ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ಬ್ರಿಟನ್ನಿನ ಮುಂದಿನ ಪ್ರಧಾನಿ??

0 1

ಬ್ರಿಟನ್ ನ ಪ್ರಧಾನಿ ಬೋರಿಸ್ ಜಾನ್ಸನ್ ತನ್ನ ಅಧಿಕಾರದಿಂದ ಕೆಳಗಿಳಿಯುವ ಎಲ್ಲಾ ಅವಕಾಶಗಳು ದಟ್ಟವಾಗಿದ್ದು, ಒಂದು ವೇಳೆ ಅವರು ತಮ್ಮ ಅಧಿಕಾರದಿಂದ ಕೆಳಗಿಳಿದದ್ದೇ ಆದರೆ ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಾಕ್ ಅವರು ಆಯ್ಕೆಯಾಗುವ ಸಾಧ್ಯತೆಗಳು ಇವೆ ಎನ್ನುವ ಮಾತೊಂದು ಕೇಳಿ ಬಂದಿದೆ. ಹೌದು ಬ್ರಿಟನ್ ನ ಪ್ರಧಾನಿಯಾದ ಬೋರಿಸ್ ಜಾನ್ಸನ್ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮದ್ಯದ ಪಾರ್ಟಿ ಮಾಡಿರುವ ವಿ ವಾ ದದಲ್ಲಿ ಸಿಲುಕಿಕೊಂಡು ಈ ವಿಷಯ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಬೋರಿಸ್ ಜಾನ್ಸನ್ ಅವರ ಈ ವಿ ವಾ ದ ದ ಕಾರಣದಿಂದಾಗಿ ಅವರನ್ನು ಅಧಿಕಾರದಿಂದ ಕೆಳಗೆ ಉಳಿಯುವಂತೆ ಅವರದೇ ಪಕ್ಷದವರು ಒತ್ತಡವನ್ನು ಹೇರುತ್ತಿದ್ದಾರೆ ಎನ್ನಲಾಗಿದೆ. ಬೋರಿಸ್ ಅವರು 2020 ಮೇ ನಲ್ಲಿ ಇಂತಹುದೊಂದು ವಿ ವಾ ದಕ್ಕೆ ಸಿಲುಕಿದ್ದರು. ಇದಲ್ಲದೇ ಅವರು 2021 ರಲ್ಲೂ ಬ್ರಿಟನ್ ನ ರಾಜಕುಮಾರ ಫಿಲಿಪ್ ಅವರ ಅಂತ್ಯ ಕ್ರಿಯೆಗೆ ಮುನ್ನ ಕೂಡಾ ಮದ್ಯದ ಪಾರ್ಟಿ ನಡೆಸಿದ್ದರೆನ್ನುವ ಆ ರೋ ಪವೊಂದು ಕೇಳಿ ಬಂದಿದೆ‌.

ಪ್ರಸ್ತುತ ಬೋರಿಸ್ ಜಾನ್ಸನ್ ಅವರಿಗೆ ಬೇರೆ ಬೇರೆ ಕಡೆಗಳಿಂದ ಅಧಿಕಾರದಿಂದ ಕೆಳಗೆ ಇಳಿಯುವಂತೆ ಒತ್ತಡ ಗಳು ಬರುತ್ತಿವೆ ಎನ್ನಲಾಗಿದೆ. ಒಂದು ವೇಳೆ ಅವರ ರಾಜೀನಾಮೆ ಪಕ್ಕಾ ಆದರೆ ಮುಂದಿನ ಪ್ರಧಾ‌ನಿಯಾಗುವವರ ಹೆಸರುಗಳಲ್ಲಿ ರಿಷಿ ಸುನಾಕ್ ಅವರ ಹೆಸರು ಮೊದಲನೆಯ ಸ್ಥಾನದಲ್ಲಿದೆ ಎನ್ನಲಾಗಿದೆ. ಇನ್ನು ಈ ರಿಷಿ ಸುನಾಕ್ ಅವರು ಇನ್ಫೋಸಿಸ್ ನ ಸಂಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ಎನ್ನುವುದು ವಿಶೇಷ.

ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿಯ ಮಗಳಾದ ಅಕ್ಷತಾ ಮೂರ್ತಿಯವರನ್ನು ರಿಷಿ ಅವರು ವಿವಾಹವಾಗಿದ್ದಾರೆ. ಪ್ರಸ್ತುತ ಅವರ ಬ್ರಿಟನ್ ನ ಆಡಳಿತಾರೂಢ ಪಕ್ಷವಾಗಿರುವ ಕನ್ಸರ್ವೇಟಿವ್ ಪಕ್ಷದ ಪ್ರಮುಖ ಹಾಗೂ ಪ್ರಭಾವಿ ಮುಖಂಡ ಕೂಡಾ ಹೌದು. ಇವರೇನಾದರೂ ಪ್ರಧಾ‌ನಿಯಾದರೆ ಬ್ರಿಟನ್ ನಲ್ಲಿ ಭಾರತ ಮೂಲದ ಮೊಟ್ಟ ಮೊದಲ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

Leave A Reply

Your email address will not be published.