ಇನ್ಸ್ಟಾಗ್ರಾಂ ಗೆ ಕಾಲಿಟ್ಟ ಸ್ಟಾರ್ ನಟಿ: ಕೆಲವೇ ಗಂಟೆಗಳಲ್ಲಿ 1.4 ಮಿಲಿಯನ್ ಹಿಂಬಾಲಕರು,ಹೇಗಿದೆ ನೋಡಿ ಸ್ಟಾರ್ ಡಂ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾರಂಗದ ಜನಪ್ರಿಯ ನಟಿ, ತಮಿಳು ಚಿತ್ರರಂಗದ ಸ್ಟಾರ್ ನಟ ಎನಿಸಿಕೊಂಡಿರುವ ಸೂರ್ಯ ಅವರ ಪತ್ನಿಯಾಗಿರುವ ನಟಿ ಜ್ಯೋತಿಕಾ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟಿಯಾಗಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಟಿಸಿರುವ ಜ್ಯೋತಿಕಾ, ತಮಿಳು ಚಿತ್ರರಂಗದಲ್ಲಿ ಒಂದು ಕಾಲದ ನಂಬರ್ ವನ್ ನಟಿಯಾಗಿದ್ದವರು. ನಟ ಸೂರ್ಯ ಅವರ ಜೊತೆಗೆ ವಿವಾಹವಾದ ನಂತರವೂ ಸಹಾ ಜ್ಯೋತಿಕಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಕಥೆಗಳನ್ನು ಹೊಂದಿರುವ ಸಿನಿಮಾಗಳಲ್ಲಿ ಜ್ಯೋತಿಕಾ ಹೆಚ್ಚಾಗಿ ಕಾಣಿಸಿಕೊಂಡು, ಮಹಿಳಾ ಪ್ರೇಕ್ಷಕರ ಅಭಿಮಾನವನ್ನು ತನ್ನದಾಗಿಸಿಕೊಳ್ಳುತ್ತಿದ್ದಾರೆ. ಇಂದು ಜ್ಯೋತಿಕಾ ಸಾಮಾಜಿಕ ಜಾಲತಾಣಗಳ ದಿಗ್ಗಜ ಎನಿಸಿಕೊಂಡಿರುವ ಇನ್ಸ್ಟಾಗ್ರಾಮ್ ಗೆ ಪ್ರವೇಶವನ್ನು ನೀಡುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ.

ಜ್ಯೋತಿಕಾ ಇಂದು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಖಾತೆಯನ್ನು ತೆರೆದು ಕೆಲವು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಜ್ಯೋತಿಕಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ 1.4 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಜ್ಯೋತಿಕಾ ತಮ್ಮ ಮೊದಲ ಪೋಸ್ಟ್‌ ನಲ್ಲಿ ತಾನು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ನಿಂತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅವರು ಶೇರ್ ಮಾಡಿದ ಫೋಟೋಗೆ ಕೆಲವೇ ಗಂಟೆಗಳಲ್ಲಿ 4 ಲಕ್ಷ ದಾಟಿದ ಲೈಕುಗಳು ಬಂದಿದ್ದು, ಫೋಟೋ ಭರ್ಜರಿಯಾಗಿ ವೈರಲ್ ಆಗಿದೆ. ಜ್ಯೋತಿಕಾ ಅವರ ಅಭಿಮಾನಿಗಳ ಅಭಿಮಾನ ಹೇಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಮೊದಲ ಫೋಟೋ ಶೇರ್ ಮಾಡಿಕೊಂಡ ಜ್ಯೋತಿಕಾ ಅವರು “ಎಲ್ಲರಿಗೂ ನಮಸ್ಕಾರ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾ ಗೆ ಬಂದಿದ್ದೇನೆ,, ನನ್ನ ಲಾಕ್ಡೌನ್ ಸಮಯ ಹಾಗೂ ಅನೇಕ ಪಾಸಿಟಿವ್ ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಾಗಿದೆ” ಎಂದಿದ್ದಾರೆ. ಅಲ್ಲದೇ ನಾಲ್ಕು ಫೋಟೋಗಳನ್ನು ಹಂಚಿಕೊಂಡಿರುವ ಅವರು ಅದರ ಜೊತೆಗೆ ”ಸ್ವಾತಂತ್ರ್ಯ ದಿನದಂದು ಹಿಮಾಲಯದಲ್ಲಿ, ಸುಂದರವಾದ ಕಾಶ್ಮೀರದ ಸರೋವರಗಳು..‌ ಈ ಅದ್ಭುತ ಸಾಹಸಕ್ಕೆ ಜೊತೆಯಾದ ರಾಹುಲ್, ಸಚಿನ್, ರೌಲ್ ಮತ್ತು ಅಶ್ವಿನ್ ಹಾಗೂ ಕಾಶ್ಮೀರ ತಂಡ ಮುಷ್ತಾಕ್ ಎನ್, ರಿಯಾಜ್ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

Leave a Comment