ಇನ್ಮುಂದೆ ಪುಟ್ಟಕ್ಕನ ಮಗಳಾಗಿ ಬರಲಿದ್ದಾಳೆ ‘ಪಾರು’: ಏನೀ ಹೊಸ ಟ್ವಿಸ್ಟ್?? ಇಲ್ಲಿದೆ ಆಸಕ್ತಿಕರ ಉತ್ತರ

0 7

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ದೊಡ್ಡ ಸದ್ದು ಮತ್ತು ಸುದ್ದಿಯನ್ನು ಮಾಡುತ್ತಿವೆ. ಟಾಪ್ ಸೀರಿಯಲ್ ಗಳ ಸ್ಥಾನವನ್ನು ಪಡೆದಿರುವ ಧಾರಾವಾಹಿಗಳಲ್ಲಿ ನಟಿಸುವ ನಟ, ನಟಿಯರು ಮತ್ತು ಸಹಕಲಾವಿದರು ಕೂಡಾ ಸಿನಿಮಾ ತಾರೆಯರಂತೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಸೀರಿಯಲ್ ಗಳ ಸಾಲಿನಲ್ಲಿ ‘ಪಾರು’ ಧಾರಾವಾಹಿಯೂ ಸೇರಿದೆ. ಪಾರು ಧಾರಾವಾಹಿಯು ಮನೆ ಮನೆ ಮಾತಾಗಿದೆ.

ಯಾವುದೇ ಸಿನಿಮಾ ಅಥವಾ ಕಿರುತೆರೆಯ ಹಿನ್ನಲೆ ಇಲ್ಲದೇ ಎಂಟ್ರಿ ಕೊಟ್ಟ ನಟಿ ಮೊಕ್ಷಿತ ಪೈ ಪಾರು ಪಾತ್ರದ ಮೂಲಕ ನಾಡಿನ ಮನೆ ಮನೆ ಮಾತಾಗಿದ್ದಾರೆ.‌ನಟಿ ಮೊಕ್ಷಿತ ಪೈ ಅವರನ್ನು ಜನರು ಪಾರು ಎಂದು ಗುರುತಿಸುವುದು ಅವರ ಪಾತ್ರಕ್ಕೆ ಸಿಕ್ಕಿರುವ ದೊಡ್ಡಮಟ್ಟದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಸೀರಿಯಲ್ ಮೂಲಕ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದು ಕೊಂಡ ನಟಿ ಮೊಕ್ಷಿತ ಪೈ ಸಿನಿಮಾದಲ್ಲಿಯೂ ನಟಿಸುತ್ತಾರೆ ಎನ್ನುವ ವಿಷಯ ಈ ಹಿಂದೆ ಸುದ್ದಿಯಾಗಿತ್ತು.

ನಟ ದುನಿಯಾ ವಿಜಯ್ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಒಂದರಲ್ಲಿ ಮೋಕ್ಷಿತ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ಹಿಂದೊಮ್ಮೆ ಸಾಕಷ್ಟು ಸದ್ದನ್ನು ಮಾಡಿತ್ತು. ಆದರೆ ಆ ಸಿನಿಮಾ ಯಾವುದು? ಅದು ಯಾವಾಗ ? ಪ್ರಾರಂಭವಾಗಲಿದೆ ಎನ್ನುವ ವಿಷಯಗಳು ಅಧಿಕೃತವಾಗಿ ಇನ್ನೂ ಹೊರಬರಬೇಕಿದೆ. ಆದರೆ ಈಗ ಇವೆಲ್ಲವುಗಳ ನಡುವೆಯೇ ಹೊಸ ಸುದ್ದಿಯೊಂದು ಕಿರುತೆರೆಯ ಪ್ರೇಕ್ಷಕರ ಗಮನವನ್ನು ಸೆಳೆದಿದ್ದು, ದೊಡ್ಡ ಕುತೂಹಲವನ್ನು ಮೂಡಿಸಿದೆ.

ಕನ್ನಡ ಕಿರುತೆರೆಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ಪ್ರಸಾರವನ್ನು ಪ್ರಾರಂಭಿಸಿರುವ, ಕನ್ನಡ ಚಿತ್ರರಂಗದ ಜನಪ್ರಿಯ ಹಿರಿಯ ನಟಿ ಉಮಾಶ್ರೀ ಅವರು ಪ್ರಧಾನ ಪಾತ್ರದಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೆಲವೇ ದಿನಗಳಲ್ಲಿ ಅಪಾರವಾದ ಜನಮನ್ನಣೆಯನ್ನು ಪಡೆದುಕೊಂಡು ಟಾಪ್ ಧಾರಾವಾಹಿಗಳ ಸಾಲಿಗೆ ಸೇರ್ಪಡೆಯಾಗಿದೆ. ಈಗ ಹೊಸ ಸುದ್ದಿಯ ಪ್ರಕಾರ ನಟಿ ಮೊಕ್ಷಿತ ಪೈ ಪುಟ್ಟಕ್ಕನ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಏನು ಪಾರು, ಪುಟ್ಟಕ್ಕನ ಮಗಳೇ ??ಈ ವಿಷಯ ಕೇಳಿದ ಕೂಡಲೇ ನಿಮಗೂ ಅಚ್ಚರಿ ಉಂಟಾಗಬಹುದು. ಏಕೆಂದರೆ ಪುಟ್ಟಕ್ಕನಿಗೆ ಇರುವುದು ಮೂರು ಜನ ಹೆಣ್ಣು ಮಕ್ಕಳು. ಹಾಗಾದರೆ ಪಾರು ಖ್ಯಾತಿಯ ಮೋಕ್ಷಿತಾ ಪೈ ಪುಟ್ಟಕ್ಕನ ಮಗಳು ಆಗಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ನಿಮಗೆ ಮೂಡಿರಬಹುದು. ಹಾಗಾದರೆ ಅದಕ್ಕೆ ಉತ್ತರ ಇಲ್ಲಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗಾಗಲೇ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಯಶಸ್ವಿ ಧಾರಾವಾಹಿ ಆಗಿದೆ.

ಕನ್ನಡದಲ್ಲಿ ಕೂಡಾ ಪ್ರಸಾರ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಭರ್ಜರಿ ಯಶಸ್ಸನ್ನು ಪಡೆದುಕೊಂಡಿದೆ. ಈಗ ಈ ಯಶಸ್ಸಿನ ಬೆನ್ನಲ್ಲೇ ತಮಿಳಿನಲ್ಲಿಯೂ ಪುಟ್ಟಕ್ಕನ ಮಕ್ಕಳು ದಾರವಾಹಿಯ ನಿರ್ಮಾಣ ಆರಂಭವಾಗಲಿದೆ. ಇದರಲ್ಲಿ ಮೋಕ್ಷಿತಾ ಪೈ ಅವರು ಪುಟ್ಟಕ್ಕನ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೋಕ್ಷಿತ ಅವರು ತಮಿಳು ಕಿರುತೆರೆಗೆ ಎಂಟ್ರಿ ನೀಡುತ್ತಿದ್ದಾರೆ. ಪಾರು ಪಾತ್ರದಲ್ಲಿ ಕನ್ನಡದ ಜನ ಮನ್ನಣೆಯನ್ನು ಪಡೆದಿರುವ, ಈ ನಟಿಯು ತಮಿಳಿನಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ನಟಿ ಆಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.