ಇನ್ನೂ ತಗ್ಗದ ಶ್ರೀವಲ್ಲಿ ಕ್ರೇಜ್, ರಸ್ತೆಯಲ್ಲೇ ಹುಚ್ಚೆದ್ದು ಕುಣಿದ ಯುವದಂಡು: ವೈರಲ್ ವೀಡಿಯೋ ನೋಡಿ!

0 1

ಮದುವೆ ದಿಬ್ಬಣ ಬರುವಾಗ ವರನ ಕಡೆಯವರು ಭರ್ಜರಿಯಾಗಿ ಡಾನ್ಸ್ ಮಾಡುತ್ತಾನೆ ಬರುವ ಸಂಪ್ರದಾಯವು ಭಾರತದ ಹಲವು ಭಾಗಗಗಳಲ್ಲಿ ಕಂಡು ಬರುತ್ತದೆ. ಇದೊಂದು ದೊಡ್ಡ ಸಂಭ್ರಮದ ಕ್ಷಣವೂ ಸಹಾ ಆಗಿರುತ್ತದೆ. ಮದುವೆ ದಿಬ್ಬಣದಲ್ಲಿ ಮೈ ಮರೆತು ಕುಣಿಯುವ ಮಂದಿ, ಈ ಸುಂದರ ಕ್ಷಣದ ಸಂಪೂರ್ಣ ಆನಂದವನ್ನು ಅನುಭವಿಸುತ್ತಾ ಎಂಜಾಯ್ ಮಾಡುವುದನ್ನು ನೋಡಿದಾಗ ಅವರ ಖುಷಿ ನಮಗೂ ಸಹಾ ಒಂದು ಸಂತೋಷವನ್ನು ನೀಡುತ್ತದೆ. ಸೂಪರ್ ಹಿಟ್ ಸಿನಿಮಾಗಳ ಹಾಡಿಗೆ ಕುಣಿಯುವ ಮದುವೆ ಮಂದಿಯ ಸಂಭ್ರಮ ಮುಗಿಲು ಮುಟ್ಟುವಂತೆ ಕಾಣುತ್ತದೆ.

ಆದರೆ ಕೆಲವು ಸಂದರ್ಭಗಳಲ್ಲಿ ಮದುವೆ ದಿಬ್ಬಣ ಅಥವಾ ಮೆರವಣಿಗೆಯಲ್ಲಿ ಬರುವ ಮಂದಿ ಕೆಲವೊಮ್ಮೆ ಮಾಡುವ ಡ್ಯಾನ್ಸ್ ಗಳು ನೋಡುಗರಿಗೆ ಮನರಂಜನೆ ನೀಡುವುದು ಮಾತ್ರವೇ ಅಲ್ಲದೇ ನೋಡುಗರಿಗೆ ನಗು ತಡೆಯಲಾಗುವುದಿಲ್ಲ. ನಕ್ಕು ನಕ್ಕು ಸುಸ್ತಾಗುತ್ತಾರೆ ಜನ. ಸೋಶಿಯಲ್ ಮೀಡಿಯಾಗಳ ಪ್ರಭಾವ ಹೆಚ್ಚಾಗಿರುವ ಈ ಕಾಲದಲ್ಲಿ ಇಂತಹ ಹಾಸ್ಯದ ಸನ್ನಿವೇಶಗಳ ವೀಡಿಯೋಗಳು ಬಹಳ ಬೇಗ ವೈರಲ್ ಆಗುತ್ತದೆ. ಈಗ ಅಂತದ್ದೇ ಒಂದು ವೀಡಿಯೋ ಸಖತ್ ಸದ್ದು ಮಾಡುತ್ತಿದೆ.

ಟಾಲಿವುಡ್ ಹೀರೋ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಹೊಂದಿ ದೊಡ್ಡ ಸದ್ದು ಮಾಡಿದ್ದು ಎಲ್ಲರಿಗೂ ತಿಳಿದಿದೆ. ಈ ಸಿನಿಮಾದ ಹಾಡುಗಳು ಹಿಂದಿ ಭಾಷೆ ಪ್ರಚಲಿತ ಇರುವ ಕಡೆಗಳಲ್ಲಿ ದೊಡ್ಡ ಜನಪ್ರಿಯತೆ ಪಡೆದುಕೊಂಡಿದೆ. ಈ ಹಾಡುಗಳಿಗೆ ಜನರು ಹೆಜ್ಜೆ ಹಾಕುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗ ಮದುವೆ ಮೆರವಣಿಗೆಯಲ್ಲಿ ಈ ಹಾಡಿಗೆ ಕುಣಿದ ವೀಡಿಯೋ ಒಂದು ವೈರಲ್ ಆಗಿದೆ.

ಹೌದು, ಮದುವೆ ಮೆರವಣಿಗೆಯಲ್ಲಿ ಕುಣಿಯುತ್ತಿರುವ ಮಂದಿ ಒಂದೇ ಸಮಯದಲ್ಲಿ ರಸ್ತೆ ಮಧ್ಯೆ ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಎಲ್ಲರೂ ಚಿತ್ರ ವಿಚಿತ್ರವಾಗಿ ಹೆಜ್ಜೆ ಹಾಕುತ್ತಿದ್ದಾರೆ, ಕುಣಿದು ಕುಣಿದು ಸುಸ್ತಾದರೂ ಸಹಾ ಡಾನ್ಸ್ ನಿಲ್ಲಿಸಲು ಯಾರೂ ಸಿದ್ಧರಿಲ್ಲ. ರಸ್ತೆಯಲ್ಲಿ ಗುಂಪಾಗಿ ಎಲ್ಲರೂ ಕುಣಿಯುವ ಪರಿ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ ನೆಟ್ಟಿಗರು. ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡಿ ವ್ಯಂಗ್ಯ ಮಾಡುತ್ತಿದ್ದಾರೆ. ವೀಡಿಯೋ ನೋಡಿದ ಮಂದಿ ಇದೊಂದು ಮದುವೆ ದಿಬ್ಬಣ ಎಂದಿದ್ದಾರೆ.

Leave A Reply

Your email address will not be published.