ಇಲಿಗಳಂತೆ ಬಿಲದಲ್ಲಿ ಅಡಗಿದ ಬಾಲಿವುಡ್ ಮಂದಿ ಹೊರ ಬಂದು ಈ ಸಿನಿಮಾ ನೋಡಿ: ಕಂಗನಾ ರಣಾವತ್

Entertainment Featured-Articles News

ನಟಿ ಪಲ್ಲವಿ ಜೋಶಿ ನಿರ್ಮಾಣದ, ಬಾಲಿವುಡ್ ನ ಹಿರಿಯ ನಟ ಅನುಮಪ್ ಖೇರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ, ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ದಿ ಕಶ್ಮೀರ್ ಫೈಲ್ಸ್ ಬಿಡುಗಡೆ ನಂತರ ಇಡೀ ದೇಶದಲ್ಲೊಂದು ಸಂಚಲನವನ್ನು ಸೃಷ್ಟಿಸಿದೆ. ಕಾಶ್ಮೀರಿ ಪಂಡಿತರ ಮೇಲೆ ನಡೆದಂತಹ ದೌ ರ್ಜ ನ್ಯದ ಕುರಿತಾದ ಸತ್ಯ ಘಟನೆಗಳ ಆಧಾರಿತ ಈ ಸಿನಿಮಾ ಬಿಡುಗಡೆಗೊಂಡ ಎರಡನೆಯ ದಿನದಿಂದಲೇ ಇಡೀ ದೇಶದಲ್ಲೊಂದು ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ ಹಾಗೂ ಥಿಯೇಟರ್ ಗಳಲ್ಲಿ ಅಬ್ಬರಿಸುತ್ತಾ, ಸ್ಕ್ರೀನ್ ಗಳ ಸಂಖ್ಯೆ ಕೂಡಾ ಹೆಚ್ಚಿದೆ.

ರಾಧೇ ಶ್ಯಾಮ್ ನಂತಹ ಬಹುಕೋಟಿ ಸಿನಿಮಾವನ್ನು ಹಿಂದೆ ಹಾಕಿ ಮುನ್ನುಗ್ಗಿರುವ ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಮೆಚ್ಚುಗೆಗಳು ಹರಿದು ಬರುತ್ತಿವೆ. ಸಿನಿಮಾದಲ್ಲಿ ಅನುಪಮ್ ಖೇರ್ ಅವರ ನಟನಗೆ ಕನ್ನಡದ ಹಿರಿಯ ನಟ ಅನಂತ್ ನಾಗ್, ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಸಹಾ ಕಣ್ಣೀರು ಹಾಕುತ್ತಾ ಥಿಯೇಟರ್ ಗಳಿಂದ ಹೊರ ಬಂದಿದ್ದಾರೆ. ಬಾಲಿವುಡ್ ನಟಿ ಕಂಗನಾ ಸಿನಿಮಾ ನೋಡಿ ಬಾಲಿವುಡ್ ಮಂದಿಯ ವಿ ರು ದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

ಕಂಗನಾ ಮಾತನಾಡುತ್ತಾ, ಇಡೀ ಚಿತ್ರ ತಂಡ ಶ್ರಮ ವಹಿಸಿ ಒಂದು ಅದ್ಭುತವಾದ ಸಿನಿಮಾ ಮಾಡಿದೆ. ಬಾಲಿವುಡ್ ಮಾಡಿದಂತಹ ಪಾಪಗಳನ್ನು ಇವರೆಲ್ಲಾ ಸೇರಿ ಇಂದು ತೊಳೆದು ಹಾಕಿದ್ದಾರೆ. ಈ ಸಿನಿಮಾ ಬಹಳ ಚೆನ್ನಾಗಿದೆ. ಬಿಲಗಳಲ್ಲಿ ಇಲಿಗಳಂತೆ ಅಡಗಿ ಕುಳಿತಿರುವ ಬಾಲಿವುಡ್ ಇಂಡಸ್ಟ್ರಿ ಮಂದಿಯು ಹೊರಗೆ ಬಂದು ಈ ಸಿನಿಮಾ ನೋಡಬೇಕಾಗಿದೆ. ಅನಗತ್ಯ ಸಿನಿಮಾಗಳನ್ನು ಪ್ರಮೋಟ್ ಮಾಡುತ್ತಾರೆ, ಮುಂದೆ ಬಂದು ಇಂತಹ ಸಿನಿಮಾಗಳನ್ನು ಪ್ರಮೋಟ್ ಮಾಡಲಿ ಎಂದಿದ್ದಾರೆ ಕಂಗನಾ‌ ರಣಾವತ್.

ಹೌದು, ಸಿನಿಮಾ ಬಿಡುಗಡೆ ಆಗಿ ಮೂರ್ನಾಲ್ಕು ದಿನಗಳೇ ಕಳೆದಿವೆ. ಪ್ರೇಕ್ಷಕರಿಂದ ಮೆಚ್ಚುಗೆಗಳು ಹರಿದು ಬರುತ್ತಿವೆ. ಸಿನಿಮಾ ಸ್ಕ್ರೀನ್ ಗಳ ಸಂಖ್ಯೆ ಏರಿಕೆಯಾಗಿದೆ. ಅನುಪಮ್ ಖೇರ್ ನಟನೆಗೆ ಜನರು ಫಿದಾ ಆಗಿದ್ದಾರೆ. ಆದರೆ ಬಾಲಿವುಡ್ ನ‌‌ ದಿಗ್ಗಜರು ಎನಿಸಿಕೊಂಡು ಯಾರೂ ಕೂಡಾ ಇದುವರೆಗೂ ಸಿನಿಮಾ ಬಗ್ಗೆ ತುಟಿ ಬಿಚ್ಚಿಲ್ಲ. ಒಂದಿಬ್ಬರನ್ನು ಬಿಟ್ಟು ಇಡೀ ಬಾಲಿವುಡ್ ಮೌನಕ್ಕೆ ಶರಣಾಗಿದೆ. ಒಟ್ಟಾರೆ ದಿ ಕಶ್ಮೀರ್ ಫೈಲ್ಸ್ ಒಂದು ದೊಡ್ಡ ಬಿರುಗಾಳಿಯನ್ನಂತೂ ಎಬ್ಭಿಸಿದೆ.

Leave a Reply

Your email address will not be published. Required fields are marked *