ಇಷ್ಟು ಹ್ಯಾಂಡ್ಸಮ್ ಡ್ಯಾಡಿ ಯಾರಿಗೂ ಇರಲ್ಲ: ಆ್ಯಂಕರ್ ಅನುಶ್ರೀ ಹೇಳಿದ ಹ್ಯಾಂಡ್ಸಮ್ ಡ್ಯಾಡಿ ಯಾರು??
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದೃಶ್ಯ ಟು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ದೃಶ್ಯ 1 ಬಂದಾಗ ಅದು ಕಂಡ ಯಶಸ್ಸು, ಸಿನಿ ಪ್ರೇಕ್ಷಕರಿಗೆ ಆ ಸಿನಿಮಾ ನೀಡಿದ ಮನರಂಜನೆ, ಥ್ರಿಲ್ಲಿಂಗ್ ಅನುಭವ ಇನ್ನೂ ಸಿನಿ ಪ್ರೇಮಿಗಳಿಗೆ ನೆನಪಿದೆ. ಈಗ ಅದೇ ಸಿನಿಮಾದ ಮುಂದುವರೆದ ಭಾಗ ಎಂದ ಮೇಲೆ ಸಹಜವಾಗಿಯೇ ಎಲ್ಲರಿಗೂ ಮತ್ತೊಮ್ಮೆ ಆಸಕ್ತಿ ಮತ್ತು ಕುತೂಹಲ ಎರಡೂ ಹೆಚ್ಚಾಗಿಯೇ ಇದೆ. ಮಲೆಯಾಳಂ ನಲ್ಲಿ ದೃಶ್ಯಂ 2 ದೊಡ್ಡ ಸದ್ದು ಮಾಡಿದೆ. ತೆಲುಗಿನಲ್ಲಿ ಸಹಾ ಓಟಿಟಿ ಯಲ್ಲಿ ದೃಶ್ಯಂ 2 ಬರಲು ಸಜ್ಜಾಗಿದೆ. ಈಗ ಕನ್ನಡದಲ್ಲಿ ಸಹಾ ದೃಶ್ಯ 2 ಸದ್ದು ಮಾಡಲು ವೇದಿಕೆ ಸಿದ್ಧವಾಗಿದೆ.
ದೃಶ್ಯ 2 ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಕಿರುತೆರೆಯ ಸ್ಟಾರ್ ನಿರೂಪಕಿ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಅನುಶ್ರೀ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ದೃಶ್ಯ ಟು ಸಿನಿಮಾದಲ್ಲಿ ರವಿ ಸರ್ ಅವರನ್ನು ಪರದೆಯ ಮೇಲೆ ನೋಡುವುದೇ ಒಂದು ಟ್ರೀಟ್ ಎಂದು ಬಹಳ ಖುಷಿಯಿಂದ ಹೇಳಿದ್ದಾರೆ ಅನುಶ್ರೀ. ಅನುಶ್ರೀ ಅವರು ಸಿನಿಮಾದಲ್ಲಿ ರವಿಚಂದ್ರನ್ ಅವರ ಪಾತ್ರ ತನಗೆ ಬಹಳ ಇಷ್ಟವಾಗಿದೆ ಎಂದು ಹೇಳುತ್ತಾ ರವಿಚಂದ್ರನ್ ಅವರನ್ನು ಹಾಡಿ ಹೊಗಳಿದ್ದಾರೆ.
ಅನುಶ್ರೀ ಅವರು ಮಾತನಾಡುತ್ತಾ, ಇಷ್ಟು ಗುಡ್ ಲುಕ್ಕಿಂಗ್, ಹ್ಯಾಂಡ್ಸಮ್ ಡ್ಯಾಡಿ ಯಾರಿಗೂ ಇರೋದಿಲ್ಲ ಅಂತ ನಾನು ರವಿ ಸರ್ ಅವರಿಗೆ ಹೇಳಿದೆ. ಇನ್ನು ದೃಶ್ ಟು ಸಿನಿಮಾ ಕೇವಲ ತಂದೆಗಾಗಿ ಮಾಡಿರೋ ಸಿನಿಮಾ ಅಲ್ಲ, ಇದು ಮಕ್ಕಳಿಗಾಗಿಯೂ ಮಾಡಿರೋ ಸಿನಿಮಾ ಆಗಿದೆ. ಮಕ್ಕಳ ಜೀವನದಲ್ಲಿ ತಂದೆ ಬೆಲೆ ಏನೂ ಅನ್ನೋದನ್ನು, ನನಗಿಂತ ಜಾಸ್ತಿ ಆ ವಿಷ್ಯ ಬೇರೆ ಯಾರಿಗೂ ಗೊತ್ತಿರೋದಿಲ್ಲ, ಜೀವನದಲ್ಲಿ ಒಬ್ಬ ಹೆಣ್ಣು ಮಗಳಿಗೆ ತಂದೆ ಬೆಲೆ ಏನು ಅಂತ ಎಲ್ಲರಿಗೂ ಗೊತ್ತೆ ಇರುತ್ತೆ.
ತಂದೆ ಬೆಲೆ ಏನು?? ಆ ತಂದೆ ಎಷ್ಟು ಧೈರ್ಯವಾಗಿ ಮಗಳ ಜೊತೆ ನಿತ್ಕೊಂಡು ಆ ಮಗಳಿಗೆ ಒಂದು ಸಣ್ಣ ಸ್ಕ್ರಾ ಚ್ ಕೂಡಾ ಬರದೇ ಇರೋ ರಿಯಲ್ ಹೀರೋ ಆಗಿ ತಂದೆ ಹೇಗೆ ನಿಂತ್ಕೊಳ್ತಾರೆ ಅನ್ನೋದನ್ನು ನೋಡಬೇಕಾದ್ರೆ ದೃಶ್ಯ 2 ಸಿನಿಮಾ ನೋಡಬೇಕು ಎಂದಿದ್ದಾರೆ ಅನುಶ್ರೀ. ಇನ್ನು ರವಿ ಸರ್ ಅವರ ತುಂಟತನ, ಅವರ ಸ್ಟೈಲ್ ಎಲ್ಲಾ ನೋಡೋಕೆ ಬಹಳ ಖುಷಿ, ಒಟ್ಟಾರೆ ದೃಶ್ಯ 2 ನಲ್ಲಿ ತಂದೆ, ತಾಯಿ ಪ್ರೀತಿ ಜೊತೆಗೆ ಬಹಳ ಹ್ಯಾಂಡ್ಸಮ್ ಡ್ಯಾಡಿ ಯನ್ನು ನೋಡಬಹುದು ಎಂದಿದ್ದಾರೆ.