ಮಲೆಯಾಳಂ ಸಿನಿಮಾ ನಿರ್ದೇಶಕ ಅಲಿ ಅಕ್ಬರ್ ಕೆಲವೇ ದಿನಗಳ ಹಿಂದೆಯಷ್ಟೇ ಹಿಂದೂ ಧರ್ಮಕ್ಕೆ ಮತಾಂತರ ಆಗುವ ಘೋಷಣೆಯನ್ನು ಮಾಡಿದ್ದರು. ಅವರ ಈ ಘೋಷಣೆಯ ನಂತರ ಆ ವಿಚಾರವಾಗಿ ಸಾಕಷ್ಟು ಪರ ಹಾಗೂ ವಿ ರೋ ಧ ಮಾತುಗಳು ಕೇಳಿ ಬಂದಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಇದರ ಬಗ್ಗೆ ದೊಡ್ಡ ಚರ್ಚೆಯು ನಡೆದಿತ್ತು. ಆದರೆ ಅಲಿ ಅಕ್ಬರ್ ಅವರ ನಿರ್ಣಯದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಲಿಲ್ಲ. ಅವರು ತಾವು ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಅಧಿಕೃತವಾಗಿ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮೇಲೆ ಅವರ ಹೆಸರು ಸಹಾ ಬದಲಾವಣೆ ಆಗಿದೆ. ಅಲಿ ಅಕ್ಬರ್ ಅವರ ಮತಾಂತರ ನಡೆದ ವೇಳೆಯಲ್ಲಿ ತೆಗೆಯಲಾದ ಫೋಟೋಗಳು ಈಗ ವೈರಲ್ ಆಗಿದೆ. ಇದೇ ಜನವರಿ 13 ರಂದು ಮತಾಂತರ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಹಿಂದೂ ಸೇವಾ ಕೇಂದ್ರದ ಸ್ಥಾಪಕರಾದ ಪ್ರತೀಶ್ ವಿಶ್ವನಾಥ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಇದರ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಇತಿಹಾಸ ತಾನಾಗಿಯೇ ಮರುಕಳಿಸುತ್ತಿದೆ. ಅಲಿ ಅಕ್ಬರ್ ಈಗ ರಾಮ ಸಿಂಹನ್ ಎಂದು ಶೀರ್ಷಿಕೆಯನ್ನು ನೀಡಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಮೂಲಕ ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಿರುವ ಅಲಿ ಅಕ್ಬರ್ ಅವರು ಮತಾಂತರದ ನಂತರ ಅವರ ಹೆಸರನ್ನು ರಾಮ ಸಿಂಹನ್ ಎಂದು ಬದಲಿಸಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಅಲಿ ಅಕ್ಬರ್ ಅವರು ತಾನು ಹಿಂದೂ ಧರ್ಮಕ್ಕೆ ಮತಾಂತರ ಆಗುತ್ತಿರುವ ಕಾರಣವನ್ನು ಈ ಹಿಂದೆಯೇ ತಿಳಿಸಿದ್ದರು.
ಮಿಲಿಟರಿ ಅಧಿಕಾರಿ ಬಿಪಿನ್ ರಾವತ್ ಅವರ ನಿಧನದ ವೇಳೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಕೆಲವರು ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸುವಂತೆ, ವ್ಯಂಗ್ಯವಾಡುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳನ್ನು ಹಾಕಿದ್ದರು. ಇದನ್ನು ವಿ ರೋ ಧಿಸಿದ ಅಲಿ ಅಕ್ಬರ್ ಅವರು ಅಂದೇ ತಾನು ಇಸ್ಲಾಂ ನಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗುವುದಾಗಿ ಘೋಷಣೆಯನ್ನು ಮಾಡಿದರು. ಅದರಂತೆ ಈಗ ಮತಾಂತರಗೊಂಡಿದ್ದಾರೆ.