು ನೋಡಬಹುದಾಗಿದೆ.

ಪೂಜಾ, “ನೀನು ಚೆನ್ನಾಗಿ ಮಾತನಾಡುವೆ, ಇಷ್ಟು ಒಳ್ಳೆಯ ಹುಡುಗನಿಗೆ ಇನ್ನೂ ಏಕೆ ಮದುವೆಯಾಗಿಲ್ಲ?” ಎಂದು ಕೇಳುವ ಡೈಲಾಗ್ ಈಗ ಹೈಲೈಟ್ ಆಗಿ ಎಲ್ಲರ ಗಮನವನ್ನು ಸೆಳೆದಿದೆ. ಪ್ರಭಾಸ್ ನಾಯಕನಾಗಿರುವ ರಾಧೇ ಶ್ಯಾಮ್ ಸಿನಿಮಾ ಇದೀಗ ಎಲ್ಲರಲ್ಲೂ ನೂರು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಪ್ರಭಾಸ್ ಅವರು ಒಂದು ಹೊಸ ಲುಕ್ ನಲ್ಲಿ, ಹಸ್ತ ರೇಖೆಗಳನ್ನು ನೋಡುವ ವ್ಯಕ್ತಿಯಾಗಿ, ಲವರ್ ಬಾಯ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾ ಒಂದು ವಿಭಿನ್ನ ಕಥಾ ಹಂದರವನ್ನು ಹೊಂದಿದೆ.

Leave a Reply

Your email address will not be published.