ಇವರಿಗೆ ಕನ್ನಡ ಬರಲ್ವಾ?? ಮಾಲಾಶ್ರೀ ಅವರ ಮಕ್ಕಳ ಬಗ್ಗೆ ಜನ ಹೀಗೆ ಪ್ರಶ್ನೆ ಮಾಡ್ತಿರೋದು ಏಕೆ??

Entertainment Featured-Articles News
63 Views

ಕನ್ನಡ ಸಿನಿ ರಂಗದಲ್ಲಿ ಕನಸಿನ ರಾಣಿ ಮಾಲಾಶ್ರೀ ಎಂದರೆ ಅದೊಂದು ದೊಡ್ಡ ಹೆಸರು, ಕನ್ನಡ ಸಿನಿ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಟಿ ಮಾಲಾಶ್ರೀ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಂದು ಕಾಲದಲ್ಲಿ ಕೈ ತುಂಬಾ ಕೆಲಸ, ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಮಾಲಾಶ್ರೀ ಅವರೇ ನಾಯಕಿ, ಅವರ ಕಾಲ್ ಶೀಟ್ ಸಿಗುವುದು ಸಹಾ ಅನೇಕ ನಿರ್ಮಾಪಕ, ನಿರ್ದೇಶಕರಿಗೆ ಕಠಿಣವಾಗಿದ್ದ ದಿನಗಳು ಇದ್ದವು. ಕನ್ನಡ ಸಿನಿರಂಗ, ಕನ್ನಡಿಗರು ಮಾಲಾಶ್ರೀ ಅವರಿಗೆ ನೀಡಿದ ಪ್ರೀತಿ, ಅಭಿಮಾನ ಅವರನ್ನು ಯಾವ ಎತ್ತರಕ್ಕೆ ಏರಿಸಿದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಮೊದಲು ನಾಯಕರ ಜೊತೆ ನಾಯಕಿಯಾಗಿ ಕಾಣಿಸಿಕೊಂಡ ಮಾಲಾಶ್ರೀ ನಂತರದ ದಿನಗಳಲ್ಲಿ ಮಹಿಳಾ ಪ್ರಧಾನ ಅಥವಾ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಮಾಡಿ ಸೈ ಎನಿಸಿಕೊಂಡರು. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವರ್ಚಸ್ಸನ್ನು ಪಡೆದ ನಟಿ ಮಾಲಾಶ್ರೀ ಅವರ ಜೀವನದಲ್ಲಿ ಮರೆಯಲಾಗದ ನೋವು ನೀಡಿದ್ದು ಅವರ ಪತಿ ನಿರ್ಮಾಪಕ ರಾಮು ಅವರ ಅಗಲಿಕೆ. ರಾಮು ಅವರ ನಿಧನಕ್ಕೆ ಮೊದಲು ಅವರು ಕೊನೆಯದಾಗಿ ನಿರ್ಮಾಣ ಮಾಡಿದ್ದು ಪ್ರಜ್ವಲ್ ದೇವರಾಜ್ ಅವರು ನಾಯಕನಾಗಿರುವ ಸಿನಿಮಾ ಅರ್ಜುನ್ ಗೌಡ.

