ಇಸ್ಲಾಂ ನಿಂದ ಹಿಂದೂ ಧರ್ಮಕ್ಕೆ ಮತಾಂತರ: ಇಂಡೋನೇಷ್ಯಾ ಅಧ್ಯಕ್ಷರ ಪುತ್ರಿಯ ದಿಟ್ಟ ನಿರ್ಧಾರ

0 0

ಇಂಡೋನೇಷ್ಯಾದ ಸುಕ್ಮಾವತಿ ಸೂಕರ್ಣ ಪುತ್ರಿ ಎಂದು ಪ್ರಸಿದ್ಧರಾಗಿರುವ ದಿಯಾ ಮುತಿಯಾರಾ ಸುಕ್ಮಾವತಿ ಸುಕರ್ಣೋಪುತ್ರಿ ಮಾಡಿರುವ ಒಂದು ಘೋಷಣೆ ಇದೀಗ ಮಾದ್ಯಮಗಳಲ್ಲಿ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಹೌದು ಸುಕ್ಮಾವತಿ ಅವರು ಇಸ್ಲಾಂ ನಿಂದ ಹಿಂದೂ ಧರ್ಮಕ್ಕೆ ಮತಾಂತರ ಹೊಂದುತ್ತಿರುವುದಾಗಿ ಮಾಡಿರುವ ಘೋಷಣೆಯೇ ಇದೀಗ ದೊಡ್ಡ ಸದ್ದನ್ನು ಮಾಡಿದೆ. ಈ ವಿಷಯವು ಈಗ ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ದೊಡ್ಡ ಚರ್ಚೆಗೆ ಸಹಾ ಇದು ಕಾರಣವಾಗಿದೆ.

ಇಷ್ಟಕ್ಕೂ ಈ ಸುಕ್ಮಾವತಿ ಅವರಿಗೆ ಇಷ್ಟೆಲ್ಲಾ ಮಹತ್ವವನ್ನು ಏಕೆ ನೀಡಲಾಗುತ್ತಿದೆ ಎನ್ನುವ ವಿಚಾರಕ್ಕೆ ಬಂದರೆ, ಈಕೆ ಇಂಡೋನೇಷ್ಯಾದ ಸ್ಥಾಪಕ-ಅಧ್ಯಕ್ಷ ಸೊಕರ್ನೊ ಮತ್ತು ಅವರ 3 ನೇ ಪತ್ನಿ ಫಾತ್ಮವತಿಯವರ ಮಗಳಾಗಿದ್ದಾರೆ. ಅಲ್ಲದೇ ಇಂಡೋನೇಷ್ಯಾದ ಐದನೇ ಅಧ್ಯಕ್ಷೆ ಮೇಗಾವತಿ ಸೂಕರ್ಣೋಪುತ್ರಿಯ ಸಹೋದರಿ ಕೂಡಾ ಆಗಿದ್ದಾರೆ.
ಅಕ್ಟೋಬರ್ 26 ರಂದು ಸೂಕ್ಮವತಿ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗುವ ಘೋಷಣೆಯನ್ನು ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಧಿ ವಡಾನಿಯು ಹೆಸರಿನ ಹಿಂದೂ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ. ಇಲ್ಲೇ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎನ್ನಲಾಗಿದೆ. ಉತ್ತರ ಬಾಲಿಯಲ್ಲಿರುವ ತನ್ನ ಅಜ್ಜಿಯ ಮನೆಯ ಬಳಿ ನಿರ್ಮಿಸಲಾದ ಆಕೆಯ ದಿವಂಗತ ತಂದೆಯ ಸ್ಮಾರಕವಿದೆ. ಮತಾಂತರದ ಬಳಿಕ ಸೂಕ್ಮವತಿ ಬಾಲಿಯಲ್ಲೇ ಶಾಶ್ವತವಾಗಿ ಉಳಿಯುವರಾ? ಎನ್ನುವುದಕ್ಕೆ ಇನ್ನೂ ಸಹಾ ಉತ್ತರವನ್ನು ಅವರ ವಕೀಲರು ನೀಡಿಲ್ಲ.

ದಿವಂಗತ ಬಲಿನೀಸ್ ಅಜ್ಜಿ ಇಡಾ ಆಯು ನ್ಯೋಮನ್ ರೈ ಶ್ರೀಂಬೆನ್ ಅವ್ ಪ್ರಭಾವದಿಂದಾಗಿ 69 ವರ್ಷದ ಇಂಡೋನೇಷಿಯನ್ ನ್ಯಾಷನಲ್ ಪಾರ್ಟಿಯ ಸುಕ್ಮಾವತಿ  ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದೆ. ಮತಾಂತರ ಆಯೋಜನೆ‌ ಮಾಡಲಾಗುವ ದಿನವೇ ಸುಕ್ಮಾವತಿ ಅವರು ತಮ್ಮ 70 ನೇ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.