ಇಷ್ಟಪಟ್ಟ ಹುಡುಗರನ್ನೆಲ್ಲಾ ಮದುವೆ ಆಗಬೇಕಿಲ್ಲ!! ನಟಿ ಜಾನ್ವಿ ಕಪೂರ್ ಬೋಲ್ಡ್ ಹೇಳಿಕೆಗೆ ದಂಗಾದ ನೆಟ್ಟಿಗರು

Entertainment Featured-Articles Movies News
30 Views

ಗುಡ್ ಲೆಕ್ ಚೆರ್ರಿ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿರುವ ಬಾಲಿವುಡ್ ನಟ ಜಾನ್ವಿ ಕಪೂರ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಓಟಿಟಿ ಯ ಪ್ರಮುಖ ವೇದಿಕೆಯಾಗಿರುವ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಜಾನ್ವಿ ಅವರ ಈ ಹೊಸ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಪ್ರಶಂಸೆಗಳನ್ನು ಪಡೆದುಕೊಂಡಿದೆ. ಪ್ರಸ್ತುತ ಜಾನ್ವಿ ಕಪೂರ್ ಅವರು ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ವರಣ್ ಧವನ್ ನಟಿಸುತ್ತಿದ್ದು, ಈ ಜೋಡಿ ಯಾವ ಕಮಾಲ್ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈಗ ಇವೆಲ್ಲವುಗಳ ನಡುವೆ ಜಾನ್ವಿ ಡೇಟಿಂಗ್ ವಿಚಾರವಾಗಿ ಮಾತನಾಡಿ ಸುದ್ದಿಯಾಗಿದ್ದಾರೆ.

ಹೌದು, ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ಜಾನ್ವಿ ಕಪೂರ್ ಅವರು ಡೇಟಿಂಗ್ ವಿಚಾರವಾಗಿ ಮಾತನಾಡುತ್ತಾ, ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರು ಹುಬ್ಬೇರಿಸುವಂತೆ ಮಾತನಾಡಿದ್ದಾರೆ. ಪ್ರಸ್ತುತ ತಾನು ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿರುವ ಜಾನ್ವಿ ಡೇಟಿಂಗ್ ವಿಚಾರವಾಗಿ ತಮ್ಮ ತಂದೆ ತಾಯಿ ಅಂದರೆ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ದೃಷ್ಟಿಕೋನ ಏನಾಗಿತ್ತು ಎಂದು ಹೇಳುವುದರ ಜೊತೆಗೆ ತನ್ನ ನಿಲುವು ಏನು ಎನ್ನುವುದನ್ನು ಸಹಾ ನಟಿ ಶೇರ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಜಾನ್ವಿ ಮಾತನಾಡುತ್ತಾ, ನನ್ನ ತಂದೆ ತಾಯಿಗೆ ಡೇಟಿಂಗ್ ಅನ್ನೋ ಕಾನ್ಸೆಪ್ಟ್ ಇಷ್ಟವಿಲ್ಲ. ಆದರೆ ಡೇಟಿಂಗ್ ಎನ್ನುವುದು ಒಂದು ಸಂದರ್ಭ ಮಾತ್ರವೇ, ನನ್ನ ತಂದೆ ತಾಯಿ ಮಾತ್ರ ಈ ವಿಷಯವಾಗಿ ಬಹಳ ನಾಟಕೀಯವಾಗಿ ಇದ್ದರು, ಅವರಿಗೆ ಅದೇಕೆ ಹಿಡಿಸುತ್ತಿರಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ನಿನಗೆ ಹುಡುಗ ಇಷ್ಟವಾದರೆ ನಮ್ಮ ಬಳಿಗೆ ಕರೆದುಕೊಂಡು ಬಾ, ನಾವು ನಿನಗೆ ಮದುವೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದರು. ಆದರೆ ನಮಗೆ ಇಷ್ಟವಾದ ಹುಡುಗನನ್ನು ಮದುವೆಯಾಗುವ ಅಗತ್ಯ ಇಲ್ಲವಲ್ಲ ?
ನಾವು ಯಾವಾಗಲೂ ಪ್ರಶಾಂತವಾಗಿದ್ದು, ಚಿಲ್ ಆಗುತ್ತಲೇ ಇರಬೇಕು.

ಅದಕ್ಕೆ ಜೀವನದಲ್ಲಿ ಲೈಕ್ ಚಿಲ್ ಎನ್ನುವ ಒಂದು ಕಾನ್ಸೆಪ್ಟ್ ಇರಬೇಕು. ಆದರೆ ಅವರಿಗೆ ಇದು ಅರ್ಥವಾಗುತ್ತಿರಲಿಲ್ಲ ಎಂದು ಜಾನ್ವಿ ಡೇಟಿಂಗ್ ವಿಚಾರವಾಗಿ ಮಾತನಾಡಿದ್ದಾರೆ. ಇತ್ತೀಚಿಗೆ ಒಂದು ರಿಯಾಲಿಟಿ ಶೋ ಗೆ ಅತಿಥಿಯಾಗಿ ಬಂದಿದ್ದ ಜಾನ್ವಿ ಕಪೂರ್ ಪ್ರಸ್ತುತ ನಾನು ಒಂಟಿಯಾಗಿ, ಖುಷಿಯಾಗಿ ಇದ್ದೇನೆ. ಇತರರೊಡನೆ ಹೆಚ್ಚು ಹತ್ತಿರವಾಗಿದ್ದರೆ ಅವರನ್ನು ಅದು ಕಟ್ಟಿ ಹಾಕುವಂತೆ ಮಾಡುತ್ತದೆ.‌ ಇದರಿಂದ ಅವರು ಬಹಳ ಭಯಪಡುವಂತಾಗುತ್ತದೆ. ಬೆದರಿಕೆಗಳಿಗೆ ಗುರಿಯಾಗುತ್ತಾರೆ. ಯಾರೊಂದಿಗಾದರೂ ನಿಜವಾದ ಸಂಬಂಧ ಹೊಂದಬೇಕಾದರೆ ಅವರಿಂದ ದೂರ ಇರಬೇಕು ಎಂದಿದ್ದಾರೆ ಜಾನ್ವಿ ಕಪೂರ್.

Leave a Reply

Your email address will not be published. Required fields are marked *