ಈ ಸಿನಿಮಾವನ್ನು ಮಾಲಾಶ್ರೀ ಅವರೇ ಬಿಡುಗಡೆ ಮಾಡಲು ತೀರ್ಮಾನಿಸಿದ್ದು, ಈ ಸಿನಿಮಾ ಪ್ರೀ ರಿಲೀಸ್ ಈವೆಂಟ್ ಇಂದು ನಡೆದಿದೆ. ರಾಮು ಅವರ ನಿರ್ಮಾಣದಲ್ಲಿ ಸಿದ್ಧವಾದ ಸಿನಿಮಾಗಳಲ್ಲಿ ನಟಿಸಿದ್ದ ಬಹುತೇಕ ಎಲ್ಲಾ ಸ್ಟಾರ್ ನಟರು ಸಹಾ ಈ ಈವೆಂಟ್ ನಲ್ಲಿ ಭಾಗವಹಿಸಿದ್ದರು. ಬೇಸರದಲ್ಲಿ, ನೋವಿನಲ್ಲಿ ಇದ್ದ ಮಾಲಾಶ್ರೀ ಅವರಿಗೆ ಎಲ್ಲರೂ ಸಾಂತ್ವನವನ್ನು ನೀಡಿದರು, ಎಲ್ಲರೂ ವೇದಿಕೆಯ ಮೇಲೆ ಮಾತನಾಡಿದರು.
.
ಈ ವೇಳೆ ಮಾಲಾಶ್ರೀ ಅವರ ಮಗಳು ಹಾಗೂ ಮಗ ಇಬ್ಬರೂ ಸಹಾ ಅವರ ತಂದೆಯ ಬಗ್ಗೆ ಮಾತನಾಡಿದ್ದಾರೆ. ಅವರು ಸಹಾ ನೋವಿನಲ್ಲಿ ಇರುವುದು ನಿಜ. ಆದರೆ ಅವರು ಮಾತನಾಡಿದ ದೃಶ್ಯಗಳನ್ನು ನೋಡಿದ ಮೇಲೆ ಬಹಳಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮಾಲಾಶ್ರೀ ಅವರ ಮಗಳು ಹಾಗೂ ಮಗ ಇಬ್ಬರೂ ಬಳಸಿದ ಆಂಗ್ಲ ಭಾಷೆ. ಹೌದು ಇಬ್ಭರೂ ಕೂಡಾ ಇಂಗ್ಲೀಷ್ ನಲ್ಲೇ ಮಾತನಾಡಿದ್ದು ಕನ್ನಡಾಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.

ಅಪ್ಪ ಕನ್ನಡ ಸಿನಿಮಾ ನಿರ್ಮಾಣದ ಮೂಲಕ ಹೆಸರು ಮಾಡಿದವರು, ಇನ್ನು ಅಮ್ಮ ಮಾಲಾಶ್ರೀ ಕನ್ನಡ ಚಿತ್ರರಂಗದ ಸ್ಟಾರ್ ನಟಿ ಆದರೆ ಅವರ ಮಕ್ಕಳಿಗೆ ಕನ್ನಡ ಬರುವುದೇ ಇಲ್ಲವೇ?? ಎನ್ನುವ ಪ್ರಶ್ನೆಯೊಂದು ಮೂಡಿರುವುದು ಖಂಡಿತ. ಕನ್ನಡ ಸಿನಿಮಾ ಕಾರ್ಯಕ್ರಮದಲ್ಲಿ ಮಾಲಾಶ್ರೀ ಅವರ ಇಬ್ಬರು ಮಕ್ಕಳ ಬಾಯಲ್ಲಿ ಕನ್ನಡ ಬರಲೇ ಇಲ್ಲ ಎನ್ನುವುದು ಖಂಡಿತ ಅಚ್ಚರಿಯನ್ನು ಮೂಡಿಸಿದೆ. ಇವರಿಗೆ ಕನ್ನಡ ಬಂದರೂ ಮಾತನಾಡಲಿಲ್ಲವೋ ಅಥವಾ ಕಲಿತಿಲ್ಲವೋ ಗೊತ್ತಿಲ್ಲ.

ಇದು ಕೇವಲ ಮಾಲಾಶ್ರೀ ಅವರ ಮಕ್ಕಳ ವಿಷಯದಲ್ಲಿ ಮಾತ್ರವೇ ಅಲ್ಲ, ಬೇರೆ ಸೆಲೆಬ್ರಿಟಿಗಳ, ಕೆಲವು ಸಿನಿಮಾ ನಟ ನಟಿಯರ ಮಕ್ಕಳು ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್ ನಲ್ಲೇ ಮಾತನಾಡುವುದು ಈಗಾಗಲೇ ಗೊತ್ತಿರುವ ವಿಷಯವೇ ಆಗಿದೆ. ಕನ್ನಡದಿಂದಲೇ ಬೆಳೆದು, ಕನ್ನಡದಿಂದಲೇ ಜನಪ್ರಿಯತೆ, ಹಣ, ಆಸ್ತಿ ಪಡೆದವರ ಮಕ್ಕಳ ಕನ್ನಡ ಪ್ರೇಮ ಈ ಮಟ್ಟದಲ್ಲಿ ಇರುವುದು ಖಂಡಿತ ಬೇಸರ ಮೂಡಿಸುತ್ತದೆ.

Leave a Reply

Your email address will not be published. Required fields are marked *