ಇಸ್ಲಾಂ ಶ ತೃ ಗಳಿಂದ ಕಾಶ್ಮೀರಕ್ಕೂ ಸ್ವತಂತ್ರ ಕೊಡಿಸಿ: ತಾಲಿಬಾನಿಗಳಿಗೆ ಅಲ್ ಖೈದಾ ನೀಡಿದ ಸಲಹೆ

Written by Soma Shekar

Published on:

---Join Our Channel---

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಬೇಟೆ ಬಹಳ ಜೋರಾಗಿ ಸಾಗಿರುವಾಗಲೇ ಒಂದು ಬೇಸರದ ವಿಷಯ ಕೂಡಾ ನಡೆದುಹೋಗಿದೆ. ಹೌದು ಪ್ಯಾರಾಲಂಪಿಕ್ಸ್ ನಲ್ಲಿ ಭಾನುವಾರದಂದು ಭಾರತದ ಕ್ರೀಡಾಪಟುಗಳು ಮೂರು ಪದಕಗಳನ್ನು ಗೆದ್ದು ಬೀಗಿದ್ದರು. ಆದರೆ ಆ ಮೂರು ಪದಕಗಳಲ್ಲಿ ಒಂದನ್ನು ಹಿಂಪಡೆಯಲಾಗಿದೆ. ಹೌದು ಪ್ಯಾರಾಲಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋ ಎಫ್-52 ವಿಭಾಗದಲ್ಲಿ ಭಾರತೀಯ ಆಟಗಾರ ವಿನೋದ್ ಕುಮಾರ್ ಅವರು ಕಂಚಿನ ಪದಕವನ್ನು ಗೆದ್ದು ಕೊಂಡಿದ್ದರು. ಆದರೆ ಅನಂತರ ವಿನೋದ್ ಕುಮಾರ್ ಅವರ ಅಂಗವೈಕಲ್ಯ ವರ್ಗೀಕರಣವು ಸಮರ್ಪಕವಾಗಿಲ್ಲ ಎನ್ನುವ ಒಂದು ಪ್ರತಿಭಟನೆಯು ನಡೆದ ಕಾರಣ ಅವರ ಪದಕವನ್ನು ತಡೆಹಿಡಯಲಾಗಿತ್ತು.

ಅನಂತರ ಪ್ಯಾರಾಲಂಪಿಕ್ಸ್ ನ‌ ತಾಂತ್ರಿಕ ಪ್ರತಿನಿಧಿಗಳು ಈ ವಿಷಯವಾಗಿ ಸೂಕ್ತವಾದ ಪರಿಶೀಲನೆಯನ್ನು ನಡೆಸುವುದಾಗಿ, ಅದರ ನಂತರವೇ ತಮ್ಮ ನಿರ್ಧಾರವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಎಲ್ಲಾ ಪರಿಶೀಲನೆ ಹಾಗೂ ದಾಖಲೆಗಳನ್ನು ಆಧರಿಸಿ ನಡೆದಂತಹ ಪರಿಶೀಲನೆಯ ನಂತರ ವಿನೋದ್ ಕುಮಾರ್ ಅವರನ್ನು ಅವರು‌ ಸ್ಪರ್ಧಿಸಿದ್ದ ಸ್ಪರ್ಧೆಯ ವಿಭಾಗದಿಂದ ಅನರ್ಹ ಎಂದು ಘೋಷಣೆ ಮಾಡಲಾಗಿ, ಅವರಿಗೆ ನೀಡಬೇಕಿದ್ದ ಕಂಚಿನ ಪದಕವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಮೂಲಕ ಭಾರತಕ್ಕೆ ಸಿಕ್ಕ ಕಂಚಿನ ಪದಕವನ್ನು ಪ್ಯಾರಾಲಂಪಿಕ್ಸ್ ಆಯೋಜಕರು ಹಿಂಪಡೆದಿದ್ದಾರೆ.

41 ವರ್ಷ ವಯಸ್ಸಿನ ವಿನೋದ್ ಕುಮಾರ್ ಅವರು ಹರಿಯಾಣ ಮೂಲದವರು. ಇವರು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಗೆ ಸೇರಿದ್ದರು. ಆದರೆ ತರಬೇತಿಯ ವೇಳೆಯಲ್ಲಿ ಲೇಹ್ ನಲ್ಲಿ ಒಂದು ಬಂಡೆಯ ಮೇಲಿಂದ ಕೆಳದ ಬಿದ್ದ ಕಾರಣ ಅವರ ಕಾಲುಗಳಿಗೆ ಪೆಟ್ಟಾಯಿತು. ವಿನೋದ್ ಕುಮಾರ್ ಅವರ ತಂದೆ 1971 ರಲ್ಲಿ ನಡೆದ ಇಂಡೋ ಪಾಕ್ ಸಮರದಲ್ಲಿ ಹೋರಾಡಿದ್ದ ಭಾರತೀಯ ವೀರ ಯೋಧನಾಗಿದ್ದವರು. ದೈಹಿಕವಾಗಿ ವಿನೋದ್ ಕುಮಾರ್ ಅವರು ಸಮಸ್ಯೆ ಎದುರಿಸಿದರೂ ಮಾನಸಿಕವಾಗಿ ಅವರ ಸದೃಢತೆ ಹಾಗೂ ಸಾಮರ್ಥ್ಯದ ಫಲವಾಗಿ ಪ್ಯಾರಾಲಂಪಿಕ್ಸ್ ವರೆಗೂ ತಲುಪಿರುವುದು ಕೂಡಾ ವಾಸ್ತವ.

Leave a Comment