ಇನ್ನೆರಡು ದಿನಗಳಲ್ಲೇ ಮುಚ್ಚಲಿದೆ ಕಾಣಿಪಾಕಂ ವಿನಾಯಕನ ಮಂದಿರ: ಇನ್ನು ವಿನಾಯಕನ ದರ್ಶನ ಗಣೇಶ ಚತುರ್ಥಿಗೆ!!

Entertainment Featured-Articles News

ಸ್ಯಾಂಡಲ್ವುಡ್ ನಲ್ಲಿ ರೋರಿಂಗ್ ಸ್ಟಾರ್ ಎನ್ನುವ ಖ್ಯಾತಿಯನ್ನು ಪಡೆದಿರುವ ಸ್ಟಾರ್ ನಟ ಶ್ರೀಮುರಳಿ ಅವರಿಗೆ ಜಿಮ್ ಮಾಡುವ ವೇಳೆಯಲ್ಲಿ ಬೆನ್ನು ನೋವು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ನಟನಿಗೆ ಅವರ ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ಪಡೆಯಲು ಸಲಹೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಶ್ರೀಮುರಳಿ ಅವರು ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ಯಾಂಡಲ್ವುಡ್ ನಟ ಶ್ರೀಮುರಳಿ ಅವರು ಸಹಾ ತಮ್ಮ ಫಿಟ್ನೆಸ್ ಹಾಗೂ ಕಟ್ಟು ಮಸ್ತಾದ ದೇಹದಿಂದಲೇ ಸಾಕಷ್ಟು ಗಮನವನ್ನು ಸೆಳೆಯುವ ಜೊತೆಗೆ ಅಭಿಮಾನಿಗಳ ಮನಸ್ಸನ್ನು ಸಹಾ ಗೆದ್ದಿದ್ದಾರೆ.

ನಟ ಶ್ರೀ ಮುರಳಿ ಅವರು ತಮ್ಮ ಫಿಟ್ನೆಸ್ ಕಡೆಗೆ ವಿಶೇಷವಾದ ಗಮನವನ್ನು ನೀಡುತ್ತಾರೆ. ಪ್ರತಿನಿತ್ಯ ನಿಯಮಿತವಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುವ ನಟರ ಸಾಲಿನಲ್ಲಿ ಶ್ರೀ ಮುರಳಿ ಅವರು ಕೂಡಾ ಇದ್ದಾರೆ. ಅವರು ಪ್ರಸ್ತುತ ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಆಗುತ್ತಿರುವ ಬಘೀರಾ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಶ್ರೀಮುರಳಿ ಅವರು ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ.‌ ಆದ ಕಾರಣ ಅವರು ಸ್ವಲ್ಪ ಹೆಚ್ಚಿಗೆ ವರ್ಕೌಟ್ ಕಡೆಗೆ ಗಮನವನ್ನು ನೀಡಿದ್ದಾರೆ. ಹೆಚ್ಚು ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಿದ್ದಾರೆ.

ಹೀಗೆ ಜಿಮ್ ನಲ್ಲಿ ಸಮಯವನ್ನು ಕಳೆಯುವಾಗಲೇ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ನಿನ್ನೆ ಅವರು ನಟ ಭಯಂಕರ ಸಿನಿಮಾದ ಆಡಿಯೋ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯಲ್ಲಿ ನಡೆದಾಡಲು ಅವರು ಕಷ್ಟಪಡುತ್ತಿದ್ದುದು ಕಂಡಿ ಬಂದಿತ್ತೆನ್ನಲಾಗಿದ್ದು, ಆಗಲೇ ಅವರಿಗೆ ಬೆನ್ನು ನೋವು ಕಾಡಿರುವ ವಿಚಾರ ಹೊರಗೆ ಬಂದಿದೆ. ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತ್ತು ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಅಲ್ಲದೇ ಎರಡೂ ದಿನಗಳ ಬಳಿಕವೂ ಅದು ಕಡಿಮೆಯಾಗಿಲ್ಲ ಎಂದಿದ್ದಾರೆ.

ನೋವು ಹೆಚ್ಚಾದ ಕಾರಣ ಫ್ಯಾಮಿಲಿ ಡಾಕ್ಟರ್ ಅವರನ್ನು ಭೇಟಿ ಮಾಡಿದೆ. ಓಡಾಡಲು ಸ್ವಲ್ಪ ತೊಂದರೆಯಾಗಿದೆ, ಆದ್ದರಿಂದಲೇ ವೈದ್ಯರು ಸ್ವಲ್ಪ ದಿನ ವಿಶ್ರಾಂತಿಯನ್ನು ಪಡೆಯಲು ಸಲಹೆಯನ್ನು ನೀಡಿದ್ದಾರೆ ಎಂದಿರುವ ಶ್ರೀಮುರಳಿ ಅವರು ಅಭಿಮಾನಿಗಳು ಈ ವಿಚಾರವಾಗಿ ಅಭಿಮಾನಿಗಳು ಗಾಬರಿ ಪಡುವ ಅವಶ್ಯಕತೆ ಇಲ್ಲ ಎನ್ನುವ ಮಾತನ್ನು ಸಹಾ ಅವರು ಹೇಳುವ ಮೂಲಕ, ಅಭಿಮಾನಿಗಳು ಆ ತಂ ಕ ಪಡಬಾರದು ಎನ್ನುವುದನ್ನು ತಿಳಿಸಿದ್ದಾರೆ.

Leave a Reply

Your email address will not be published.