ಇಷ್ಟು ದೊಡ್ಡ ಮೊತ್ತದ ಹಣ ನಾನು ಜೀವನದಲ್ಲಿ ನೋಡಿರಲಿಲ್ಲ: ಬಿಗ್ ಬಾಸ್ ವಿನ್ನರ್ ಮಂಜು ಮಾತು

0 1

ಹಳ್ಳಿ ಹೈದ ಮಂಜು ಪಾವಗಡ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರ ಜರ್ನಿಯ ಕೊನೆಗೆ ಯಾರು ವಿನ್ನರ್ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಆದರೆ ಅನೇಕರಿಗೆ ಇದು ಶಾ ಕ್ ಸಹಾ ನೀಡಿದೆ. ಇದು ಎಲ್ಲಾ ಸೀಸನ್ ಗಳ ಅಂತ್ಯದಲ್ಲಿ ಕೂಡಾ ಅಭಿಮಾನಿಗಳಾದವರಿಗೆ ಮೂಡುವುದು ಸಹಜ. ಇನ್ನು ಬಿಗ್ ಬಾಸ್ ವಿನ್ನರ್ ಆಗಿರುವ ಮಂಜು ಪಾವಗಡ ಅವರಿಗೆ ಟ್ರೋಫಿಯ ಜೊತೆಗೆ 53 ಲಕ್ಷ ರೂಪಾಯಿಗಳ ಬಹುಮಾನವನ್ನು ಸಹ ನೀಡಲಾಗಿದೆ. ಈ ಬಹುಮಾನವನ್ನು ಸ್ವೀಕರಿಸಿದ ಮಂಜು ಪಾವಗಡ ಅವರು, ನನ್ನ ಜೀವನದಲ್ಲಿ ಇಷ್ಟೊಂದು ಮೊತ್ತವನ್ನು ನಾನು ನೋಡಿಯೇ ಇಲ್ಲ ಎಂದು ಹೇಳಿದ್ದಾರೆ. ಬಿಗ್ ಬಾಸ್ ಗೆದ್ದ ನಂತರ ಮಂಜು ಪಾವಗಡ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ, ಈಗ ಗೆದ್ದಿರುವ ಹಣವನ್ನು ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿಲ್ಲ ಎಂದು ಬಹಳ ಸರಳವಾದ ಮಾತುಗಳಲ್ಲಿ ಹೇಳಿದ್ದಾರೆ.

ಮಂಜು ಅವರು ಮಾತನಾಡುತ್ತಾ, ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ದೊಡ್ಡ ಆಸೆಯಿದೆ, ಅವರಿಗಿಂತ ಬೇರೆ ಯಾವುದೂ ಮುಖ್ಯವಲ್ಲ. ಯಾಕೆಂದರೆ ಅವರು ಬಹಳ ಕಷ್ಟಪಟ್ಟು ಸಾಕಿ ಬೆಳೆಸಿದ್ದಾರೆ.. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದೇ ನನ್ನ ದೊಡ್ಡ ಆಸೆ ಎಂದು ಹೇಳಿದ್ದಾರೆ. ಇನ್ನು ಈ ರಿಯಾಲಿಟಿ ಶೋ ಗೆ ಸಿಕ್ಕ ಅವಕಾಶದ ಕುರಿತು ಹೇಳಿರುವ ಅವರು, ಕನ್ನಡದ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಬಹಳ ದೊಡ್ಡ ಶೋ ಇದಕ್ಕೆ ಅವಕಾಶ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಗ್ರಾಂಡ್ ಫಿನಾಲೆಯಲ್ಲಿ ಸುದೀಪ್ ಸರ್ ಅವರ ಎಡ ಬಲದಲ್ಲಿ ನಿಲ್ಲುವುದೇ ಒಂದು ದೊಡ್ಡ ಸಾಧನೆಯಾಗಿದೆ ಎಂದು ಸಹ ಮಂಜು ಪಾವಗಡ ಅವರು ಹೇಳಿದ್ದಾರೆ.

ಅವರ ಪಕ್ಕದಲ್ಲಿ ನಿಂತಿರುವಂತಹ ಆ ಸಮಯದಲ್ಲಿ ತಲೆಯಲ್ಲಿ ನೂರಾರು ಆಲೋಚನೆಗಳು ಓಡುತ್ತಿರುತ್ತವೆ. ಅವುಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಅವೆಲ್ಲವನ್ನೂ ಎದುರಿಸಿ ಮುಂದೆ ಬಂದಿರುವುದು ಬಹಳ ಸಂತೋಷವನ್ನು ನೀಡಿದೆ ಎಂದು ಹೇಳಿದ್ದಾರೆ. ಸುದೀಪ್ ಸರ್ ಅವರು ನನ್ನ ಕೈ ಎತ್ತಿದಾಗ ನಾನು ವಿನ್ನರಾ?? ಎಂದು ನನಗೆ ಅನಿಸಿತ್ತು. ನನ್ನ ಫೋಟೋ ತಿರುಗಿಸಿದಾಗಲೂ ಅದೇ ಭಾವನೆ, ಒಂದು ರೀತಿಯ ಗಲಿಬಿಲಿಯಾದ ಮನಸ್ಥಿತಿ ನನ್ನದಾಗಿತ್ತು, ಸದ್ಯದ ಪರಿಸ್ಥಿತಿಯಲ್ಲಿ ಕೂಡಾ ನಾನು ಹಾಗೆ ಇದ್ದೇನೆ ಎಂದು ಮಂಜು ಪಾವಗಡ ಅವರು ಒಂದು ಅತ್ಯಾನಂದರ ಅನುಭವದಲ್ಲಿ ಇದ್ದಾರೆ.

Leave A Reply

Your email address will not be published.