ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಿನಿಮಾಗಳು ಎಂದರೆ ಅದಕ್ಕೆ ದೊಡ್ಡ ಕ್ರೇಜ್ ಇರೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಾಹುಬಲಿ ನಂತ್ರ ರಾಜಮೌಳಿ ಯಾವ ಸಿನಿಮಾ ಮಾಡ್ತಾರೆ?? ಅವರ ಹೊಸ ಸಿನಿಮಾ ಏನೆಲ್ಲಾ ದಾಖಲೆ ಸೃಷ್ಟಿ ಮಾಡಲಿದೆ?? ಎಂದು ಅಭಿಮಾನಿಗಳು, ಸಿನಿಮಾಗಳು ನಿರೀಕ್ಷೆಯಲ್ಲಿರುವಾಗಲೇ RRR ಸಿನಿಮಾ ಮಾಡುವ ವಿಚಾರ, ಅದರಲ್ಲಿ ಟಾಲಿವುಡ್ ನ ಇಬ್ಬರು ಸ್ಟಾರ್ ನಟರು ಕಾಣಿಸಿಕೊಳ್ಳುವುದು ದೊಡ್ಡ ಸಂಚಲನವನ್ನು ಸೃಷ್ಟಿಸಿತು.
ಈಗ ಇನ್ನು ಸಿನಿಮಾ ಬಿಡುಗಡೆ ಕೂಡಾ ಹತ್ತಿರವಾಗಿದೆ. ರಾಮ್ ಚರಣ್ ತೇಜಾ ಮತ್ತು ಎನ್ ಟಿ ಆರ್ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇನ್ನು ಆರ್ ಆರ್ ಆರ್ ಸಿನಿಮಾ ತಾರಾಗಣದ ಬಗ್ಗೆ ಎರಡು ಮಾತಿಲ್ಲ. ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಇವೆಲ್ಲವುಗಳ ನಡುವೆ ಬಾಲಿವುಡ್ ನಿಂದ ಸ್ಟಾರ್ ನಟಿ ಆಲಿಯಾ ಭಟ್ ಕೂಡಾ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಮೂಲಕ ದಕ್ಷಿಣ ಸಿನಿ ರಂಗಕ್ಕೆ ಎಂಟ್ರಿ ನೀಡಿದ್ದಾರೆ.
ಆಲಿಯಾ ಭಟ್ ಲುಕ್ ಈಗಾಗಲೇ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ಆಲಿಯಾ ಪಾತ್ರದ ಬಗ್ಗೆ ಸಹಾ ಕುತೂಹಲ ಮೂಡಿದೆ. ಆಲಿಯಾ ಭಟ್ ಈ ಮೊದಲು ಇಂತಹುದೊಂದು ವಿಶೇಷವಾದ ಲುಕ್ ನಲ್ಲಿ ಯಾರೂ ಸಹಾ ನೋಡಿರಲಿಲ್ಲ ಎನ್ನುವುದು ವಿಶೇಷ. ಆದ್ದರಿಂದಲೇ ಆಲಿಯಾ ಪಾತ್ರದ ಬಗ್ಗೆ ಒಂದು ವಿಶೇಷ ಸೆಳೆತ ಮೂಡಿದೆ. ಆದರೆ ಈಗ ಇವೆಲ್ಲವುಗಳ ನಡುವೆ ಒಂದು ಹೊಸ ಸುದ್ದಿ ಹೊರ ಬಂದಿದೆ. ಅಲ್ಲದೇ ಈ ಸುದ್ದಿ ಬಗ್ಗೆ ಕೂಡಾ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಹೌದು ಆರ್ ಆರ್ ಆರ್ ಸಿನಿಮಾದಲ್ಲಿ ನಟಿ ಆಲಿಯಾ ಭಟ್ ಇಡೀ ಸಿನಿಮಾದಲ್ಲಿ ಕೇವಲ 15 ನಿಮಿಷ ಮಾತ್ರವೇ ತೆರೆಯ ಮೇಲೆ ಕಾಣಲಿದ್ದಾರೆ ಎನ್ನಲಾಗಿದೆ. ಕೇವಲ ಹದಿನೈದು ನಿಮಿಷದ ಪಾತ್ರಕ್ಕೆ ಆಲಿಯಾ ಭಟ್ ಎನ್ನುವುದು ತಿಳಿದ ಮೇಲೆ ಕೆಲವರು ಅಯ್ಯೋ ಇಷ್ಟು ಮಾತ್ರಕ್ಕೆ ಆಲಿಯಾ ಭಟ್ ಯಾಕೆ ಬೇಕಿತ್ತು ಎಂದರೆ, ಇನ್ನೂ ಕೆಲವರು ಅವಧಿ ಕಡಿಮೆ ಆದ್ರೇನೂ, ಆಲಿಯಾ ಪಾತ್ರ ಬಹಳ ಮುಖ್ಯ ಹಾಗೂ ಮಹತ್ವದ್ದಾಗಿರಬೇಕು ಎಂದು ಹೇಳಿದ್ದಾರೆ. ಆಲಿಯಾ ಪಾತ್ರ ಯಾವ ಮಟ್ಟಕ್ಕೆ ಜಾದೂ ಮಾಡಲಿದೆ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ.