ಇನ್ನೂ ಹೆಚ್ಚಲಿದೆ ಕೊರೊನಾ ಆತಂಕ: ಕೋಲಾರದಲ್ಲಿ ಕೋಡಿ ಮಠದ ಶ್ರೀಗಳ ಭವಿಷ್ಯವಾಣಿ

Written by Soma Shekar

Published on:

---Join Our Channel---

ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀ ಗಳಾದ ಡಾಕ್ಟರ್ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಆದಾಗ ದೇಶದ ಹಾಗೂ ರಾಜ್ಯದ ಪರಿಸ್ಥಿತಿಗಳ ಕುರಿತಾಗಿ, ರಾಜ್ಯ ರಾಜಕೀಯ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿಯುತ್ತಾರೆ. ಬಹಳಷ್ಟು ಜನ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯವಾಣಿ ಸತ್ಯವಾಗುತ್ತದೆ ಎಂದು ನಂಬಿದ್ದಾರೆ. ಕೊರೋನಾ ವಿಷಯದಲ್ಲಿ ಕೂಡಾ ಶ್ರೀಗಳು ಕಾಲಕಾಲಕ್ಕೆ ಭವಿಷ್ಯವಾಣಿಯನ್ನು ನುಡಿಯುತ್ತಾ ಬಂದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕಳೆದ ವರ್ಷ ಮಳೆ ಹೆಚ್ಚುತ್ತದೆ, ಪ್ರವಾಹ ಉಂಟಾಗುತ್ತದೆ ಎನ್ನುವ ಸೂಚನೆ ಸಹಾ ನೀಡಿದ್ದರು. ಇನ್ನು ಅವರು ಇದೀಗ ಕೋಲಾರ ತಾಲೂಕಿನ ಲಕ್ಷ್ಮಿಸಾಗರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶ್ರೀಗಳು ಕೊರೊನಾ ಕುರಿತಾದ ಭವಿಷ್ಯವಾಣಿ ಒಂದನ್ನು ನಡೆದಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ..

ಅವರು ಈ ವೇಳೆ ಬರುವ ದಿನಗಳಲ್ಲಿ ಕೊರೊನ ಇನ್ನೂ ಹೆಚ್ಚಾಗಲಿದೆ, ಆದರೆ ದೈವಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎನ್ನುವ ಭರವಸೆಯ ಮಾತುಗಳನ್ನು ಆಡಿದ್ದಾರೆ. ಈಗ ಅಶುಭ ನುಡಿಯುವುದು ಬೇಡ. ಕುಂಭದಲ್ಲಿ ಗುರುಗ್ರಹ ಇದ್ದು, ಕೆರೆಕ ಟ್ಟೆಗಳು ತುಂಬುತ್ತವೆ, ಅಲ್ಲದೇ ಜಲ ಗಂಡಾಂತರವು ಇನ್ನೂ ಇದೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ನೂತನ ಸಿಎಂ ಅವರ ಕುರಿತಾಗಿ ಮಾತನಾಡುತ್ತಾ, ಈಗ ಏನನ್ನು ಅಶುಭ ನುಡಿಯಬಾರದು. ಕಾರ್ತಿಕಮಾಸ ಮುಗಿದ ನಂತರ ಹೇಳುತ್ತೇನೆಂದು ಬಹಳ ಮಾರ್ಮಿಕವಾದ ಮಾತುಗಳನ್ನು ಶ್ರೀಗಳು ಆಡಿದ್ದಾರೆ.

ಕೆಲವು ದಿನಗಳ ಹಿಂದೆ ಸಹಾ ಅವರು ಸೆಪ್ಟೆಂಬರ್ ನಿಂದ ಸಂಕ್ರಾಂತಿಯ ವೇಳೆಗೆ ಬಹುದೊಡ್ಡ ಗಂಡಾಂತರ ಒಂದು ಕಾದಿದೆ ಎಂದು ಹೇಳಿದ್ದರು. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ವಿಪ್ಲವಗಳು ಕೂಡಾ ಸುಖಾಂತ್ಯವನ್ನು ಕಾಣಲಿದೆ ಎನ್ನುವ ಭವಿಷ್ಯವಾಣಿಯನ್ನು ಅವರು ನುಡಿದಿದ್ದರು. ಆಗಸ್ಟ್ ಮೂರನೇ ವಾರದಿಂದ ರೋಗರುಜಿನಗಳು ಹೆಚ್ಚಾಗಲಿದ್ದು, ಈ ಪರಿಸ್ಥಿತಿ ಜನವರಿ ವರೆಗೂ ಮುಂದುವರಿಯುತ್ತದೆ ಎಂದು ಅವರು ಭವಿಷ್ಯವಾಣಿಯಲ್ಲಿ ಹೇಳಿದ್ದರು.

Leave a Comment