ಇವರಿಗೆ ಇದೇ ಕೆಲಸಾನಾ? ಮತ್ತೊಮ್ಮೆ ಬೆತ್ತಲಾಗಲು ಸಜ್ಜಾದ್ರಾ ರಣ್ವೀರ್ ಸಿಂಗ್? ಹರಿದಾಡಿದೆ ಹೊಸ ಸುದ್ದಿ!!
ಬಾಲಿವುಡ್ ನ ಸ್ಟಾರ್ ನಟ ರಣ್ವೀರ್ ಸಿಂಗ್ ಇತ್ತೀಚಿಗೆ ತಮ್ಮ ಸಿನಿಮಾ ವಿಚಾರ ಕ್ಕಿಂತ ಹೆಚ್ಚಾಗಿ ತಾವು ಬೆ ತ್ತ ಲೆ ಯಾಗಿ ಮಾಡಿದ ಫೋಟೋ ಶೂಟ್ ನಿಂದಾಗಿಯೇ ಸುದ್ದಿಯಾಗಿ, ಚರ್ಚೆಯಾಗಿ ಕೊನೆಗೆ ವಿ ವಾ ದ ವೊಂದಕ್ಕೆ ಕಾರಣವಾಗಿದ್ದಾರೆ. ಮ್ಯಾಗಜೀನ್ ಒಂದಕ್ಕಾಗಿ ನಟ ರಣ್ವೀರ್ ಅವರು ಬೆ ತ್ತ ಲೆಯಾಗಿ ಕ್ಯಾಮರಾ ಮುಂದೆ ಪೋಸ್ ಗಳನ್ನು ನೀಡಿದ್ದರು. ಈ ಫೋಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿತ್ತು. ರಣ್ವೀರ್ ಸಿಂಗ್ ಅವರ ಫೋಟೋ ಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಇವೆಲ್ಲವುಗಳ ಬೆನ್ನಲ್ಲೇ ನಟ ಸಮಯದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಯಿತು.
ಮುಂಬೈ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಚೆಂಬೂರ್ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿತ್ತು. ಆ ಸಂಸ್ಥೆ ದಾಖಲು ಮಾಡಿದ ದೂರಿನ ಅನ್ವಯ ನಟನಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಆದರೆ ನಟ ಸದ್ಯಕ್ಕೆ ಮುಂಬೈ ನಿಂದ ಹೊರಗೆ ಇರುವುದರಿಂದ ಅವರು ಆಗಸ್ಟ್ 16 ರ ನಂತರ ಮರಳಿ ಬರಲಿದ್ದು, ಅನಂತರ ಅವರು ಅಧಿಕಾರಿಗಳ ಮುಂದೆ ಹಾಜರಾಗುತ್ತಾರೆ ಎನ್ನಲಾಗಿದೆ. ಸ್ವಯಂ ಸಂಸ್ಥೆಯು ತನ್ನ ದೂರಿನಲ್ಲಿ ಮಹಿಳೆಯರಿಗೆ ಅಪಮಾನ ಮಾಡುವ ಉದ್ದೇಶದಿಂದ ಈ ಫೋಟೋ ಶೂಟ್ ಮಾಡಲಾಗಿದೆ ಎಂದು ತಿಳಿಸಿತ್ತು. ಆದರೆ ಈಗ ಸಮನ್ಸ್ ಜಾರಿಯಾದ ಬೆನ್ನಲ್ಲೇ ಇನ್ನೊಂದು ಸುದ್ದಿ ಹರಡಿದೆ.
ಹೌದು, ಬಾಲಿವುಡ್ ಅಂಗಳದಲ್ಲಿ ಒಂದು ಹೊಸ ಸುದ್ದಿ ಹರಿದಾಡಿದ್ದು, ಅದರ ಅನ್ವಯ ನಟ ರಣ್ವೀರ್ ಅವರಿಗೆ ಪೇಟಾ, ಪ್ರಾಣಿಗಳ ಬಗ್ಗೆ ಅವುಗಳ ರಕ್ಷಣೆಗ ಬಗ್ಗೆ ಗಮನ ನೀಡುವ ಸಂಸ್ಥೆಯಿಂದ ಮತ್ತೊಂದು ಬೆ ತ್ತ ಲೆ ಶೂಟ್ ಗೆ ಆಫರ್ ಬಂದಿದೆ ಎನ್ನಲಾಗಿದೆ. ಇದು ಕೇವಲ ಒಂದು ಸದುದ್ದೇಶದಿಂದ ಎಂದು ಹೇಳಲಾಗುತ್ತಿದೆ. ಆದರೆ ಒಂದು ಸಲ ಬೆ ತ್ತಲೆಯಾಗಿದ್ದೇ ನಟನ ಸುತ್ತಾ ಸಾಕಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಿದ್ದು, ಈಗ ಮತ್ತೊಮ್ಮೆ ಅವರು ಬೆ ತ್ತ ಲಾ ಗಲು ಒಪ್ಪುತ್ತಾರೆಯೇ ? ಎನ್ನುವ ಪ್ರಶ್ನೆ ಸಹಾ ಎದ್ದಿದೆ. ಒಂದು ವೇಳೆ ಒಪ್ಪಿದರೆ ಇದು ಮತ್ತೊಂದು ಸಮಸ್ಯೆಗೆ ಕಾರಣವಾದರೂ ಅಚ್ಚರಿಯೇನಿಲ್ಲ.
ಇನ್ನು ನಟ ರಣ್ವೀರ್ ಅವರು ಈ ಹಿಂದೆ ಮ್ಯಾಗಜೀನ್ ಗೆ ಬೆ ತ್ತ ಲೆ ಪೋಸ್ ಗಳನ್ನು ನೀಡಲು ಕೋಟಿ ಕೋಟಿ ಹಣವನ್ನು ಪಡೆದಿದ್ದಾರೆ ಎನ್ನಲಾಗಿದ್ದು. ಸಿನಿಮಾ ವಿಮರ್ಶಕರೊಬ್ಬರು ಟ್ವಿಟರ್ ನಲ್ಲಿ ಈ ಬಗ್ಗೆ ಒಂದು ಪೋಸ್ಟ್ ಮಾಡಿ ನಟ ರಣ್ವೀರ್ ಅವರು ಅಂತಹ ಫೋಟೋ ಶೂಟ್ ಗಾಗಿ ಬರೋಬ್ಬರಿ 50 ಕೋಟಿ ರೂ. ಗಳ ಸಂಭಾವನೆ ಪಡೆದಿದ್ದಾರೆ ಎಂದಿದ್ದರು, ಅಲ್ಲದೇ ಇವರು ಸಮಾಜಕ್ಕೆ ಎಂತಹ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಸಹಾ ತಮ್ಮ ಟ್ವೀಟ್ ನಲ್ಲಿ ಅಸಮಾಧಾನವನ್ನು ಹೊರ ಹಾಕಿದ್ದರು.